
ಬೆಂಗಳೂರು: ನಿಮ್ಮ ನೆಚ್ಚಿನ ಸಿಲ್ಲಿ ಲಲ್ಲಿ, ಮಗಳು ಜಾನಕಿ, ಜೊತೆ ಜೊತೆಯಲಿ ಮುಂತಾದ ಧಾರಾವಾಹಿಗಳು ಎಂದಿನಂತೆ ಶೀಘ್ರವೇ ಕಿರುತೆರೆಯಲ್ಲಿ ಪ್ರಸಾರ ಮುಂದುವರಿಸಲಿವೆ. ಲಾಕ್ಡೌನ್ ಎಫೆಕ್ಟ್ನಿಂದ ಧಾರಾವಾಹಿಗಳು ಬರ್ತಿಲ್ಲ ಅಂತ ಬೇಜಾರಾಗಿದ್ದ ಗೃಹಣಿಯರಿಗೆ ಹಾಗೂ ಮನೆಯಲ್ಲಿರುವ ಕಿರುತೆರೆ ನಟರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಕಂದಾಯ ಸಚಿವ ಆರ್ ಅಶೋಕ್ ಧಾರಾವಾಹಿಗಳನ್ನು ಚಿತ್ರೀಕರಣ ಮಾಡಬಹುದು ಎಂದಿದ್ದಾರೆ. ಆದರೆ ಕೆಲ ನಿರ್ಬಂಧಗಳನ್ನು ಹೇರಿದ್ದಾರೆ. ಮನೆಯೊಳಗೆ ಮಾತ್ರ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ರಸ್ತೆಯಲ್ಲಿ, ಹೊರಗಡೆ ಚಿತ್ರೀಕರಣ ಮಾಡುವಂತಿಲ್ಲ. ಸಿನಿಮಾ, ರಿಯಾಲಿಟಿ ಶೋ ಮಾಡುವಂತಿಲ್ಲ. ಚಿತ್ರೀಕರಣದ ವೇಳೆ ಕಡಿಮೆ ಸಂಖ್ಯೆಯಲ್ಲಿ ಜನರಿರಬೇಕು ಎಂದು ಆರ್ ಅಶೋಕ್ ತಿಳಿಸಿದ್ದಾರೆ.
ಇಂದು ಕಿರುತರೆ ಕಲಾವಿದರ ನಿಯೋಗ ಸಿಎಂ ಬಿಎಸ್ ಯಡಿಯೂರಪ್ಪರವರನ್ನು ಭೇಟಿಯಾಗಿ ಮನವಿ ಮಾಡಿತ್ತು, ಹಾಗಾಗಿ ಅವರ ಮನವಿಯನ್ನು ಪರಿಶೀಲಿಸಿ, ಸಿಎಂ ನೇತೃತ್ವದಲ್ಲಿ ಒಪ್ಪಿಗೆ ನೀಡಲಾಗಿದೆ. ರಿಯಾಲಿಟಿ ಶೋ ಸೇರಿದಂತೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಸದ್ಯಕ್ಕೆ ಅನುಮತಿ ನೀಡಿಲ್ಲ.