AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿಯ ಬೆಂಕಿ ತಗುಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಮೊಮ್ಮಗಳ ಸಾವು..

ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳು ಪಟಾಕಿಯ ಬೆಂಕಿ ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು.. ರೀಟಾ ಬಹುಗುಣ ಜೋಶಿ, ಪ್ರಯಾಗ್‌ರಾಜ್‌ ಕ್ಷೇತ್ರದ ಸಂಸದೆಯಾಗಿದ್ದು, ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಈ ಅವಘಡದಲ್ಲಿ ಮೃತಪಟ್ಟಿದ್ದಾಳೆ. ರೀಟಾ ಬಹುಗುಣ ಅವರ ಮೊಮ್ಮಗಳು ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ […]

ಪಟಾಕಿಯ ಬೆಂಕಿ ತಗುಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಮೊಮ್ಮಗಳ ಸಾವು..
ಪೃಥ್ವಿಶಂಕರ
| Edited By: ಸಾಧು ಶ್ರೀನಾಥ್​|

Updated on: Nov 17, 2020 | 11:32 AM

Share

ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳು ಪಟಾಕಿಯ ಬೆಂಕಿ ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು.. ರೀಟಾ ಬಹುಗುಣ ಜೋಶಿ, ಪ್ರಯಾಗ್‌ರಾಜ್‌ ಕ್ಷೇತ್ರದ ಸಂಸದೆಯಾಗಿದ್ದು, ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಈ ಅವಘಡದಲ್ಲಿ ಮೃತಪಟ್ಟಿದ್ದಾಳೆ. ರೀಟಾ ಬಹುಗುಣ ಅವರ ಮೊಮ್ಮಗಳು ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ ಪಟಾಕಿ ಸದ್ದಿನಲ್ಲಿ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ.

ಹೀಗಾಗಿ ಈ ಬೆಂಕಿ ಅವಘಡದಲ್ಲಿ ಬಾಲಕಿಗೆ ಶೇಕಡಾ 60 ರಷ್ಟು ಸುಟ್ಟಗಾಯಗಳಾಗಿದ್ದವು. ಕೂಡಲೇ ಬಾಲಕಿಯನ್ನು ಏರ್ ‌ಆ್ಯಂಬುಲೆನ್ಸ್‌ನಲ್ಲಿ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More