ಸೈಬರ್ ಕ್ರೈಂ ತಡೆಗೆ ಯೋಜನೆ ರೂಪಿಸಿದ 17ರ ಪೋರನಿಗೆ ಸಿಕ್ತು ವಿಶ್ವ ಶಾಂತಿ ಪ್ರಶಸ್ತಿ!

ಸೈಬರ್ ಕ್ರೈಂ ತಡೆಗೆ ಯೋಜನೆ ರೂಪಿಸಿದ 17ರ ಪೋರನಿಗೆ ಸಿಕ್ತು ವಿಶ್ವ ಶಾಂತಿ ಪ್ರಶಸ್ತಿ!

ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಚಟುವಟಿಕೆಗಳನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಹೋರಾಡುತ್ತಿವೆ. ಡಿಜಿಟಲ್ ಲೋಕದ ಅಪರಾಧಗಳು ಮಾನಸಿಕ ಹಿಂಸೆಗೆ ಅತಿ ಹೆಚ್ಚು ಕಾರಣವಾಗುತ್ತಿದ್ದು, ಎಷ್ಟೋ ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ಮಕ್ಕಳ ಜೀವವನ್ನೂ ಬಲಿ ಪಡೆಯುವುದರೊಂದಿಗೆ ಸುರಕ್ಷತೆ ದೃಷ್ಟಿಯಿಂದ ದೊಡ್ಡ ಸವಾಲಾಗಿಬಿಟ್ಟಿದೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ಸಲುವಾಗಿ ಬಾಂಗ್ಲಾದೇಶದ 17 ವರ್ಷದ ಹುಡುಗ ಸದತ್ ರೆಹಮಾನ್ ಎಂಬಾತ ಮೊಬೈಲ್ ಆ್ಯಪ್ ಒಂದನ್ನು ರಚಿಸಿದ್ದ. ಹದಿನೈದು ವರ್ಷದ ಹುಡುಗಿಯೊಬ್ಬಳು ಸೈಬರ್ ಕಿರುಕುಳದಿಂದ ಮನನೊಂದು ಆತ್ಮಹತ್ಯೆ […]

Ayesha Banu

|

Nov 16, 2020 | 1:22 PM

ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಚಟುವಟಿಕೆಗಳನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಹೋರಾಡುತ್ತಿವೆ. ಡಿಜಿಟಲ್ ಲೋಕದ ಅಪರಾಧಗಳು ಮಾನಸಿಕ ಹಿಂಸೆಗೆ ಅತಿ ಹೆಚ್ಚು ಕಾರಣವಾಗುತ್ತಿದ್ದು, ಎಷ್ಟೋ ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ಮಕ್ಕಳ ಜೀವವನ್ನೂ ಬಲಿ ಪಡೆಯುವುದರೊಂದಿಗೆ ಸುರಕ್ಷತೆ ದೃಷ್ಟಿಯಿಂದ ದೊಡ್ಡ ಸವಾಲಾಗಿಬಿಟ್ಟಿದೆ.

ಈ ಸಮಸ್ಯೆಗೆ ಪರಿಹಾರ ಹುಡುಕುವ ಸಲುವಾಗಿ ಬಾಂಗ್ಲಾದೇಶದ 17 ವರ್ಷದ ಹುಡುಗ ಸದತ್ ರೆಹಮಾನ್ ಎಂಬಾತ ಮೊಬೈಲ್ ಆ್ಯಪ್ ಒಂದನ್ನು ರಚಿಸಿದ್ದ. ಹದಿನೈದು ವರ್ಷದ ಹುಡುಗಿಯೊಬ್ಬಳು ಸೈಬರ್ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸದತ್ ಈ ರೀತಿಯ ಅಪರಾಧ ಕೃತ್ಯಗಳನ್ನು ತಡೆಯಲೇಬೇಕು ಎಂದು ನಿರ್ಧರಿಸಿ ಸೈಬರ್ ಟೀನ್ಸ್ ಹೆಸರಿನ ಆ್ಯಪ್ ನಿರ್ಮಿಸಿದ್ದ.

ಸೈಬರ್ ಟೀನ್ಸ್ ಆ್ಯಪ್ 300ಕ್ಕೂ ಅಧಿಕ ಮಕ್ಕಳನ್ನು ಸೈಬರ್ ನಿಂದನೆಯಿಂದ ಬಚಾವು ಮಾಡಿದ್ದು ಎಂಟು ಜನ ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿಯೂ ಸಹಕಾರಿಯಾಗಿದೆ. ಇದುವರೆಗೂ ಸುಮಾರು 45,000ಕ್ಕೂ ಹೆಚ್ಚು ಜನರನ್ನು ಸೈಬರ್ ಟೀನ್ಸ್ ಯಶಸ್ವಿಯಾಗಿ ತಲುಪಿದೆ. ಜಾಗತಿಕ ಮಟ್ಟದಲ್ಲಿ ಇದೊಂದು ಮಹತ್ವಪೂರ್ಣ ಕೆಲಸವಾಗಿದ್ದು ಆತನ ಈ ಸಾಧನೆಯನ್ನು ಪ್ರಶಂಸಿಸಿ 2020ನೇ ಸಾಲಿನ ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ನೊಬೆಲ್ ಪುರಸ್ಕೃತೆ ಯೂಸಫ್ ಮಲಾಲಾ ಪ್ರಶಸ್ತಿ ಘೋಷಣೆ ಮಾಡಿದ್ದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸದತ್ ರೆಹಮಾನ್, ಸೈಬರ್ ಕ್ರೈಂ ಸಂಪೂರ್ಣ ನಿಂತು ಸೈಬರ್ ಟೀನ್ಸ್ ಆ್ಯಪ್ ಅವಶ್ಯಕತೆ ಇಲ್ಲ ಎಂದಾದಾಗಲೇ ನನ್ನ ನಿಜವಾದ ಗೆಲುವು ಎಂದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada