ಬೆಂಗಳೂರು: ಸುಮಲತಾ ಮಂಡ್ಯ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
ಇದು ರಿಯಾಕ್ಟ್ ಮಾಡುವಂತಹ ವಿಷಯ ಅಲ್ಲ. ಚುನಾವಣೆಯಿಂದಲೂ ಇಂತಹ ಮಾತುಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಅಂಬರೀಷ್ ಇರುವಾಗ ಯಾರಿಗೂ ಈ ರೀತಿ ಮಾತಾಡಲು ಧೈರ್ಯ ಇರಲಿಲ್ಲ. ಈಗ ಎಲ್ಲರೂ ಮಾತಾಡ್ತಿದ್ದಾರೆ, ಇರಲಿ ನಾನು ನನ್ನ ಜನರಿಗೆ ಉತ್ತರದಾಯಿತ್ವವೇ ಹೊರತು ಪಕ್ಕದ ಕ್ಷೇತ್ರದ ಎಂಪಿಗೆ ಅಲ್ಲ ಎಂದಿದ್ದಾರೆ.
ಪ್ರತಾಪ್ ಸಿಂಹ ಪೇಟೆ ರೌಡಿ ತರ ಮಾತಾನಾಡಿದ್ದಾರೆ.. ಪಕ್ಕದ ಕ್ಷೇತ್ರದ ಸಂಸದರಿಗೆ ನನ್ನ ಕ್ಷೇತ್ರದ ಬಗ್ಗೆ ಮಾತಾಡುವ ಹಕ್ಕು ಇಲ್ಲ. ಅಂಬರೀಷ್ ಅಭಿಮಾನಿಗಳು, ನನ್ನ ಮತದಾರರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಅಂತಾ ಗೊತ್ತಿದೆ. ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಈ ರೀತಿಯ ಹೇಳಿಕೆ ಸರಿಯಲ್ಲ. ಸಂಸದರ ಭಾಷೆಯನ್ನು ಅವರು ಬಳಸಿದ್ದರೆ ನಾನು ರಿಯಾಕ್ಟ್ ಮಾಡಬಹುದು. ಒಬ್ಬ ಪೇಟೆ ರೌಡಿ ತರ ಮಾತಾಡೋದಾದರೆ ನನ್ನ ರಿಯಾಕ್ಷನ್ಗೆ ಅವರಿಗೆ ಅರ್ಹತೆ ಇಲ್ಲ ಎಂದಿದ್ದಾರೆ.
ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಿನ ಜನ ಸಮಸ್ಯೆಗಳನ್ನು ಬಂದು ನಮಗೂ ಹೇಳ್ತಾರೆ. ನಾನು ಬರೀ ಮಂಡ್ಯ ಎಂಪಿ ಅಲ್ಲ ಬದಲಿಗೆ ನಾನು ಮೈಸೂರಿನ ಒಂದು ಭಾಗದ ಎಂಪಿ ಕೂಡಾ. ಅಲ್ಲದೆ ಕೆ.ಆರ್. ನಗರ ನನ್ನ ಕ್ಷೇತ್ರಕ್ಕೆ ಸೇರುತ್ತದೆ. ರಾಜಕಾರಣಿಗಳು ಹೋದಾಗ ಜನ ಬಂದು ಹೇಳುವುದು ಸಾಮಾನ್ಯ, ಹಾಗಾಗಿ ಈ ರೀತಿಯ ಮಾತುಗಳು ತುಂಬಾ ಬೇಜವಾಬ್ದಾರಿತನವನ್ನು ತೋರಿಸುತ್ತವೆ. ಎರಡು ಬಾರಿ ಸಂಸದರಾದವರು ಅದನ್ನು ಅರಿತು ನಡೆದುಕೊಳ್ಳಬೇಕು, ಅರಿತು ಮಾತಾಡಿದರೆ ಅವರಿಗೇ ಒಳ್ಳೆಯದಾಗುತ್ತದೆ ಎಂದರು.
ಒದನ್ನೂ ಓದಿ: ಸುಮಲತಾ ಏನೂ ಕೆಲ್ಸ ಮಾಡ್ತಿಲ್ಲ, ಮಂಡ್ಯದ ಏನೇ ಕೆಲಸ ಇದ್ರೂ ನನಗೆ ಹೇಳಿ -ಮೈಸೂರು ಸಂಸದ ಪ್ರತಾಪ್