ಡಿಎಂಕೆ ಮತ್ತೊಮ್ಮೆ ಡಿವೈಡ್ ಆಗುತ್ತಾ.. ತಮ್ಮನ ವಿರುದ್ಧ ತೊಡೆ ತಟ್ಟಿ ಪಕ್ಷ ಸ್ಥಾಪಿಸ್ತಾರಾ ಎಂ.ಕೆ. ಅಳಗಿರಿ?

ಡಿಎಂಕೆ ಮತ್ತೊಮ್ಮೆ ಡಿವೈಡ್ ಆಗುತ್ತಾ.. ತಮ್ಮನ ವಿರುದ್ಧ ತೊಡೆ ತಟ್ಟಿ ಪಕ್ಷ ಸ್ಥಾಪಿಸ್ತಾರಾ ಎಂ.ಕೆ. ಅಳಗಿರಿ?

ಈಗಾಗಲೇ ಒಂದು ಬಾರಿ ವಿಭಜನೆಯಾಗಿರೋ ದ್ರಾವಿಡ ಮುನ್ನೇತ್ರ ಕಳಗಂ.. ಅಂದ್ರೆ ಡಿಎಂಕೆ ಮತ್ತೊಂದು ಬಾರಿ ವಿಭಜನೆಗೆ ಸಿದ್ಧವಾಗಿ ನಿಂತಿದೆ. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಕೋಲಾಹಲ ಎಬ್ಬಿಸೋ ಸಾಧ್ಯತೆ ಇದೆ. ತಮಿಳುನಾಡು ರಾಜಕೀಯವೇ ಹಾಗೆ. ಅಲ್ಲಿ ಸಸ್ಪೆನ್ಸ್ ಇರುತ್ತೆ.. ಫ್ಯಾಮಿಲಿ ಡ್ರಾಮಾ ಇರುತ್ತೆ.. ಸಿದ್ಧಾಂತಗಳಿಂದಲೇ ಬೆಳೆದು ಬಂದ ಕಾರ್ಯಕರ್ತರ ಪಡೆ ಇರುತ್ತೆ.. ಇದಕ್ಕೂ ಮೀರಿದ ಒಬ್ಬ ಸೂಪರ್ ಹೀರೋ ಅಥವಾ ಸೂಪರ್ ಹಿರೋಯಿನ್ ಇರ್ತಾರೆ.. ಅವರನ್ನ ದೇವರಂತೆ ಆರಾಧಿಸೋ ಅಭಿಮಾನಿಗಳ ಬಳಗ ಇರುತ್ತೆ. ಯಾವುದೇ ಬ್ಲಾಕ್​ಬಸ್ಟರ್ […]

Ayesha Banu

|

Nov 17, 2020 | 7:08 AM

ಈಗಾಗಲೇ ಒಂದು ಬಾರಿ ವಿಭಜನೆಯಾಗಿರೋ ದ್ರಾವಿಡ ಮುನ್ನೇತ್ರ ಕಳಗಂ.. ಅಂದ್ರೆ ಡಿಎಂಕೆ ಮತ್ತೊಂದು ಬಾರಿ ವಿಭಜನೆಗೆ ಸಿದ್ಧವಾಗಿ ನಿಂತಿದೆ. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಕೋಲಾಹಲ ಎಬ್ಬಿಸೋ ಸಾಧ್ಯತೆ ಇದೆ.

ತಮಿಳುನಾಡು ರಾಜಕೀಯವೇ ಹಾಗೆ. ಅಲ್ಲಿ ಸಸ್ಪೆನ್ಸ್ ಇರುತ್ತೆ.. ಫ್ಯಾಮಿಲಿ ಡ್ರಾಮಾ ಇರುತ್ತೆ.. ಸಿದ್ಧಾಂತಗಳಿಂದಲೇ ಬೆಳೆದು ಬಂದ ಕಾರ್ಯಕರ್ತರ ಪಡೆ ಇರುತ್ತೆ.. ಇದಕ್ಕೂ ಮೀರಿದ ಒಬ್ಬ ಸೂಪರ್ ಹೀರೋ ಅಥವಾ ಸೂಪರ್ ಹಿರೋಯಿನ್ ಇರ್ತಾರೆ.. ಅವರನ್ನ ದೇವರಂತೆ ಆರಾಧಿಸೋ ಅಭಿಮಾನಿಗಳ ಬಳಗ ಇರುತ್ತೆ. ಯಾವುದೇ ಬ್ಲಾಕ್​ಬಸ್ಟರ್ ಸಿನಿಮಾಗೂ ಕಡಿಮೆ ಇಲ್ಲದ ರೋಚಕತೆ.. ತಮಿಳುನಾಡು ಪಾಲಿಟಿಕ್ಸ್​ನಲ್ಲಿ ಮಾತ್ರ ಎಲ್ಲರಿಗೂ ಸಿಗುತ್ತೆ. ಇದು ಅಲ್ಲಿನ ಹೆಗ್ಗಳಿಕೆಯೋ ಅಥವಾ ಜನ ಇದನ್ನೂ ಸಿನಿಮಾ ರೀತಿ ನೋಡೋದು ಕಾರಣವೋ ಅನ್ನೋದನ್ನ ಮಾತ್ರ ಹೇಳೋಕೆ ಯಾರಿಗೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯದಲ್ಲೇ ತಮಿಳುನಾಡು ರಾಜಕೀಯ ರೋಚಕವಾಗಿರುತ್ತೆ. ಇಂತಾ ಪೊಲಿಟಿಕಲ್ ಥ್ರಿಲ್ಲರ್​ಗೆ ಮತ್ತೊಂದು ರೋಚಕ ತಿರುವು ಸಿಗೋ ಎಲ್ಲ ಸಾಧ್ಯತೆಗಳು ಕಾಣ ಸಿಗ್ತಿವೆ.

