ಬಿಹಾರದಲ್ಲಿ ಇಬ್ಬರು ಡಿಸಿಎಂ,ಏನಿದು ಬಿಜೆಪಿಯ ಪಕ್ಕಾ ಲೆಕ್ಕಾಚಾರ?
ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ಗೆ 2 ಉಪಮುಖ್ಯಮಂತ್ರಿಗಳು ಸಾಥ್ ನೀಡಲಿದ್ದಾರೆ. 4 ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ತಾರ್ ಕಿಶೋರ್ ಪ್ರಸಾದ್ ಹಾಗೂ ಶಾಸಕಿ ರೇಣು ದೇವಿ ನಿತೀಶ್ ಕುಮಾರ್ ಪಕ್ಕ ಕೂರಲಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ 3 ಡಿಸಿಎಂ ಹುದ್ದೆ ಸೃಷ್ಟಿಸಿದ್ದರೆ ಇದೇ ಬಿಜೆಪಿ ಬಿಹಾರದಲ್ಲಿ ಇಬ್ಬರನ್ನು ಡಿಸಿಎಂ ಮಾಡಲು ಹೊರಟಿದೆ. ಈ ಮೂಲಕ, ಮತಗಳ ಧ್ರುವೀಕರಣಕ್ಕೆ ತನ್ನ ಚತುರ ದಾಳ ಉರುಳಿಸಿದೆ. ಮುಂದಿನ ಚುನಾವಣೆಯ ಲೆಕ್ಕಾಚಾರ ಮಾಡಿರುವುದು ಪಕ್ಕಾ ಆಗಿದೆ. ವೈಶ್ಯ ಸಮುದಾಯದ ಧ್ರುವೀಕರಣ 55 ವರ್ಷದ ಕಾಥಿಹಾರ್ ಕ್ಷೇತ್ರದ ಶಾಸಕ […]
ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ಗೆ 2 ಉಪಮುಖ್ಯಮಂತ್ರಿಗಳು ಸಾಥ್ ನೀಡಲಿದ್ದಾರೆ. 4 ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ತಾರ್ ಕಿಶೋರ್ ಪ್ರಸಾದ್ ಹಾಗೂ ಶಾಸಕಿ ರೇಣು ದೇವಿ ನಿತೀಶ್ ಕುಮಾರ್ ಪಕ್ಕ ಕೂರಲಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ 3 ಡಿಸಿಎಂ ಹುದ್ದೆ ಸೃಷ್ಟಿಸಿದ್ದರೆ ಇದೇ ಬಿಜೆಪಿ ಬಿಹಾರದಲ್ಲಿ ಇಬ್ಬರನ್ನು ಡಿಸಿಎಂ ಮಾಡಲು ಹೊರಟಿದೆ. ಈ ಮೂಲಕ, ಮತಗಳ ಧ್ರುವೀಕರಣಕ್ಕೆ ತನ್ನ ಚತುರ ದಾಳ ಉರುಳಿಸಿದೆ. ಮುಂದಿನ ಚುನಾವಣೆಯ ಲೆಕ್ಕಾಚಾರ ಮಾಡಿರುವುದು ಪಕ್ಕಾ ಆಗಿದೆ.
