ಇಂದು ಜಿಎಸ್‌ಟಿ ಮಂಡಳಿಯ ಸಭೆ, ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಾ ಜಿಎಸ್‌ಟಿ ಬಾಕಿ ಹಣ?
ದೆಹಲಿ: ಇಂದು ಮಹತ್ವದ ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿಎಸ್‌ಟಿ ನಷ್ಟದ ಪರಿಹಾರದ ಹಣವನ್ನು ನೀಡಿಲ್ಲ. ಈ ವಿಷಯದ ಬಗ್ಗೆ ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಟಫ್ ಟಾಕ್ ಫೈಟ್ ನಡೆಯುವ ನಿರೀಕ್ಷೆ ಇದೆ. ಮತ್ತೊಂದೆಡೆ ಬೈಕ್ ಪ್ರಿಯರು ಬೈಕ್‌ಗಳ ಮೇಲೆ ಜಿಎಸ್‌ಟಿ ಕಡಿತದ ನಿರೀಕ್ಷೆಯಲ್ಲಿದ್ದಾರೆ. ಜಿಎಸ್‌ಟಿ ವಿಚಾರವಾಗಿ ನಡೆಯುತ್ತಾ ಟಾಕ್ ಫೈಟ್? ತೆರಿಗೆ ದರಗಳನ್ನು ನಿರ್ಧರಿಸುವ […]
ದೆಹಲಿ: ಇಂದು ಮಹತ್ವದ ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿಎಸ್‌ಟಿ ನಷ್ಟದ ಪರಿಹಾರದ ಹಣವನ್ನು ನೀಡಿಲ್ಲ. ಈ ವಿಷಯದ ಬಗ್ಗೆ ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಟಫ್ ಟಾಕ್ ಫೈಟ್ ನಡೆಯುವ ನಿರೀಕ್ಷೆ ಇದೆ. ಮತ್ತೊಂದೆಡೆ ಬೈಕ್ ಪ್ರಿಯರು ಬೈಕ್‌ಗಳ ಮೇಲೆ ಜಿಎಸ್‌ಟಿ ಕಡಿತದ ನಿರೀಕ್ಷೆಯಲ್ಲಿದ್ದಾರೆ.
ಜಿಎಸ್‌ಟಿ ವಿಚಾರವಾಗಿ ನಡೆಯುತ್ತಾ ಟಾಕ್ ಫೈಟ್? ತೆರಿಗೆ ದರಗಳನ್ನು ನಿರ್ಧರಿಸುವ ಜಿಎಸ್‌ಟಿ ಮಂಡಳಿಯ ಸಭೆ ಇಂದು ವರ್ಚ್ಯುಯಲ್ ಆಗಿ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಭಾಗಿಯಾಗಲಿದ್ದಾರೆ. ಆದ್ರೆ, ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಜಿಎಸ್‌ಟಿ ಬಾಕಿ ಹಣಕ್ಕಾಗಿ ಫೈಟ್: ಜಿಎಸ್‌ಟಿ ಜಾರಿಗೆ ತಂದ ಬಳಿಕ ಮೊದಲ ಐದು ವರ್ಷಗಳ ಕಾಲ ರಾಜ್ಯ ಸರ್ಕಾರಗಳಿಗೆ ಆಗುವ ತೆರಿಗೆ ನಷ್ಟವನ್ನು ಕೇಂದ್ರ ಸರ್ಕಾರವೇ ಕಟ್ಟಿಕೊಡಲಿದೆ ಎಂದು ಭರವಸೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಿದಂತೆ ಜಿಎಸ್‌ಟಿ ನಷ್ಟದ ಪರಿಹಾರ ಹಣ ನೀಡಿಲ್ಲ. ಲಾಕ್‌ಡೌನ್ ಕಾರಣದಿಂದಾಗಿ ಕೇಂದ್ರ ಸರ್ಕಾರದ ಆದಾಯ ಸಂಗ್ರಹ, ಜಿಎಸ್‌ಟಿ ತೆರಿಗೆ ಸಂಗ್ರಹವೂ ಕೂಡ ಕುಸಿದಿದೆ.