ಮತ್ತೊಂದು ವಿಭಜನೆ ಕಾಣಲಿದ್ಯಾ ದ್ರಾವಿಡ ಮುನ್ನೇತ್ರ ಕಳಗಂ? ಡಿಎಂಕೆ ಅಂದ್ರೆ ದ್ರಾವಿಡ ಮುನ್ನೇತ್ರ ಕಳಗಂ ಅನ್ನೋದೇ ದ್ರಾವಿಡ ಕಳಗಂ ವಿಭಜನೆಯಿಂದ ಹುಟ್ಟಿದ್ದು. ಸಿ.ಎನ್.ಅಣ್ಣಾದೊರೈ ಮತ್ತು ಇ.ವಿ.ರಾಮಸ್ವಾಮಿ ಪೆರಿಯಾರ್​ರಿಂದ ಡಿಕೆ ಹುಟ್ಟಿತ್ತು. ಇಬ್ಬರು ದೊಡ್ಡ ಲೀಡರ್​ಗಳ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹುಟ್ಟಿದ್ದೇ ಡಿಎಂಕೆ. ಅಣ್ಣಾದೊರೈ ಇರೋವರೆಗೆ ಡಿಎಂಕೆ ವಿಭಜನೆ ಆಗಿರಲಿಲ್ಲ. ಯಾವಾಗ ಅಣ್ಣಾದೊರೈ ಇಹಲೋಕ ತ್ಯಜಿಸಿದ್ರೋ.. ಅಲ್ಲಿ ಇಬ್ಬರು ನಾಯಕರು ಹುಟ್ಟಿಕೊಂಡಿದ್ರು. ಅವರೇ ಮುತ್ತುವೇಲ್ ಕರುಣಾನಿಧಿ ಮತ್ತು ಮರುತ್ತೂರ್ ಗೋಪಾಲನ್ ರಾಮಚಂದ್ರನ್ ಅಲಿಯಾಸ್ ಎಂಜಿಆರ್.

ಅಣ್ಣಾ ನಿಧನದ ಬಳಿಕ ಇಬ್ಬರ ನಡುವಿನ ಕಲಹದಿಂದ ಡಿಎಂಕೆ ಎರಡು ಹೋಳಾಗಿತ್ತು. ಆಗ ಹುಟ್ಟಿಕೊಂಡಿದ್ದೇ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ. ಕಲಹ ಇಲ್ಲಿಗೆ ಮುಗೀತು ಅಂದುಕೊಂಡ್ರೆ.. ನಿಮ್ಮ ಊಹೆ ತಪ್ಪಾಗುತ್ತೆ. ಈಗ ಇನ್ನೊಂದು ಕಲಹಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಸಹೋದರರ ಸವಾಲ್. ಒಂದೆಡೆ ಕರುಣಾನಿಧಿಯ ಹಿರಿಯ ಮಗ ಅಳಗಿರಿ.. ಮತ್ತೊಂದೆಡೆ ಕಿರಿಯ ಮಗ ಎಂ.ಕೆ.ಸ್ಟಾಲಿನ್. ಕರುಣಾನಿಧಿ ಜೀವಂತವಾಗಿದ್ದಾಗಲೂ ಇಬ್ಬರ ನಡುವೆ ಪಕ್ಷವನ್ನ ಮುನ್ನಡೆಸಲು ಪೈಪೋಟಿ ಇತ್ತು.