ವೈಶ್ಯ ಸಮುದಾಯದ ಧ್ರುವೀಕರಣ 55 ವರ್ಷದ ಕಾಥಿಹಾರ್ ಕ್ಷೇತ್ರದ ಶಾಸಕ ತಾರ್ ಕಿಶೋರ್ ಪ್ರಸಾದ್ ಹಿಂದುಳಿದ ವರ್ಗಕ್ಕೆ ಸೇರಿದವರು. ವೈಶ್ಯ ಸಮುದಾಯದ ಕಲ್ವಾರ್ ಜಾತಿಯವರಾದ ಕಿಶೋರ್ ಪ್ರಸಾದ್ಗೆ ABVP ಹಿನ್ನೆಲೆಯಿದೆ. ಬಿಹಾರದಲ್ಲಿ ಶೇ.23ರಷ್ಟು ವೈಶ್ಯ ಸಮುದಾಯದ ಮತಗಳಿವೆ. ಈ ಚುನಾವಣೆಯಲ್ಲಿ ಗೆದ್ದ ಈ ಸಮುದಾಯದ24 MLAಗಳಲ್ಲಿ 15 ಶಾಸಕರು ಬಿಜೆಪಿಯವರು. ಬಿಜೆಪಿಗೆ ಬಿಹಾರದಲ್ಲಿ ವೈಶ್ಯ, ಬನಿಯಾಗಳ ಪಕ್ಷವೆಂಬ ಹೆಸರಿದ್ದರೂ ಈ ಮತಗಳಲ್ಲಿ ಒಡಕು ಮೂಡುತ್ತಿದೆ. ಇದೇ ಕಾರಣದಿಂದ ಪ್ರಸಾದ್ರನ್ನು ಸುಶೀಲ್ ಕುಮಾರ್ ಮೋದಿ ಡಿಸಿಎಂ ಆಗಿ ಸೂಚಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ಗಾಳ ಇನ್ನೋರ್ವ ಡಿಸಿಎಂ ರೇಣು ದೇವಿ. ಅತೀ ಹಿಂದುಳಿದ ವರ್ಗದ ನೋನಿಯಾ ಸಮುದಾಯಕ್ಕೆ ರೇಣು ದೇವಿ ಸೇರುತ್ತಾರೆ. ಬೆತ್ತಿಯಾ ಕ್ಷೇತ್ರದಲ್ಲಿ 4 ಬಾರಿ ಶಾಸಕಿಯಾದ ರೇಣು ದೇವಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷೆಯೂ ಹೌದು. ಜೊತೆಗೆ ನಿತೀಶ್ 2ನೇ ಬಾರಿ ಸಿಎಂ ಆದಾಗ ಮಂತ್ರಿಯೂ ಆಗಿದ್ದರು. ಬಿಹಾರದ ಜನಸಂಖ್ಯೆಯಲ್ಲಿ ಶೇ.25ರಷ್ಟು ಪಾಲು ಈ ಹಿಂದುಳಿದ ಸಮುದಾಯದ್ದು. ಜೆಡಿಯು ಮತ್ತು ಆರ್ಜೆಡಿ 20ಕ್ಕಿಂತ ಹೆಚ್ಚು ಪ್ರತಿಶತ ಅಭ್ಯರ್ಥಿಗಳನ್ನು ಈ ಸಮುದಾಯದಿಂದಲೇ ಕಣಕ್ಕಿಳಿಸಿದ್ದವು. 62 ವರ್ಷದ ರೇಣು ದೇವಿಗೆ ಹಿಂದುಳಿದ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ಜವಾಬ್ದಾರಿಯನ್ನು ನೀಡುವುದು ಖಚಿತ.
ಕೇವಲ ಅಷ್ಟೇ ಅಲ್ಲ, ಬಿಜೆಪಿಗಿದೆ ಮಾಸ್ಟರ್ ಪ್ಲಾನ್! ಎರಡು ಉಪಮುಖ್ಯಮಂತ್ರಿಗಳ ಮೂಲಕ ನಿತೀಶ್ ಮೇಲೆ ಬಿಜೆಪಿ ಒತ್ತಡ ತರಬಹುದು. ಹೆಚ್ಚು ಸೀಟು ಗೆದ್ದೂ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವ ಮೂಲಕ ಅನುಕಂಪದ ಅಲೆಯನ್ನು ಹುಟ್ಟುಹಾಕಿ ನಿತೀಶ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಬಹುದು. ನಿತೀಶ್ ಸ್ವಯಂ ಪದತ್ಯಾಗ ಮಾಡುವ ಪರಿಸ್ಥಿತಿ ಸೃಷ್ಟಿಸುವ ಉಪಾಯ ಕೂಡ ಈ ಇಬ್ಬರು ಡಿಸಿಎಂಗಳನ್ನು ಸೃಷ್ಟಿಸಿದ ಹಿಂದಿನ ಕಾರಣ ಎಂಬ ವಿಶ್ಲೇಷಣೆ ಕೂಡ ಕೇಳಿಬಂದಿದೆ.
Published On - 6:04 pm, Mon, 16 November 20