ಈ ವಿಷಯದ ಬಗ್ಗೆಯೂ ಕೇಂದ್ರ-ರಾಜ್ಯ ಸರ್ಕಾರಗಳ ಮಧ್ಯೆ ಟಫ್ ಟಾಕ್ ಫೈಟ್ ನಡೆಯುವ ಸಾಧ್ಯತೆಯಿದೆ. ಕರ್ನಾಟಕಕ್ಕೆ ಕೇಂದ್ರದಿಂದ 13 ಸಾವಿರ ಕೋಟಿ ರೂಪಾಯಿ ಜಿಎಸ್‌ಟಿ ನಷ್ಟ ಪರಿಹಾರ ಹಣ ಬಾಕಿ ಇದೆ. ಈ ಬಾಕಿ ಹಣ ನೀಡಲು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಿದೆ. ಜಿಎಸ್‌ಟಿ ನಷ್ಟ ಪರಿಹಾರವನ್ನ ಸಂವಿಧಾನಬದ್ಧವಾಗಿ ಕೇಂದ್ರ ಸರ್ಕಾರವೇ ನೀಡಬೇಕು. ಆದ್ರೆ, ರಾಜ್ಯ ಸರ್ಕಾರಗಳು ಮುಕ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯಲಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯ ಸರ್ಕಾರಗಳು ಸಾಲ ಪಡೆದರೇ, ಆ ಹಣವನ್ನು ರಾಜ್ಯ ಸರ್ಕಾರಗಳೇ ಮರುಪಾವತಿ ಮಾಡಬೇಕಾಗುತ್ತೆ. ಹೀಗಾಗಿ ಇದಕ್ಕೆ ರಾಜ್ಯಗಳು ಒಪ್ಪುತ್ತಿಲ್ಲ.
ಈ ಎಲ್ಲಾ ವಿಚಾರಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಇಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ದೇಶದ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಬೈಕ್ ಮೇಲಿನ ಜಿಎಸ್‌ಟಿ ತೆರಿಗೆ ದರ ಇಳಿಕೆ ಮಾಡುವ ಸುಳಿವು ನೀಡಿದೆ. ಬೈಕ್‌ಗಳು ಲಕ್ಸುರಿ ವಸ್ತುಗಳು ಅಲ್ಲ. ಹಾನಿಕಾರಕ ವಸ್ತುಗಳು ಅಲ್ಲ. ಆದ್ರೂ ದ್ವಿಚಕ್ರವಾಹನಗಳ ಮೇಲೆ ಶೇಕಡಾ 28 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡುವುದನ್ನು ಜಿಎಸ್‌ಟಿ ಮಂಡಳಿ ಪರಿಗಣಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಇದರಿಂದಾಗಿ ಆಟೋಮೊಬೈಲ್ ವಲಯವು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ತೆರಿಗೆ ದರವು ಶೇಕಡಾ 28 ರಿಂದ 18ಕ್ಕೆ ಇಳಿಯಬಹುದೆಂಬ ನಿರೀಕ್ಷೆಯಲ್ಲಿದೆ. ಇದರಿಂದ ಬೈಕ್‌ಗಳ ಬೇಡಿಕೆ ಹೆಚ್ಚಾಗಲಿದ್ದು, ಆರ್ಥಿಕತೆ ಚೇತರಿಕೆಗೆ ಸಹಾಯಕವಾಗಲಿದೆ ಎಂದು ಕಂಪನಿಗಳು ಹೇಳಿವೆ.
ಒಟ್ನಲ್ಲಿ ಜಿಎಸ್‌ಟಿ ನಷ್ಟ ಪರಿಹಾರದ ಹಣವನ್ನು ಯಾರು ನೀಡಬೇಕು ಎನ್ನುವ ಬಗ್ಗೆ ಕೇಂದ್ರ-ರಾಜ್ಯಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಬಿಕ್ಕಟ್ಟು ಪರಿಹಾರಕ್ಕೆ ವ್ಯವಸ್ಥೆ ರೂಪಿಸಲು ರಾಜ್ಯಗಳು ಒತ್ತಾಯಿಸುವ ಸಾಧ್ಯತೆ ಇದೆ. ಜತೆಗೇ ಜಿಎಸ್‌ಟಿ ಮಂಡಳಿಯ ಉಪಾಧ್ಯಕ್ಷ ಸ್ಥಾನ ಸೃಷ್ಟಿಗೆ ಬೇಡಿಕೆ ಇಡಲಿವೆ.