ಸಿದ್ದರಾಮಯ್ಯರ ಇಂದಿರಾ ಕ್ಯಾಂಟೀನ್​ ಯೋಜನೆಗೆ ಎಳ್ಳುನೀರು ಬಿಡಲು ಹೊರಟಿದ್ಯಾ ಸರ್ಕಾರ?

|

Updated on: Nov 16, 2020 | 5:30 PM

ಬೆಂಗಳೂರು: ಬಡವರ ಹಸಿವು ನೀಗಿಸೋ ಯೋಜನೆಗೆ ಎಳ್ಳುನೀರು ಬಿಡಲು ಆಡಳಿತ ಸರ್ಕಾರ ಹೊರಟಿದ್ಯಾ ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗೆ ಸ್ಥಗಿತಗೊಳ್ಳೋ ಭಯ ಶುರುವಾಗಿದೆ. ರಿವಾರ್ಡ್,ಶೆಫ್ ಟಾಕ್ ಕಂಪನಿಗೆ ಇಂದಿರಾ ಕ್ಯಾಂಟೀನ್ ‌ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ ಎಳು ತಿಂಗಳಿನಿಂದ ಕ್ವಾಂಟ್ರ್ಯಾಕ್ಟರ್​ಗೆ ಸರ್ಕಾರ ಬಿಲ್‌ ಮೊತ್ತ ಪಾವತಿಸಿಲ್ಲ. ಹೀಗಾಗಿ ಕಳೆದ ಎರಡು‌ ತಿಂಗಳಿಂದ ಇಂದಿರಾ ಕ್ಯಾಂಟಿನ್ ಕೆಲಸಗಾರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ತಮ್ಮ ಅಳಲು ತೊಡಿಕೊಂಡಿದ್ದಾರೆ. BWSSB ಬಿಲ್ […]

ಸಿದ್ದರಾಮಯ್ಯರ ಇಂದಿರಾ ಕ್ಯಾಂಟೀನ್​ ಯೋಜನೆಗೆ ಎಳ್ಳುನೀರು ಬಿಡಲು ಹೊರಟಿದ್ಯಾ ಸರ್ಕಾರ?
Follow us on

ಬೆಂಗಳೂರು: ಬಡವರ ಹಸಿವು ನೀಗಿಸೋ ಯೋಜನೆಗೆ ಎಳ್ಳುನೀರು ಬಿಡಲು ಆಡಳಿತ ಸರ್ಕಾರ ಹೊರಟಿದ್ಯಾ ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗೆ ಸ್ಥಗಿತಗೊಳ್ಳೋ ಭಯ ಶುರುವಾಗಿದೆ.

ರಿವಾರ್ಡ್,ಶೆಫ್ ಟಾಕ್ ಕಂಪನಿಗೆ ಇಂದಿರಾ ಕ್ಯಾಂಟೀನ್ ‌ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ ಎಳು ತಿಂಗಳಿನಿಂದ ಕ್ವಾಂಟ್ರ್ಯಾಕ್ಟರ್​ಗೆ ಸರ್ಕಾರ ಬಿಲ್‌ ಮೊತ್ತ ಪಾವತಿಸಿಲ್ಲ. ಹೀಗಾಗಿ ಕಳೆದ ಎರಡು‌ ತಿಂಗಳಿಂದ ಇಂದಿರಾ ಕ್ಯಾಂಟಿನ್ ಕೆಲಸಗಾರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ತಮ್ಮ ಅಳಲು ತೊಡಿಕೊಂಡಿದ್ದಾರೆ.

BWSSB ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ
ಮೊದಲು ಇಂದಿರಾ ಕ್ಯಾಂಟೀನ್​ಗೆ ಡೊಮೆಸ್ಟಿಕ್ ಬಿಲ್ ದರ ವಿಧಿಸೋದಾಗಿ‌ BWSSB ಹೇಳಿತ್ತು. ಆದ್ರೆ ಅದನ್ನು ಕಾರ್ಯರೂಪಕ್ಕೆ ತರದೇ ಕಮರ್ಶಿಯಲ್ ಬಿಲ್ ನೀಡಲಾಗುತ್ತಿದೆ. ಸರ್ಕಾರ 20 ಕೋಟಿ ಹಣ ಕೊಡದ ಹಿನ್ನೆಲೆಯಿಂದಾಗಿ BWSSB ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಿನ ಸಂಪರ್ಕ ಕಡಿತಗೊಳಿಸಿದ್ದು ವಾಟರ್ ಟ್ಯಾಂಕ್ ಮೂಲಕ‌ ಜನರ ಹಸಿವು ನೀಗಿಸಲಾಗುತ್ತಿದೆ.

ಅಲ್ಲದೇ ಹಣಕಾಸಿನ ಸಮಸ್ಯೆಯಿಂದ ಮೆನು ಕೂಡ ಕಡಿತ ಮಾಡಲಾಗಿದೆ. ಹಣ ಬಿಡುಗಡೆ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆದಿದೆ. ಆದ್ರೂ ಕೂಡ ಸರ್ಕಾರ ಇ‌ನ್ನು ಬಿಲ್ ಕ್ಲಿಯರ್ ಮಾಡಿಲ್ಲ. ಸರ್ಕಾರ ಬಡವರ ಹಸಿವ ನೀಗಿಸೋ ಯೋಜನೆಯನ್ನ ನಿಲ್ಲಿಸಿದ್ರೆ ಅನ್ನೊ ಆತಂಕವನ್ನು ಬಡ ಕೂಲಿ ಕಾರ್ಮಿಕ ಜನರು ವ್ಯಕ್ತಪಡಿಸುತ್ತಿದ್ದಾರೆ.