ಕೋವಿಡ್ ವಾರ್ಡ್ ಸ್ಥಾಪಿಸಲು 32.30 ಲಕ್ಷ ಕೊಡುಗೆ ಕೊಟ್ರು ಭೂಪಳಾಪುರ ದಂಪತಿ
ಧಾರವಾಡ: ನ್ಯೂಯಾರ್ಕ್ನಲ್ಲಿ ವಾಸವಾಗಿರುವ ಧಾರವಾಡ ಮೂಲದ ರವಿ ಮತ್ತು ಜಯಾ ದಂಪತಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡನ್ನು ಸ್ಥಾಪಿಸಲು 32.30 ಲಕ್ಷ ರೂಪಾಯಿ ಕೊಡುಗೆ ನೀಡಿದ್ದಾರೆ. ಧಾರವಾಡದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಕವನ್ ದೇಶಪಾಂಡೆ, ಈ ಕೋವಿಡ್ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದ್ರು. ಭೂಪಳಾಪುರ ದಂಪತಿ ಧಾರವಾಡಕ್ಕೆ ನೀಡಿರೋ ಕೊಡುಗೆ ಅಪಾರ. ಧಾರವಾಡದ ಜನತೆಯ ಸೇವೆಯಲ್ಲಿ […]

ಧಾರವಾಡ: ನ್ಯೂಯಾರ್ಕ್ನಲ್ಲಿ ವಾಸವಾಗಿರುವ ಧಾರವಾಡ ಮೂಲದ ರವಿ ಮತ್ತು ಜಯಾ ದಂಪತಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡನ್ನು ಸ್ಥಾಪಿಸಲು 32.30 ಲಕ್ಷ ರೂಪಾಯಿ ಕೊಡುಗೆ ನೀಡಿದ್ದಾರೆ.
ಧಾರವಾಡದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಕವನ್ ದೇಶಪಾಂಡೆ, ಈ ಕೋವಿಡ್ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದ್ರು.
ಭೂಪಳಾಪುರ ದಂಪತಿ ಧಾರವಾಡಕ್ಕೆ ನೀಡಿರೋ ಕೊಡುಗೆ ಅಪಾರ. ಧಾರವಾಡದ ಜನತೆಯ ಸೇವೆಯಲ್ಲಿ ಇವರು ಸದಾ ಸಿದ್ಧರಾಗಿದ್ದಾರೆ. ಈ ಹಿಂದೆ ಕೂಡಾ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.




