ಬೆಂಗಳೂರು: ರುಪ್ಸಾ ಶಾಲೆಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಒಕ್ಕೂಟ ಮುಂದಿಟ್ಟ 13 ಬೇಡಿಕೆಗಳ ಪೈಕಿ 5 ಬೇಡಿಕೆ ಈಡೇರಿಕೆಗೆ ಸರ್ಕಾರ ನಿರ್ಧರಿಸಿದೆ. 5 ಬೇಡಿಕೆಗಳ ಪ್ರಸ್ತಾವನೆ ಮಂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಸೂಚನೆ ನೀಡಿದ್ದಾರೆ.
ಮೊದಲ ಹಂತದಲ್ಲಿ ಈಡೇರಿಸಲಾಗುವ 5 ಬೇಡಿಕೆಗಳ ವಿವಿರ ಹೀಗಿದೆ.
1. ಖಾಸಗಿ ಶಾಲೆಗಳ ವಾರ್ಷಿಕ ನವೀಕರಣ ಪ್ರಕ್ರಿಯೆ ಆನ್‌ಲೈನ್‌ಗೊಳಿಸಲು ಸೂಚನೆ
2. ಶಾಲಾ ನವೀಕರಣ ಪ್ರಕ್ರಿಯೆಯಲ್ಲಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ
3. ಶಿಕ್ಷಕರ ಕಲ್ಯಾಣ ನಿಧಿ ಬಳಕೆಗೆ ಸೂಕ್ತ ಕ್ರಮ ವಹಿಸುವುದು
4. 1995ರಿಂದ 2000ವರೆಗಿನ ಶಾಲೆಗಳನ್ನ ಅನುದಾನಕ್ಕೊಳಪಡಿಸಲು ಸಿಎಂ ಜೊತೆ ಚರ್ಚಿಸಿ ಮುಂದಿನ ಕ್ರಮ
5. ಮಾನ್ಯತೆ ತಿರಸ್ಕೃತವಾದ ಖಾಸಗಿ ಅನುದಾನ ರಹಿತ ಪ್ರೌಢಶಾಲೆಗಳ ಅರ್ಜಿಗಳ ಮರು ಪರಿಶೀಲನೆಗೆ ಅವಕಾಶ. ಜೊತೆಗೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವುದು.
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ಫ್ರೀಡಂಪಾರ್ಕ್‌ನಲ್ಲಿ ಖಾಸಗಿ ಶಾಲಾ ಒಕ್ಕೂಟ ಪ್ರತಿಭಟನೆ ನಡೆಸಿತ್ತು. ಒಕ್ಕೂಟ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ಧರಣಿ ನಡೆದಿತ್ತು. ಇದೀಗ, ಶಿಕ್ಷಣ ಸಚಿವರ ನಿರ್ಧಾರವನ್ನು ಲೋಕೇಶ್ ತಾಳಿಕಟ್ಟೆ ಸ್ವಾಗತಿಸಿದ್ದಾರೆ.
ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ; ಪ್ರತಿಭಟನೆ ಕೈಬಿಡಲು ರುಪ್ಸಾ ನಿರ್ಧಾರ