Sign In

By signing in or creating an account, you agree with Associated Broadcasting Company's Terms & Conditions and Privacy Policy.

UAEಗೆ ಹೊರಟಿದ್ದ ಉದ್ಯಮಿ B.R ಶೆಟ್ಟಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ತಡೆ

ಬೆಂಗಳೂರು: ಕೆಲಸದ ನಿಮಿತ್ತ UAEಗೆ ತೆರಳುತ್ತಿದ್ದ ಉದ್ಯಮಿ ಬಿ.ಆರ್. ಶೆಟ್ಟಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದಿದ್ದಾರೆ. ದುಬೈನಲ್ಲಿರುವ ತಮ್ಮ ಸಂಸ್ಥೆಗಳ ಮೇಲೆ ತನಿಖೆ ನಡೆಸುತ್ತಿರುವ UAE ಅಧಿಕಾರಿಗಳಿಗೆ ನೆರವು ನೀಡಲು ಬಿ.ಆರ್. ಶೆಟ್ಟಿ ಅಬು ಧಾಬಿಗೆ ಹೊರಟಿದ್ದರು ಎಂದು ಹೇಳಲಾಗಿದೆ. ಶೆಟ್ಟಿ ತಮ್ಮ ಸಹೋದರನ ಅನಾರೋಗ್ಯದ ನಿಮಿತ್ತ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದರು. ಬಿ.ಆರ್. ಶೆಟ್ಟಿ 8 ತಿಂಗಳ ಕಾಲ ಭಾರತದಲ್ಲೇ ಇದ್ದರು. ಬಿ.ಆರ್. ಶೆಟ್ಟಿ ಸದ್ಯ ಬ್ಯಾಂಕ್ ಆಫ್ ಬರೋಡಾಗೆ 250 ಮಿಲಿಯನ್ ಡಾಲರ್​ ಹಣ ಪಾವತಿಸಬೇಕಿದೆ. ಮಾತ್ರವಲ್ಲದೇ, ಇತರ ಬ್ಯಾಂಕ್​ಗಳಿಗೂ ಮೊತ್ತವನ್ನು ಭರಿಸುವುದಿದೆ. ಈ ನಿಟ್ಟಿನಲ್ಲಿ ಭಾರತ ಬ್ಯಾಂಕ್​ಗಳ ಒಕ್ಕೂಟವು ಮರುಪಾವತಿಯ ಪ್ರಕ್ರಿಯೆಯನ್ನು […]

UAEಗೆ ಹೊರಟಿದ್ದ ಉದ್ಯಮಿ B.R ಶೆಟ್ಟಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ತಡೆ
Follow us
KUSHAL V
|

Updated on: Nov 16, 2020 | 3:58 PM

ಬೆಂಗಳೂರು: ಕೆಲಸದ ನಿಮಿತ್ತ UAEಗೆ ತೆರಳುತ್ತಿದ್ದ ಉದ್ಯಮಿ ಬಿ.ಆರ್. ಶೆಟ್ಟಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದಿದ್ದಾರೆ. ದುಬೈನಲ್ಲಿರುವ ತಮ್ಮ ಸಂಸ್ಥೆಗಳ ಮೇಲೆ ತನಿಖೆ ನಡೆಸುತ್ತಿರುವ UAE ಅಧಿಕಾರಿಗಳಿಗೆ ನೆರವು ನೀಡಲು ಬಿ.ಆರ್. ಶೆಟ್ಟಿ ಅಬು ಧಾಬಿಗೆ ಹೊರಟಿದ್ದರು ಎಂದು ಹೇಳಲಾಗಿದೆ.

ಶೆಟ್ಟಿ ತಮ್ಮ ಸಹೋದರನ ಅನಾರೋಗ್ಯದ ನಿಮಿತ್ತ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದರು. ಬಿ.ಆರ್. ಶೆಟ್ಟಿ 8 ತಿಂಗಳ ಕಾಲ ಭಾರತದಲ್ಲೇ ಇದ್ದರು. ಬಿ.ಆರ್. ಶೆಟ್ಟಿ ಸದ್ಯ ಬ್ಯಾಂಕ್ ಆಫ್ ಬರೋಡಾಗೆ 250 ಮಿಲಿಯನ್ ಡಾಲರ್​ ಹಣ ಪಾವತಿಸಬೇಕಿದೆ. ಮಾತ್ರವಲ್ಲದೇ, ಇತರ ಬ್ಯಾಂಕ್​ಗಳಿಗೂ ಮೊತ್ತವನ್ನು ಭರಿಸುವುದಿದೆ. ಈ ನಿಟ್ಟಿನಲ್ಲಿ ಭಾರತ ಬ್ಯಾಂಕ್​ಗಳ ಒಕ್ಕೂಟವು ಮರುಪಾವತಿಯ ಪ್ರಕ್ರಿಯೆಯನ್ನು ಮುಂದುವರೆಸಲು ಪ್ರಯಾಣ ನಿರ್ಬಂಧವನ್ನು ಹೇರಿವೆ.

UAEನಲ್ಲಿ 66.6 ಬಿಲಿಯನ್ ಡಾಲರ್​ ವಂಚನೆ ಆರೋಪ! ಉದ್ಯಮಿ ಬಿ.ಆರ್ ಶೆಟ್ಟಿ ವಿರುದ್ಧ 66.6 ಬಿಲಿಯನ್ ಡಾಲರ್​ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ. ಹಾಗಾಗಿ, UAEಗೆ ಮರಳುವ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಶೆಟ್ಟಿ ಭರವಸೆ ನೀಡಿದ್ದರು. ತನ್ನ ಸಂಸ್ಥೆಯ ಕೆಲ ಮಾಜಿ ಸಿಬ್ಬಂದಿ ಮಾಡಿರುವ ವಂಚನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಏಪ್ರಿಲ್ ಅಂತ್ಯದಲ್ಲಿ UAEನ ಫೆಡರಲ್ ಅಟಾರ್ನಿ ಜನರಲ್​ಗೆ ದೂರು ನೀಡಿದ್ದರು.

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