AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಸ್ ಸಂತತಿಯನ್ನೇ ನಾಶ ಮಾಡುವ ಪಣ ತೊಟ್ಟ ಕೇಂಬ್ರಿಡ್ಜ್, ಆಲ್ ಇನ್ ಒನ್ ಲಸಿಕೆ ತಯಾರಿಗೆ ಸಿದ್ಧತೆ

ದೆಹಲಿ: ಕ್ರೂರಿ ಕೊರೊನಾಗೆ ಲಸಿಕೆ ಕಂಡು ಹಿಡಿಯೋಕೆ ಹಲವು ದೇಶಗಳು ಪೈಪೋಟಿ ನಡೆಸ್ತಿವೆ. ಇದ್ರ ನಡ್ವೆ ಕೆಂಬ್ರಿಡ್ಜ್ ವಿವಿ ಒಂದು ಹೆಜ್ಜೆ ಮುಂದೆ ಹೋಗಿ, ಕೊರೊನಾ ಸಂತತಿಯನ್ನೇ ಮಟ್ಟ ಹಾಕೋಕೆ ಸಜ್ಜಾಗಿದೆ. ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನೇ ನಲುಗಿಸಿ ಬಿಟ್ಟಿದೆ. ಹಲವು ದೇಶಗಳನ್ನ ಹಿಂಡಿ ಹಿಪ್ಪೆ ಮಾಡಿದೆ. ಮಹಾಮಾರಿ ತಂದ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಮಾರಣಹೋಮದಲ್ಲಿ ತಮ್ಮವರನ್ನ ಕಳೆದುಕೊಂಡು ಅದೆಷ್ಟೋ ಮಂದಿ ಅನಾಥರಾಗಿದ್ದಾರೆ. ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ಆದ್ರೂ ಇಂದಿಗೂ ಸಾವಿನ ನಾಗಲೋಟ ಮಾತ್ರ […]

ವೈರಸ್ ಸಂತತಿಯನ್ನೇ ನಾಶ ಮಾಡುವ ಪಣ ತೊಟ್ಟ ಕೇಂಬ್ರಿಡ್ಜ್, ಆಲ್ ಇನ್ ಒನ್ ಲಸಿಕೆ ತಯಾರಿಗೆ ಸಿದ್ಧತೆ
ಕೊರೊನಾ ವ್ಯಾಕ್ಸಿನ್
ಆಯೇಷಾ ಬಾನು
|

Updated on:Aug 28, 2020 | 9:09 AM

Share

ದೆಹಲಿ: ಕ್ರೂರಿ ಕೊರೊನಾಗೆ ಲಸಿಕೆ ಕಂಡು ಹಿಡಿಯೋಕೆ ಹಲವು ದೇಶಗಳು ಪೈಪೋಟಿ ನಡೆಸ್ತಿವೆ. ಇದ್ರ ನಡ್ವೆ ಕೆಂಬ್ರಿಡ್ಜ್ ವಿವಿ ಒಂದು ಹೆಜ್ಜೆ ಮುಂದೆ ಹೋಗಿ, ಕೊರೊನಾ ಸಂತತಿಯನ್ನೇ ಮಟ್ಟ ಹಾಕೋಕೆ ಸಜ್ಜಾಗಿದೆ.

ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನೇ ನಲುಗಿಸಿ ಬಿಟ್ಟಿದೆ. ಹಲವು ದೇಶಗಳನ್ನ ಹಿಂಡಿ ಹಿಪ್ಪೆ ಮಾಡಿದೆ. ಮಹಾಮಾರಿ ತಂದ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಮಾರಣಹೋಮದಲ್ಲಿ ತಮ್ಮವರನ್ನ ಕಳೆದುಕೊಂಡು ಅದೆಷ್ಟೋ ಮಂದಿ ಅನಾಥರಾಗಿದ್ದಾರೆ. ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ಆದ್ರೂ ಇಂದಿಗೂ ಸಾವಿನ ನಾಗಲೋಟ ಮಾತ್ರ ನಿಂತಿಲ್ಲ. ಹೀಗಾಗಿ, ಕೊವಿಡ್ 19ಗೆ ಮದ್ದು ಕಂಡು ಹಿಡಿಯೋಕೆ ಹರಸಾಹಸ ಮುಂದುವರಿದೇ ಇದೆ. ಇದ್ರ ಬೆನ್ನಲ್ಲೇ ಕೆಂಬ್ರಿಡ್ಜ್ ವಿವಿ ಕೊರೊನಾಗೆ ಶಾಶ್ವತವಾಗಿ ಬ್ರೇಕ್ ಹಾಕಲು ಸನ್ನದ್ಧವಾಗಿದೆ.

ಕೊರೊನಾ ಸಂತತಿಯನ್ನೇ ಮಟ್ಟಹಾಕಲು ಕೇಂಬ್ರಿಡ್ಜ್ ವಿವಿ ಪಣ! ಕೊವಿಡ್ 19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡು ಹಿಡಿಯೋಕೆ ಮುಂದುವರಿದ ರಾಷ್ಟ್ರಗಳು ಶತಪ್ರಯತ್ನಪಡ್ತಿವೆ. ಬಹುತೇಕ ಲಸಿಕೆಗಳು 2021ರ ಆರಂಭದಲ್ಲಿ ಸಾರ್ವಜನಿಕರ ಬಳಕೆಗೆ ಸಿಗಬಹುದು ಎನ್ನಲಾಗ್ತಿದೆ. ಆದ್ರೆ, ಕೆಂಬ್ರಿಡ್ಜ್ ವಿವಿ, ಕೊರೊನಾ ಮಾತ್ರವಲ್ಲದೆ ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಎಲ್ಲಾ ತಳಿಯ ವೈರಸ್​​ಗಳಿಗೆ ಲಸಿಕೆ ಅಭಿವೃದ್ಧಿಪಡಿಸೋ ಯೋಜನೆಯನ್ನ ಘೋಷಿಸಿದೆ.

