ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ರಾಜ್ಯ ತತ್ತರಿಸಿ ಹೋಗಿತ್ತು. ಕೆಲಸ, ಕಾರ್ಯಗಳಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ರು. ಸದ್ಯ ಲಾಕ್ಡೌನ್ ಸಡಿಲಿಕೆಯಾಗಿದ್ದು, ರಾಜ್ಯ ನಾರ್ಮಲ್ ಮೂಡ್ಗೆ ಬಂದಿದೆ. ಜೂನ್ 8ರಿಂದ ಮಸೀದಿ, ದರ್ಗಾ ಓಪನ್‌ಗೆ ಅನುಮತಿ ನೀಡಲಾಗಿದೆ. ರಂಜಾನ್ಗೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ್ದ ಜನ ಮಸೀದಿಗೆ ಬಂದು ನಮಾಜ್ ಮಾಡುವಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಅಲ್ಪಸಂಖ್ಯಾತ ಆಯೋಗದ ಮಾರ್ಗಸೂಚಿ:
-ಎಲ್ಲರೂ ಮನೆಯಲ್ಲೇ ಸ್ವಚ್ಛತೆ ಮಾಡಿಕೊಂಡು ಬರಬೇಕು
-ಮಸೀದಿ ಆವರಣದಲ್ಲಿ ವಜುಕೊಳದ ಬದಲು ನಲ್ಲಿ ಬಳಕೆ
-ಶೌಚಾಲಯಗಳನ್ನು ಶುಚಿಯಾಗಿ ಇಡಬೇಕು
-ಮಸೀದಿಯ ಒಳಗೆ, ಹೊರಗೆ ಹೋಗಲು ಒಂದೇ ದ್ವಾರ
-ಪ್ರಾರ್ಥನೆಗೂ ಮುನ್ನ ಸಭಾಂಗಣದಲ್ಲಿ ಫ್ಯೂಮಿಗೇಷನ್
-ಪ್ರಾರ್ಥನಾ ಸಭಾಂಗಣದ ಪ್ರವೇಶಕ್ಕೂ ಮುನ್ನ ಪರೀಕ್ಷೆ
-ಎಲ್ಲಾ ಮುಸ್ಲಿಮರ ದೇಹದ ತಾಪಮಾನ ಪರೀಕ್ಷಿಸಬೇಕು
-ಮಸೀದಿಯಲ್ಲಿ 1-2 ಮೀ. ಸಾಮಾಜಿಕ ಅಂತರ ಕಡ್ಡಾಯ
-10-15 ನಿಮಿಷಗಳಲ್ಲಿ ಪ್ರಾರ್ಥನೆಯನ್ನು ಮುಗಿಸಬೇಕು
-ಪ್ರಾರ್ಥನೆಗೆ ಬರುವವರು ಪ್ರೇಯರ್ ಮ್ಯಾಟ್ ತರಬೇಕು
-ಸುನ್ನತ್, ನಫೀಲ್ ಪ್ರಾರ್ಥನೆ ಮನೆಯಲ್ಲೇ ಮಾಡಬೇಕು
-ಮಸೀದಿ ಆವರಣದಲ್ಲಿ ನಿಂತು ಚರ್ಚೆಯಲ್ಲಿ ತೊಡಗಬಾರದು
-ಮಸೀದಿ, ದರ್ಗಾ ಆವರಣದಲ್ಲಿ ಭಿಕ್ಷಾಟನೆ ನಿಷೇಧ
-ಗೋರಿಗಳ ಮೇಲೆ ನಮಸ್ಕರಿಸುವುದನ್ನು ನಿಷೇಧ
ಈ ರೀತಿ ಮಸೀದಿಗಳು, ದರ್ಗಾಗಳಿಗೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಕೆಲ ಮಾರ್ಗಸೂಚಿಯನ್ನ ನೀಡಿದೆ.
Published On - 12:07 pm, Sun, 31 May 20