ಕಾಂಗ್ರೆಸ್ ನಾಯಕರ ಹೋರಾಟಕ್ಕೆ ಪ್ರತಿಫಲ; ವಿಧಾನಸೌಧ ಬಳಿ ಇದ್ದ ಜವಾಹರಲಾಲ್ ನೆಹರು ಪ್ರತಿಮೆ ಸ್ಥಳಾಂತರ

| Updated By: sandhya thejappa

Updated on: Jun 26, 2021 | 1:06 PM

ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ನೆಹರು ಪ್ರತಿಮೆ ಸ್ಥಳಾಂತರವಾಗಿತ್ತು. ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ.ಕೆ.ಗೋವಿಂದರಾಜ್ ಪರಿಷತ್​ನಲ್ಲಿ ಪ್ರಸ್ತಾಪಿಸಿ, ಪತ್ರ ಬರೆದಿದ್ದರು.

ಕಾಂಗ್ರೆಸ್ ನಾಯಕರ ಹೋರಾಟಕ್ಕೆ ಪ್ರತಿಫಲ; ವಿಧಾನಸೌಧ ಬಳಿ ಇದ್ದ ಜವಾಹರಲಾಲ್ ನೆಹರು ಪ್ರತಿಮೆ ಸ್ಥಳಾಂತರ
ಮೂಲ ಸ್ಥಾನಕ್ಕೆ ಜವಾಹರಲಾಲ್ ನೆಹರು ಪ್ರತಿಮೆ ಸ್ಥಳಾಂತರ ಮಾಡಲಾಯಿತು
Follow us on

ಬೆಂಗಳೂರು; ವಿಧಾನಸೌಧ ಬಳಿ ಇದ್ದ ನೆಹರು ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿದ್ದ ನೆಹರು ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ನೆಹರು ಪ್ರತಿಮೆ ಪೂರ್ವ ಭಾಗಕ್ಕೆ ಶಿಫ್ಟ್ ಮಾಡಲಾಗಿದೆ. ಕ್ರೇನ್ ಮೂಲಕ ನೆಹರು ಪ್ರತಿಮೆ ಕೆಳಗೆ ಇಳಿಸಿದ ಸಿಬ್ಬಂದಿ, ಕ್ರೇನ್ ಮೂಲಕವೇ ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ ಸ್ಥಳಾಂತರ ಮಾಡಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ನೆಹರು ಪ್ರತಿಮೆ ಸ್ಥಳಾಂತರವಾಗಿತ್ತು. ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ.ಕೆ.ಗೋವಿಂದರಾಜ್ ಪರಿಷತ್​ನಲ್ಲಿ ಪ್ರಸ್ತಾಪಿಸಿ, ಪತ್ರ ಬರೆದಿದ್ದರು. ಸಿಎಂ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಗೋವಿಂದರಾಜು, ಮೊದಲ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಪ್ರತಿಮೆ ಸ್ಥಳಾಂತರ ವಿಚಾರ ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. 2009ರಲ್ಲಿ ಮೆಟ್ರೋ ಸುರಂಗ ಮಾರ್ಗಕ್ಕಾಗಿ ಮೂರು ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿತ್ತು.

ಮೆಟ್ರೋ ಸುರಂಗ ಮಾರ್ಗದ ವೇಳೆ ತಾಂತ್ರಿಕ ಅಡಚಣೆಯಿಂದ ನೆಹರು ಪ್ರತಿಮೆಯು ವಿಧಾನಸೌಧ ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಸ್ಥಳಾಂತರವಾಗಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲು ಹತ್ತಿತ್ತು. ಮೆಟ್ರೊ ಕಾಮಗಾರಿ ಮುಗಿದರೂ ಕೂಡ ಪ್ರತಿಮೆ ಮೂಲ ಸ್ಥಾನಕ್ಕೆ ಸ್ಥಳಾಂತರ ಮಾಡದೇ ಸರ್ಕಾರ ವಿಳಂಬ ಮಾಡಿತ್ತು.

ಕ್ರೇನ್ ಮೂಲಕ ನೆಹರು ಪ್ರತಿಮೆ ಕೆಳಗೆ ಇಳಿಸಲಾಯಿತು

ಈ ಕುರಿತು 2017 ರಿಂದಲೇ ಕಾಂಗ್ರೆಸ್ ನಾಯಕರು ಸತತ ಹೋರಾಟ ನಡೆಸಿದ್ದರು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿ ಹಲವರಿಂದ ನೆಹರು ಪ್ರತಿಮೆ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಒತ್ತಡ ಹಾಕಿದ್ದರು. ಇದೀಗ ಅಂತಿಮವಾಗಿ ನೆಹರು ಪುತ್ಥಳಿ ಮೂಲ ಸ್ಥಾನಕ್ಕೆ ಬಂದಿದ್ದು, ಕಾಂಗ್ರೆಸ್ ನಾಯಕರ ಬೇಡಿಕೆ ಈಡೇರಿದೆ.

ಇದನ್ನೂ ಓದಿ

CoWin Vaccination Certificate: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ನಿಮ್ಮ ವಿವರಗಳು ತಪ್ಪಾಗಿದ್ದರೆ ಹೀಗೆ ಸರಿಪಡಿಸಿಕೊಳ್ಳಿ

ಕೊರೊನಾ ರೂಪಾಂತರ ವೈರಸ್​ಗಳಲ್ಲೆಲ್ಲ ಡೆಲ್ಟಾ ವೈರಾಣು ತುಂಬ ವೇಗವಾಗಿ ಹರಡಬಲ್ಲದು, ಅಪಾಯಕಾರಿಯೂ ಹೌದು: ವಿಶ್ವ ಆರೋಗ್ಯ ಸಂಸ್ಥೆ

(statue of Jawaharlal Nehru has been shifted to its original location in Vidhana Soudha)