ತಂದೆಗೆ ಊಟ ಕೊಡಲು ಹೋಗಿದ್ದ ಯುವತಿ ಕೊನೆಗೆ ಸಿಕ್ಕಿದ್ದು ಶವವಾಗಿ..
ಹಾವೇರಿ: ನಾಪತ್ತೆಯಾಗಿದ್ದ ಹದಿನೇಳು ವರ್ಷದ ಬಾಲಕಿ ಮೃತದೇಹ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಚಿಕ್ಕಮೊರಬ ಗ್ರಾಮದ ಬಳಿ ಇರೋ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ. ನವಂಬರ್ 13, 2020ರಂದು ಜಮೀನಿಗೆ ಹೋಗಿ ತಂದೆಗೆ ಊಟ ಕೊಟ್ಟು ಬರಲು ಹೋಗಿದ್ದ ಯುವತಿ ಮನೆಗೆ ವಾಪಸ್ ಆಗದೆ ನಾಪತ್ತೆ ಆಗಿದ್ದಳು. ಹೀಗಾಗಿ ನವಂಬರ್ 13,2020ರಂದು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ಬಾಲಕಿ ಕಿಡ್ನಾಪ್ ಆಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನೆಡೆಸಿದ್ದರು ಸಹ ಯುವತಿಯ […]

ಹಾವೇರಿ: ನಾಪತ್ತೆಯಾಗಿದ್ದ ಹದಿನೇಳು ವರ್ಷದ ಬಾಲಕಿ ಮೃತದೇಹ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಚಿಕ್ಕಮೊರಬ ಗ್ರಾಮದ ಬಳಿ ಇರೋ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ.
ನವಂಬರ್ 13, 2020ರಂದು ಜಮೀನಿಗೆ ಹೋಗಿ ತಂದೆಗೆ ಊಟ ಕೊಟ್ಟು ಬರಲು ಹೋಗಿದ್ದ ಯುವತಿ ಮನೆಗೆ ವಾಪಸ್ ಆಗದೆ ನಾಪತ್ತೆ ಆಗಿದ್ದಳು. ಹೀಗಾಗಿ ನವಂಬರ್ 13,2020ರಂದು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ಬಾಲಕಿ ಕಿಡ್ನಾಪ್ ಆಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನೆಡೆಸಿದ್ದರು ಸಹ ಯುವತಿಯ ಪತ್ತೆಯಾಗಿರಲಿಲ್ಲ. ಆದರೆ ಇಂದು ಚಿಕ್ಕಮೊರಬ ಗ್ರಾಮದ ಬಳಿ ಇರೋ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ. ಯುವತಿಯ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.