ಮೊಹರಂ ಮೆರವಣಿಗೆಗೆ ಸುಪ್ರೀಂ ಕೋರ್ಟ್ ನಕಾರ
ದೆಹಲಿ: ಮುಸ್ಲಿಂಮರ ಪವಿತ್ರ ಹಾಗೂ ಮಹಮದಿಯರ ಮೊದಲ ತಿಂಗಳು, ಅಂದ್ರೆ ಹೊಸ ವರ್ಷವಾಗಿ ಆಚರಿಸಲ್ಪಡುವ ಮೊಹರಂ ಹಬ್ಬದ ಮೊಹರಂ ಮಾಸ ಶುರುವಾಗಿದೆ. ಆದರೆ ಈ ಬಾರಿ ಮೊಹರಂ ಮೆರವಣಿಗೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ. ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಭಾವೈಕ್ಯತೆಯಿಂದ ಆಚರಿಸುತ್ತಾರೆ. ಹಜರತ್ ಹಸೇನ್, ಹುಸೇನರ ಪುಣ್ಯ ಸ್ಮರಣೆಗಾಗಿ ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತೆ. ಈ ವೇಳೆ ಹಿಂದೂ, ಮುಸ್ಲಿಮರು ನಂದಿ ಕೋಲು ಮಾದರಿಯಲ್ಲಿ ಇರುವ ದೇವರನ್ನು(ಪಂಜಾ) ಎತ್ತಿ […]
ದೆಹಲಿ: ಮುಸ್ಲಿಂಮರ ಪವಿತ್ರ ಹಾಗೂ ಮಹಮದಿಯರ ಮೊದಲ ತಿಂಗಳು, ಅಂದ್ರೆ ಹೊಸ ವರ್ಷವಾಗಿ ಆಚರಿಸಲ್ಪಡುವ ಮೊಹರಂ ಹಬ್ಬದ ಮೊಹರಂ ಮಾಸ ಶುರುವಾಗಿದೆ. ಆದರೆ ಈ ಬಾರಿ ಮೊಹರಂ ಮೆರವಣಿಗೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.
ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಭಾವೈಕ್ಯತೆಯಿಂದ ಆಚರಿಸುತ್ತಾರೆ. ಹಜರತ್ ಹಸೇನ್, ಹುಸೇನರ ಪುಣ್ಯ ಸ್ಮರಣೆಗಾಗಿ ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತೆ. ಈ ವೇಳೆ ಹಿಂದೂ, ಮುಸ್ಲಿಮರು ನಂದಿ ಕೋಲು ಮಾದರಿಯಲ್ಲಿ ಇರುವ ದೇವರನ್ನು(ಪಂಜಾ) ಎತ್ತಿ ಕುಣಿದು ಕುಪ್ಪಳಿಸುತ್ತಾರೆ. ಮೆರವಣಿಗೆ ಮಾಡಿ ವಿಜ್ರಂಭಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ಮೊಹರಂ ಮೆರವಣಿಗೆಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.