ಬಸವಕಲ್ಯಾಣ ಬೈಎಲೆಕ್ಷನ್: BJPಯ ಮರಾಠ, ಲಿಂಗಾಯತ ನಿಗಮ ಅಸ್ತ್ರಕ್ಕೆ ‘ಕೈ’ ಕೌಂಟರ್ ಸ್ಟ್ರೈಕ್
ಬೀದರ್: ಮುಂಬರುವ ಬಸವ ಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಅದಕ್ಕಾಗಿ ಲಿಂಗಾಯತ ಮೀಸಲಾತಿ ಅಸ್ತ್ರ ಹಿಡಿಯಲು ಕಾಂಗ್ರೆಸ್ಸ್ ಸಜ್ಜಾಗಿದೆ. ಬಿಜೆಪಿಯ ಮರಾಠಾ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಅಸ್ತ್ರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಬಸವಕಲ್ಯಾಣದಲ್ಲಿ ಲಿಂಗಾಯತ ಮರಾಠ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಲಿಂಗಾಯತ ಸಮುದಾಯದ 55000 ಕ್ಕೂ ಹೆಚ್ಚು ಮತದಾರರು ಹಾಗೂ ಮರಾಠಾ ಸಮುದಾಯದ 50000 ಕ್ಕೂ ಹೆಚ್ಚು ಮತದಾರರು ಬಸವಕಲ್ಯಾಣದಲ್ಲಿದ್ದಾರೆ. ಎರಡೂ […]

ಬೀದರ್: ಮುಂಬರುವ ಬಸವ ಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಅದಕ್ಕಾಗಿ ಲಿಂಗಾಯತ ಮೀಸಲಾತಿ ಅಸ್ತ್ರ ಹಿಡಿಯಲು ಕಾಂಗ್ರೆಸ್ಸ್ ಸಜ್ಜಾಗಿದೆ.
ಬಿಜೆಪಿಯ ಮರಾಠಾ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಅಸ್ತ್ರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಬಸವಕಲ್ಯಾಣದಲ್ಲಿ ಲಿಂಗಾಯತ ಮರಾಠ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಲಿಂಗಾಯತ ಸಮುದಾಯದ 55000 ಕ್ಕೂ ಹೆಚ್ಚು ಮತದಾರರು ಹಾಗೂ ಮರಾಠಾ ಸಮುದಾಯದ 50000 ಕ್ಕೂ ಹೆಚ್ಚು ಮತದಾರರು ಬಸವಕಲ್ಯಾಣದಲ್ಲಿದ್ದಾರೆ.
ಎರಡೂ ಸಮುದಾಯವನ್ನು ಹಿಡಿದಿಡಲು ಬಿಜೆಪಿ ಪ್ರಾಧಿಕಾರದ ಅಸ್ತ್ರ ಪ್ರಯೋಗಿಸುತ್ತಿದ್ದರೆ. ಬಿಜೆಪಿಯ ಅಸ್ತ್ರಕ್ಕೆ ಸದ್ಯ ಪರ್ಯಾಯ ಮಾರ್ಗ ಹುಡುಕಲು ಕಾಂಗ್ರೆಸ್ ಸಜ್ಜಾಗಿದೆ. ಬಸವ ಕಲ್ಯಾಣದಲ್ಲಿ ಜಾತಿಯ ಸವಾಲಿನಿಂದಲೇ ಕಾಂಗ್ರೆಸ್ ಕಂಗಾಲಾಗಿದ್ದು, ಕೇವಲ ಒಂದು ಸಮುದಾಯವನ್ನು ಮಾತ್ರ ಮೆಚ್ಚಿಕೊಂಡು ಉಪ ಚುನಾವಣೆ ಎದುರಿಸುವುದು ಅಸಾಧ್ಯ ಹಾಗಾಗಿ ಮರಾಠಾ ಮತ್ತು ಲಿಂಗಾಯತ ಎರಡೂ ಸಮುದಾಯವನ್ನು ಸೆಳೆಯುವಂತ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ಸ್ ತೀರ್ಮಾನಿಸಿದೆ.
ಈ ಕಡೆ ಲಿಂಗಾಯತ ಸಮುದಾಯಕ್ಕೂ ಪ್ರತ್ಯೇಕ ನಿಗಮ ರಚನೆಗೆ ಬಿಜೆಪಿ ನಾಯಕರು ದಾಳ ಉರುಳಿಸಿದ್ದಾರೆ. ಇದನ್ನು ಕೆಡವಬೇಕು ಅಂದ್ರೆ ಲಿಂಗಾಯತ ಮೀಸಲಾತಿಯೇ ಪ್ರಮುಖ ಅಸ್ತ್ರವಾಗಬೇಕು. ಹೀಗಾಗಿ ಈ ನಿಟ್ಟಿನಲ್ಲಿ ಲಿಂಗಾಯತ ಮೀಸಲಾತಿ ಹೋರಾಟದ ಬಗ್ಗೆ ಹೆಚ್ಚು ಗಮನ ಹರಿಸಲು ಕಾಂಗ್ರೆಸ್ ಚಿಂತಿನ ನಡೆಸುತ್ತಿದೆ.