ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್: ರೆಡಿಯಾಯ್ತು 2 ತಂತ್ರ

|

Updated on: Dec 12, 2020 | 9:05 AM

ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಹೊಸ ಮಾಸ್ಟರ್ ​ಪ್ಲ್ಯಾನ್​ ರೂಪಿಸಲು ಮುಂದಾಗಿದೆ. ನೌಕರರು ನಾಳೆಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ರೆ ಸರ್ಕಾರ ಎರಡು ತಂತ್ರಗಳನ್ನು ಬಳಸಲು ಸಜ್ಜಾಗಿದೆ.

ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್: ರೆಡಿಯಾಯ್ತು 2 ತಂತ್ರ
ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್
Follow us on

ಬೆಂಗಳೂರು: ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಹೊಸ ಮಾಸ್ಟರ್ ​ಪ್ಲ್ಯಾನ್​ ರೂಪಿಸಲು ಮುಂದಾಗಿದೆ. ನೌಕರರು ನಾಳೆಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ರೆ ಸರ್ಕಾರ ಎರಡು ತಂತ್ರಗಳನ್ನು ಬಳಸಲು ಸಜ್ಜಾಗಿದೆ. ಅಂದ ಹಾಗೆ, ನೌಕರರ ಮೇಲೆ ಒತ್ತಡ ಹೇರಲು ಸರ್ಕಾರ ರೂಪಿಸಿರೋ 2 ತಂತ್ರಗಳೇನು?

ರಾಜ್ಯ ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆಯಲ್ಲಿ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಖಾಸಗಿ ಚಾಲಕ ಹಾಗೂ ನಿರ್ವಾಹಕರನ್ನ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಿನ್ನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜೊತೆಗೆ, ನಾಳೆ ಒಳಗೆ ಕರ್ತವ್ಯಕ್ಕೆ ಹಾಜರಾಗಲು ನೌಕರರಿಗೆ ಡೆಡ್​ಲೈನ್​ ನೀಡಲಾಗಿದ್ದು ಒಂದು ವೇಳೆ ಅವರು ಮುಷ್ಕರ ಮುಂದುವರಿಸಿದರೆ ತನ್ನ ಎರಡನೇ ತಂತ್ರವಾಗಿ ಎಸ್ಮಾ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ತನ್ನ ಎರಡು ತಂತ್ರಗಳಿಂದ ಸಾರಿಗೆ ನೌಕರರ ಮೇಲೆ ಒತ್ತಡ ಹೇರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಇಂದು ಚರ್ಚೆ ನಡೆಸಬೇಕಾದ ಅನಿವಾರ್ಯತೆಯಲ್ಲಿದೆ. ಬೇರೆ ಪ್ರತಿಭಟನೆಗಳ ರೀತಿ ಸಾರಿಗೆ ಮುಷ್ಕರವನ್ನು ಕಡೆಗಣನೆ ಮಾಡುವುದು ಅಸಾಧ್ಯ. ಹೀಗಾಗಿ, ಸರ್ಕಾರ ಎಸ್ಮಾ ಜಾರಿಗೆ ತರುವ ಎಚ್ಚರಿಕೆ ನೀಡಿದೆ.

ಅಂದ ಹಾಗೆ, ಸಿದ್ದರಾಮಯ್ಯ ಸರ್ಕಾರದಲ್ಲೂ ಸಾರಿಗೆ ನೌಕರರ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಆದರೆ, ನಾಲ್ಕೈದು ದಿನಗಳ ಬಳಿಕ ಮಾತುಕತೆ ಮೂಲಕ ಸಮಸ್ಯೆ ನಿವಾರಣೆಯಾಗಿತ್ತು.