ಆದ್ರೆ, ಕರುಣಾನಿಧಿ ಕಿರಿಯ ಮಗನ ಪರ ವಾಲಿದ್ರು. ಆಗ ಸ್ಟಾಲಿನ್ ಗೆಲುವಿನ ನಗೆ ಬೀರಿದ್ರು. ಹೀಗಂತಾ ಅಳಗಿರಿ ಸಾಮಾನ್ಯದವರೇನಲ್ಲ. ತಮಿಳುನಾಡಿನ ಅತ್ಯಂತ ಪ್ರಮುಖ ಮಧುರೈ ಪ್ರಾಂತ್ಯದಲ್ಲಿ ತಮ್ಮದೇ ವರ್ಚಸ್ಸು, ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಕರುಣಾನಿಧಿ ನಿಧನದ ಬಳಿಕ ಇದನ್ನೇ ದಾಳವಾಗಿ ಮಾಡಿಕೊಂಡಿರೋ ಅಳಗಿರಿ, ಕಲೈಗ್ನರ್ ದ್ರಾವಿಡ ಮುನ್ನೇತ್ರ ಕಳಗಂ ಸ್ಥಾಪನೆಗೆ ಮುಂದಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಮೂರೇ ದಿನದಲ್ಲಿ ಹೊಸ ಪಾರ್ಟಿ ಸ್ಥಾಪನೆಯಾಗಲಿದ್ದು ಇದಾದ ಮರುದಿನವೇ ಎನ್​ಡಿಎ ತೆಕ್ಕೆಗೆ ಪಕ್ಷ ಸೇರ್ಪಡೆಯಾಗೋ ಸಾಧ್ಯತೆ ಇದೆ. ಇದು ತಮಿಳುನಾಡಿನಲ್ಲಿ ಈಗ ಮತ್ತೆ ತನ್ನ ಹಿಂದಿನ ಚಾರ್ಮ್​ಗೆ ಮರಳ್ತಿರೋ ಡಿಎಂಕೆ-ಕಾಂಗ್ರೆಸ್ ಮೈತ್ರಿಗೆ ಸೆಡ್ಡು ಹೊಡೆಯಲು, ಬಿಜೆಪಿ ನೇತೃತ್ವದ ಎನ್​ಡಿಎಗೆ ನೆರವಾಗಲಿದೆ.

ಪಕ್ಷ ಸ್ಥಾಪಿಸಿ ಅಮಿತ್ ಶಾ ಭೇಟಿಯಾಗ್ತಾರಾ ಎಂ.ಕೆ.ಅಳಗಿರಿ? ನವೆಂಬರ್ 21ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಪಕ್ಷ ಸ್ಥಾಪಿಸಿ ಅಮಿತ್ ಶಾ ಭೇಟಿಗೆ ಎಂ.ಕೆ.ಅಳಗಿರಿ ಉತ್ಸುಕರಾಗಿದ್ದಾರೆ ಅಂತಾ ಅವರ ಆಪ್ತ ಮೂಲಗಳು ಹೇಳಿವೆ. ಈ ಕುರಿತು ಹಲವು ದಿನಗಳಿಂದ ಮಾತುಕತೆ ನಡೆದಿದ್ದು, ಎನ್​ಡಿಎ ಸೇರಲು ಅಳಗಿರಿ ಉತ್ಸುಕತೆ ತೋರಿದ್ದಾರೆ ಅಂತಾ ಗೊತ್ತಾಗಿದೆ. ಒಂದು ವೇಳೆ ಅಳಗಿರಿ ಎನ್​ಡಿಎ ತೆಕ್ಕೆಗೆ ಬಿದ್ರೆ, ತಮ್ಮನ ಸೋಲಿಸಲು ಬದ್ಧ ವೈರಿ ಅಂತಲೇ ಪರಿಗಣಿಸೋ ಎಡಿಎಂಕೆ ಜೊತೆಗೆ ಅಳಗಿರಿ ಕೈ ಜೋಡಿಸದಂತಾಗಿ, ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ತಮಿಳುನಾಡು ಪೊಲಿಟಿಕಲ್ ಥ್ರಿಲ್ಲರ್​ಗೆ ಮತ್ತೊಂದು ರೋಚಕ ತಿರುವು ಸಿಗುವ ಸಾಧ್ಯತೆಗಳು ಕಂಡು ಬರ್ತಿದ್ದು, ಎಡಿಎಂಕೆಯ ಒಳಜಗಳವನ್ನ ಬಳಸಿಕೊಂಡು ಅಧಿಕಾರಕ್ಕೇರೋ ಕನಸು ಕಾಣ್ತಿದ್ದ ಸ್ಟಾಲಿನ್​ಗೆ ಭರ್ಜರಿ ಹೊಡೆತ ನೀಡೋದ್ರಲ್ಲಿ ಸಂಶಯವಿಲ್ಲ. ಈಗಿರೋ ಊಹಾಪೋಹಗಳು ನಿಜವಾದ್ರೆ, ತಮಿಳುನಾಡು ರಾಜಕೀಯ ಮತ್ತಷ್ಟು ರಂಗು ಪಡೆಯೋದಂತೂ ಸುಳ್ಳಲ್ಲ.

Follow us on

Related Stories

Most Read Stories

Click on your DTH Provider to Add TV9 Kannada