ವೈರಸ್‌ ಸಂತತಿ ನಾಶಕ್ಕೆ ವ್ಯಾಕ್ಸಿನ್! ಕೇಂಬ್ರಿಡ್ಜ್‌ ಅಭಿವೃದ್ಧಿಪಡಿಸ್ತಿರೋ ಲಸಿಕೆಗೆ DIOS-CoVax2 ಎಂದು ಹೆಸರಿಟ್ಟಿದ್ದಾರೆ. ಬಾವಲಿಗಳಲ್ಲಿ ಇರಬಹುದಾದ ಕೊರೊನಾ ವೈರಸ್ ಸೇರಿದಂತೆ ಎಲ್ಲಾ ಬಗೆಯ ಕೊರೊನಾ ವೈರಸ್​ಗಳ ಅನುವಂಶೀಯತೆಯನ್ನ ಈ ಲಸಿಕೆಯಲ್ಲಿ ಬಳಸಿಕೊಳ್ಳಲಾಗ್ತಿದೆ. ಎಲ್ಲಾ ಪ್ರಯೋಗ ಪೂರ್ಣಗೊಂಡ ಬಳಿಕ ಸ್ಪ್ರಿಂಗ್-ಚಾಲಿತ ಜೆಟ್ ಇಂಜೆಕ್ಷನ್​ನಿಂದ ಲಸಿಕೆ ನೀಡಲಾಗುತ್ತೆ. ಆದ್ರೆ ಇದ್ರಿಂದ ಚರ್ಮಕ್ಕೆ ಯಾವುದೇ ರೀತಿಯ ನೋವಾಗೋದಿಲ್ಲವಂತೆ.

ಹೀಗೆ, ತಮ್ಮ ಲಸಿಕೆಯ ಬಗ್ಗೆ ಹಲವು ಮಾಹಿತಿ ಒಳಗೊಂಡಿರೋ ಮಾಹಿತಿಯನ್ನ ಈಗಾಗ್ಲೇ ಕೇಂಬ್ರಿಡ್ಜ್ ವಿವಿ ನೀಡಿದೆ. ಇತ್ತ, ತಮ್ಮ ಪ್ರಯೋಗದ ಬಗ್ಗೆ ಕೇಂಬ್ರಿಡ್ಜ್‌ನ ಲ್ಯಾಬೊರೇಟರಿ ಮತ್ತು ವೈರಲ್‌ ಜೂನಾಟಿಕ್ಸ್‌ ಲ್ಯಾಬ್‌ ಮುಖ್ಯಸ್ಥರು ಕೂಡ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಪ್ರಯೋಗವು SARS-CoV-2 ವೈರಸ್‌ ರಚನೆಯ 3D ಕಂಪ್ಯೂಟರ್ ಮಾಡೆಲಿಂಗ್ ಅನ್ನ ಒಳಗೊಂಡಿರುತ್ತದೆ. ಕೊರೊನಾ ಜೊತೆ ಅದರ ಮಾದರಿಗಳಾದ SARS, MERS‌ & ಪ್ರಾಣಿಗಳಲ್ಲಿರಬಹುದಾದ ಇತರ ಕೊರೊನಾ ವೈರಸ್‌ಗಳ ಮಾಹಿತಿಯನ್ನ ಬಳಸಿಕೊಳ್ಳುತ್ತದೆ. -ಪ್ರೊ.ಜೊನಾಥನ್ ಹೀನಿ, ವೈರಲ್‌ ಜೂನಾಟಿಕ್ಸ್‌ ಲ್ಯಾಬ್‌ ಮುಖ್ಯಸ್ಥ

ಒಟ್ನಲ್ಲಿ, ಕೊರೊನಾ ವೈರಸ್‌ ಲಸಿಕೆ ಕಂಡು ಹಿಡಿಯಲು ಹಲವು ದೇಶಗಳು ಸರ್ಕಸ್ ಮಾಡ್ತಿದ್ರೆ, ಕೇಂಬ್ರಿಡ್ಜ್ ವಿವಿ ಹೊಸ ಸಾಹಸಕ್ಕೆ ಕೈಹಾಕಿದೆ. ಒಂದು ವೇಳೆ ಲಸಿಕೆ ಸಕ್ಸಸ್ ಆದ್ರೆ ಕೊವಿಡ್ 19 ಮಾತ್ರವಲ್ಲದೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಇತರೆ ಕೊರೊನಾ ವೈರಸ್​ಗಳ ವಿರುದ್ಧವೂ ಪ್ರತಿರೋಧದ ಶಕ್ತಿ ಸೃಷ್ಟಿಸೋ ಸಾಮರ್ಥ್ಯ ಹೊಂದಲಿದೆ. ಭವಿಷ್ಯದಲ್ಲಿ ಆಗಬಹುದಾದ ಅನಾಹುತಗಳನ್ನ ತಪ್ಪಿಸುವ ಭರವಸೆ ಮೂಡಿದೆ.

Published On - 7:27 am, Fri, 28 August 20

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