ಸುಸೂತ್ರವಾಗಿ ಮುಗಿಯಿತು ಎಸ್ಎಸ್ಎಲ್​ಸಿ ಪರೀಕ್ಷೆ; ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ, ಫಲಿತಾಂಶ ಯಾವಾಗ?

| Updated By: ಸಾಧು ಶ್ರೀನಾಥ್​

Updated on: Apr 11, 2022 | 7:26 PM

Education Minister BC Nagesh: ಏಪ್ರಿಲ್ 12 ರಿಂದ ಕೀ ಆನ್ಸರ್ ಹಾಗೂ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ‌ ನೀಡಲಾಗುತ್ತದೆ -ಸಚಿವ ಬಿ ಸಿ ನಾಗೇಶ್

ಸುಸೂತ್ರವಾಗಿ ಮುಗಿಯಿತು ಎಸ್ಎಸ್ಎಲ್​ಸಿ ಪರೀಕ್ಷೆ; ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ, ಫಲಿತಾಂಶ ಯಾವಾಗ?
ಸುಸೂತ್ರವಾಗಿ ಮುಗಿಯಿತು ಎಸ್ಎಸ್ಎಲ್​ಸಿ ಪರೀಕ್ಷೆ; ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ, ಫಲಿತಾಂಶ ಯಾವಾಗ? ಪೂರಕ ಪರೀಕ್ಷೆ ಯಾವಾಗ?
Follow us on

ವಿಜಯಪುರ: ಈ ಬಾರಿಯ ಎಸ್ಎಸ್ಎಲ್​ಸಿ ಪರೀಕ್ಷೆಗಳು (SSLC 2022 Exam) ಸುಸೂತ್ರವಾಗಿ ಮುಗಿಯಿತು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಹಿಜಾಬ್​ನಿಂದ ಹಿಡಿದು, ಕೊರೊನಾ ಸುಳಿ ಮಧ್ಯೆ ’ಅಗ್ನಿ’ ಪರೀಕ್ಷೆಗಳೆಲ್ಲವೂ ಸದ್ಯ ಮುಗಿದಿದೆ ಎಂದು ಸಚಿವ ನಾಗೇಶ್ (Education Minister BC Nagesh) ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಎರಡು ವರ್ಷಗಳಿಂದ ಇನ್ನಿಲ್ಲದಂತೆ ಬಾಧಿಸಿದ ಕೋವಿಡ್​ಗೆ ಸದ್ಯ ಬ್ರೇಕ್ ಬಿದ್ದಿದೆ. ಪರೀಕ್ಷಾ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿಗಳಲ್ಲೂ ಕೋವಿಡ್ ಪ್ರಕರಣ ಕಂಡು ಬಂದಿಲ್ಲ ಎಂಬ ಸಮಾಧಾನದ ವಿಚಾರವನ್ನು ಹೊರಹಾಕಿದ್ದಾರೆ. ಇನ್ನು, ಸಮವಸ್ತ್ರ ವಿಚಾರದಲ್ಲಿ ಯಾವುದೇ ಗೊಂದಲ‌ ಉಂಟಾಗಿಲ್ಲ. ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ (SSLC 2022 result).

ಮೊದಲ ಬಾರಿಗೆ ಪರೀಕ್ಷಾ ಹಾಜರಾತಿ ಪ್ರಮಾಣ 98% ಗಿಂತ ಹೆಚ್ಚಿದೆ!
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದು, ಮಾರ್ಚ್ 28 ರಂದು ಆರಂಭವಾದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ರಾಜ್ಯಾದ್ಯಂತ ಸುಸೂತ್ರವಾಗಿ ಮುಕ್ತಾಯವಾಗಿವೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಅಕ್ರಮ ವರದಿಯಾಗಿದೆ. ಆ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಮೊದಲ ಬಾರಿಗೆ ಪರೀಕ್ಷಾ ಹಾಜರಾತಿ ಪ್ರಮಾಣ 98% ಗಿಂತ ಹೆಚ್ಚಿದೆ! ಎಂದು ಅರು ಸಂತಸ ವ್ಯಕ್ತಪಡಿಸಿದರು.

ಜೂನ್ 4 ನೇ ವಾರದಲ್ಲಿ ಪೂರಕ ಪರೀಕ್ಷೆ:
ಏಪ್ರಿಲ್ 12 ರಿಂದ ಕೀ ಆನ್ಸರ್ ಹಾಗೂ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ‌ ನೀಡಲಾಗುತ್ತದೆ ಎಂದ ಸಚಿವ ಬಿ ಸಿ ನಾಗೇಶ್ ಅವರು ಜೂನ್ 4 ನೇ ವಾರದಲ್ಲಿ ಪೂರಕ ಪರೀಕ್ಷೆ (SSLC supplementary exams) ನಡೆಯಲಿವೆ ಎಂದೂ ತಿಳಿಸಿದರು.