ಸೈಟ್, ಚಿನ್ನ, ಬೆಳ್ಳಿ, ನಗದು… ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ! Photos
ಬೆಂಗಳೂರು: ಅಧಿಕಾರಿಗಳ ಮೇಲೆ ನಡೆದ ACB ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕೊಳಚೆ ನಿರ್ಮೂಲನಾ ಅಭಿವೃದ್ದಿ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ MS ನಿರಂಜನ್ ಬಾಬುರ ಮೇಲೆ ದಾಳಿ ನಡೆಸಿದ ACB ಅಧಿಕಾರಿಗಳಿಗೆ ನಿರಂಜನ್ ಬಾಬು ತುಮಕೂರಿನ ಮಾರುತಿ ನಗರದಲ್ಲಿ ಒಂದು ಬಂಗಲೆ ಹಾಗೂ ಜಿಲ್ಲೆಯಲ್ಲಿ ವಿವಿಧ ಕಡೆ 5 ಮನೆಗಳನ್ನ ಹೊಂದಿರುವುದು ಪತ್ತೆಯಾಗಿದೆ. ಜೊತೆಗೆ, ನಿರಂಜನ್ ಬಾಬು ತುಮಕೂರು ನಗರ ಹಾಗೂ ಜಿಲ್ಲೆಯಲ್ಲಿ ಒಟ್ಟು 8 ನಿವೇಶನ ಹೊಂದಿದ್ದಾರೆ ಎಂಬ […]

ಬೆಂಗಳೂರು: ಅಧಿಕಾರಿಗಳ ಮೇಲೆ ನಡೆದ ACB ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕೊಳಚೆ ನಿರ್ಮೂಲನಾ ಅಭಿವೃದ್ದಿ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ MS ನಿರಂಜನ್ ಬಾಬುರ ಮೇಲೆ ದಾಳಿ ನಡೆಸಿದ ACB ಅಧಿಕಾರಿಗಳಿಗೆ ನಿರಂಜನ್ ಬಾಬು ತುಮಕೂರಿನ ಮಾರುತಿ ನಗರದಲ್ಲಿ ಒಂದು ಬಂಗಲೆ ಹಾಗೂ ಜಿಲ್ಲೆಯಲ್ಲಿ ವಿವಿಧ ಕಡೆ 5 ಮನೆಗಳನ್ನ ಹೊಂದಿರುವುದು ಪತ್ತೆಯಾಗಿದೆ. ಜೊತೆಗೆ, ನಿರಂಜನ್ ಬಾಬು ತುಮಕೂರು ನಗರ ಹಾಗೂ ಜಿಲ್ಲೆಯಲ್ಲಿ ಒಟ್ಟು 8 ನಿವೇಶನ ಹೊಂದಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದಲ್ಲದೆ, ಬೆಂಗಳೂರಿನ ದೇವನಹಳ್ಳಿಯಲ್ಲಿ ಒಂದು ಸೈಟ್, 1.5 ಕೆಜಿ ಚಿನ್ನ, 3.5 ಕೆಜಿ ಬೆಳ್ಳಿ, 2 ಕಾರು ಮತ್ತು 5 ಲಕ್ಷ ನಗದು ಸಹ ಪತ್ತೆಯಾಗಿದೆ. ಜೊತೆಗೆ, ವಿವಿಧ ಬ್ಯಾಂಕ್ನಲ್ಲಿ 20 ಲಕ್ಷ ರೂಪಾಯಿ ನಗದು ಮತ್ತು 54 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೊಗಿ ವಸ್ತುಗಳು ಸಹ ದೊರೆತಿದೆ.
ಇನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ ನಾಗರಾಜ್ರ ಮೇಲೆ ಸಹ ದಾಳಿ ನಡೆಸಿದ ಅಧಿಕಾರಿಗಳಿಗೆ ಮೈಸೂರು ನಗರದಲ್ಲಿ 2 ಮನೆ ಹಾಗೂ 5 ಅಂತಸ್ತಿನ ವಾಣಿಜ್ಯ ಕಾಂಪ್ಲೆಕ್ಸ್, ಬೆಂಗಳೂರು ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟ್ ನಾಗರಾಜ್ ಹೊಂದಿರುವುದರ ಮಾಹಿತಿ ದೊರೆತಿದೆ.
ಇದಲ್ಲದೆ, ಮೈಸೂರು ನಗರದಲ್ಲಿ 4 ನಿವೇಶನ ಹಾಗೂ ಬೆಂಗಳೂರು ನಗರದಲ್ಲಿ 1 ನಿವೇಶನ ಹೊಂದ್ದಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, 2 ಕೆಜಿ ಚಿನ್ನ, 11 ಕೆಜಿ ಬೆಳ್ಳಿ, 2 ಕಾರು, 9 ಲಕ್ಷ ನಗದು , 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸಹ ಪತ್ತೆಯಾಗಿದೆ.




