ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ. ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು […]

ಆರೋಗ್ಯ ವಿಮಾಕಂತಿನಲ್ಲಿ ಗಣನೀಯ ಏರಿಕೆ.. ಕೊರೊನಾ ಕಾರಣನಾ?
Follow us
ಆಯೇಷಾ ಬಾನು
|

Updated on: Nov 16, 2020 | 4:45 PM

ದೆಹಲಿ: ಕೊರೊನಾ, ವೈದ್ಯಕೀಯ ಕ್ಷೇತ್ರದ ಹಣದುಬ್ಬರ, ವಿಮೆಯ ವ್ಯಾಪ್ತಿ ವಿಸ್ತರಣೆ ಮೊದಲಾದ ಕಾರಣಗಳಿಂದ ಆರೋಗ್ಯ ವಿಮಾಕಂತಿನ ದರದಲ್ಲಿ ದುಪ್ಪಟ್ಟು ಏರಿಕೆ ಕಂಡುಬಂದಿದೆ. ಆರೋಗ್ಯ ವಿಮಾ ಪಾಲಿಸಿಗಳ ಮಾರಾಟವು ಹೆಚ್ಚಳವಾಗಿದೆ. ಅದರಲ್ಲೂ ಹಿರಿಯ ನಾಗರಿಕರ ಕಂತಿನ ದರದಲ್ಲಿ ವಿಶೇಷ ವ್ಯತ್ಯಾಸ ಕಂಡುಬಂದಿದೆ.

ಅಹ್ಮದಾಬಾದ್ ಮೂಲದ ಇನ್ಶೂರೆನ್ಸ್ ದಲ್ಲಾಳಿ ಪ್ರಭಾತ್ ವಿಜ್ ಪ್ರಕಾರ ಮಧ್ಯಮ ವಯಸ್ಕ ವರ್ಗದಲ್ಲಿ ಆರೋಗ್ಯ ವಿಮೆಯ ಖರೀದಿಯು ಸರಾಸರಿ ಶೇಕಡಾ 10ರಿಂದ 15ರಷ್ಟು ಏರಿಕೆಯಾಗಿದೆ. ಹಿರಿಯ ನಾಗರಿಕರಲ್ಲಿ ಆರೋಗ್ಯ ವಿಮೆಯ ಖರೀದಿ ಅತ್ಯಂತ ಹೆಚ್ಚಾಗಿದ್ದು, ಶೇಕಡಾ 100ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ(2019-20)ದ ಅವಧಿಯಲ್ಲಿ ಹಿರಿಯ ನಾಗರಿಕರ ಕಂತಿನ ದರವು, ಇಬ್ಬರಿಗೆ 28,000 ರೂಪಾಯಿಗಳಷ್ಟಿತ್ತು. ಈಗ ಕಂತಿನ ದರವು 55,000-60,000 ರೂಪಾಯಿಗಳಾಗಿದ್ದು, ವಿಮೆಯ ಮೊತ್ತ ದ್ವಿಗುಣಗೊಂಡಿದೆ ಎಂದಿದ್ದಾರೆ.

ವಿಮೆ ಜಾಗೃತಿಗಾಗಿ ಇರುವ ಸ್ವತಂತ್ರ ಸಂಸ್ಥೆ, Beshak.org ಸಂಸ್ಥಾಪಕ ಮಹಾವೀರ್ ಚೋಪ್ರಾ, ಕಳೆದ ವರ್ಷ ವಿಮೆಯ ಕಂತಿನ ದರದಲ್ಲಿ ಕೇವಲ ಶೇಕಡಾ 10ರಷ್ಟು ಏರಿಕೆಯಾಗಿತ್ತು. ಈ ಬಾರಿ ಶೇಕಡಾ 25ರಿಂದ35 ರವರೆಗೆ ಹೆಚ್ಚಳಗೊಂಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ವಿಮೆಯ ಕಂತಿನ ಮೊತ್ತವು ಶೇಕಡಾ 50ರಿಂದ 75ರವರೆಗೆ ಏರಿಕೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಕೊರೊನಾ ಕಾರಣ ಆಯ್ತಾ? ಕೊವಿಡ್-19ಗೂ ಮೊದಲು ಆರೋಗ್ಯ ವಿಮೆಯ ಮೊತ್ತವನ್ನು ಪಡೆದುಕೊಳ್ಳುವವರ ಸಂಖ್ಯೆ 8-9 ಶೇಕಡಾದಷ್ಟಿತ್ತು. ಅದರೆ ಈಗ ವಿಮಾ ಮೊತ್ತದ ಸೌಲಭ್ಯ ಬಳಸುವವರ ಸಂಖ್ಯೆ ಶೇಕಡಾ 15ರಿಂದ18ರಷ್ಟಾಗಿದೆ. ಕೊವಿಡ್ ವಿಮೆಯ ಮೂಲಕ ಸರಾಸರಿ 1.6ರಿಂದ2 ಲಕ್ಷ ಮೊತ್ತವನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ. ಕೊರೊನಾ ಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತ ಬೇಕಾಗಬಹುದು ಎಂದು ಇನ್ಶೂರೆನ್ಸ್ ಕಂಪೆನಿಗಳು ಊಹಿಸಿರಲಿಲ್ಲ ಎಂದು ಪ್ರಭಾತ್ ವಿಜ್ ವಿವರಿಸಿದ್ದಾರೆ.

ಕೊವಿಡ್ ಕಾರಣದಿಂದ ವೈದ್ಯಕೀಯ ಕ್ಷೇತ್ರವು ಹಣದುಬ್ಬರ ಎದುರಿಸಿದೆ. ಕೊರೊನಾದಿಂದಾಗಿ ಇತರ ರೋಗಿಗಳಿಗೂ ಆರ್ಥಿಕ ಹೊಡೆತ ಬಿದ್ದಿದೆ. ಸ್ಯಾನಿಟೈಸೇಷನ್, ಸೋಂಕಿತರ ನಿರ್ವಾಹಣೆ ಮುಂತಾದ ಕಾರಣಗಳಿಂದ ಆಸ್ಪತ್ರೆಗಳ ಖರ್ಚು ಏರಿಕೆಯಾಗಿದೆ. ಹಲವೆಡೆ ಸಾರ್ವಜನಿಕರು, ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಇದರಿಂದ ಚಿಕಿತ್ಸಾ ವೆಚ್ಚವೂ ಹೆಚ್ಚು ಬರುತ್ತದೆ. ಆಸ್ಪತ್ರೆಯ ಬಿಲ್ಗೆ ನಿಯಮ, ನಿಬಂಧನೆಗಳಿಲ್ಲ. ಇದು ವೈದ್ಯಕೀಯ ವೆಚ್ಚದ ಏರಿಕೆಗೆ ಕಾರಣ ಎಂದು ಮಹಾವೀರ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