
ಟಿಪ್ಪು ಸುಲ್ತಾನ್ ಬಗ್ಗೆ ಬಿಜೆಪಿ ಎಮ್ಮೆಲ್ಸಿ ಹೆಚ್.ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಭಾರತೀಯ ಜನತಾ ಪಕ್ಷ ಘಟಕ
‘‘ಟಿಪ್ಪು ಸುಲ್ತಾನ್ ಮತಾಂಧ ಎಂಬುದಕ್ಕೆ ಬಿಜೆಪಿ ಬದ್ಧವಾಗಿದೆ, ಅವನು ಉತ್ತಮ ಆಡಳಿತಗಾರನಾಗಿದ್ದ ಎಂದು ಬಿಜೆಪಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ವಿಶ್ವನಾಥ್ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಳ್ಳಲು ಬಯಸುತ್ತದೆ’ ಎಂದು ಕಾರ್ಣಿಕ್ ಹೇಳಿದ್ದಾರೆ.
ವಿಶ್ವನಾಥ್ ಹೇಳಿಕೆ ನಿಸ್ಸಂದೇಹವಾಗಿ ಪಕ್ಷದ ನಾಯಕರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಆ ಹೇಳಿಕೆಯಿಂದ ಆಗಿರುವ ಹಾನಿಗೆ ತ್ಯಾಪೆ ಹಾಕುವ ಪ್ರಯತ್ನ ಹಿರಿಯ ನಾಯಕರು ಮಾಡುತ್ತಿರುವರಾದರೂ ಹೊಸಬಟ್ಟೆಗೆ ಹಳೆಬಟ್ಟೆಯ ತ್ಯಾಪೆ ಸರಿಹೋಗುತ್ತಿಲ್ಲ.