AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CoWin Vaccination Certificate: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ನಿಮ್ಮ ವಿವರಗಳು ತಪ್ಪಾಗಿದ್ದರೆ ಹೀಗೆ ಸರಿಪಡಿಸಿಕೊಳ್ಳಿ

Corona Vaccination Certificate: ಪ್ರಮಾಣಪತ್ರದಲ್ಲಿನ ಬದಲಾವಣೆಗಳನ್ನು ಕೇವಲ ಒಂದು ಬಾರಿ ಮಾತ್ರ ಮಾಡಬಹುದಾದ್ದರಿಂದ ಜಾಗರೂಕತೆಯಿಂದ ವಿವರಗಳನ್ನು ಸರಿಪಡಿಸಿ.

CoWin Vaccination Certificate: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ನಿಮ್ಮ ವಿವರಗಳು ತಪ್ಪಾಗಿದ್ದರೆ ಹೀಗೆ ಸರಿಪಡಿಸಿಕೊಳ್ಳಿ
ಕೊವಿನ್​ ಪೋರ್ಟಲ್​ (ಸಾಂಕೇತಿಕ ಚಿತ್ರ)
TV9 Web
| Edited By: |

Updated on: Jun 26, 2021 | 12:57 PM

Share

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದರೂ ಡೆಲ್ಟಾ ಪ್ಲಸ್ ರೂಪಾಂತರಿ ಕಾಣಿಸಿಕೊಂಡಿರುವುದರಿಂದ ಹಾಗೂ ಅನೇಕ ತಜ್ಞರು ಮೂರನೇ ಅಲೆಯ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೇಶದ ಎಲ್ಲಾ ಜನರಿಗೆ ಲಸಿಕೆ ತಲುಪಿಸಬೇಕೆಂಬ ಕಾರಣಕ್ಕೆ ಭಾರತ ಸರ್ಕಾರ ಆನ್​ಲೈನ್​ ನೋಂದಣಿ ಮಾಡಿಕೊಳ್ಳದವರಿಗೂ, ಸೂಕ್ತ ದಾಖಲೆಗಳನ್ನು ಹೊಂದಿಲ್ಲದವರಿಗೂ ಲಸಿಕೆ ನೀಡಲು ಕ್ರಮಕೈಗೊಂಡಿದೆ. ಆದರೆ, ಆನ್​ಲೈನ್​ ಮೂಲಕ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದವರಿಗೆ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವೊಂದು ಕಾಣುತ್ತದೆ. ಒಂದುವೇಳೆ ಅದರಲ್ಲಿ ಹೆಸರು, ವಯಸ್ಸು, ಲಿಂಗ ಇತ್ಯಾದಿ ವಿವರಗಳೇನಾದರೂ ತಪ್ಪಾಗಿ ನಮೂದಿಸಲ್ಪಟ್ಟರೆ ಏನು ಮಾಡಬೇಕು? ಅದನ್ನು ಕೊವಿನ್​ ಪೋರ್ಟಲ್ ಮೂಲಕ ಸರಿಪಡಿಸಬಹುದೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಏನೇ ತಪ್ಪುಗಳಿದ್ದರೂ ನೀವು ಚಿಂತೆ ಮಾಡಬೇಕಿಲ್ಲ. ಏಕೆಂದರೆ ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು ಎಂದು ಭಾರತ ಸರ್ಕಾರವೇ ತಿಳಿಸಿದೆ. ಹೆಸರು, ಭಾವಚಿತ್ರ, ಗುರುತಿನ ಚೀಟಿ ಸಂಖ್ಯೆ, ಜನ್ಮ ದಿನಾಂಕ ಹಾಗೂ ಲಿಂಗದ ಕುರಿತಾದ ವಿವರಗಳನ್ನು ಕೊವಿನ್​ ಪೋರ್ಟಲ್​ನಲ್ಲೇ ಸರಿಪಡಿಸಬಹುದಾಗಿದೆ. ಇದನ್ನು ಆರೋಗ್ಯ ಸೇತುವಿನ ಅಧಿಕೃತ ಟ್ವಿಟರ್​ ಖಾತೆಯ ಮೂಲಕ ಟ್ವೀಟ್ ಮಾಡಿ ತಿಳಿಸಲಾಗಿದೆ.

ವಿವರಗಳನ್ನು ಸರಿಪಡಿಸಲು ಏನು ಮಾಡಬೇಕು? ಹಂತ 1: ಕೊವಿನ್​​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ

ಹಂತ 2: ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆ ಹಾಗೂ ಓಟಿಪಿ ಸಹಾಯದಿಂದ ಲಾಗಿನ್​ ಆಗಿ

ಹಂತ 3: ವೆಬ್​ಸೈಟ್​ನ ಮೇಲ್ಭಾಗದ ಬಲತುದಿಯಲ್ಲಿ ರೈಸ್​ ಆ್ಯನ್ ಇಶ್ಯೂ ಎಂಬ ಆಯ್ಕೆ ಕಾಣುತ್ತದೆ

ಹಂತ 4: ಅದರಲ್ಲಿ ಕರೆಕ್ಷನ್​ ಇನ್​ ವ್ಯಾಕ್ಸಿನ್​ ಸರ್ಟಿಫಿಕೇಟ್ ಆಯ್ಕೆಯನ್ನು ಆರಿಸಿ

ಹಂತ 5: ಸರಿಪಡಿಸಬೇಕಾದ ವಿಷಯಗಳನ್ನೆಲ್ಲಾ ಸರಿ ಮಾಡಿ ಮುಂದುವರೆಯಿರಿ

ಹಂತ 6: ನೀವು ಏನೇನು ಬದಲಾವಣೆ ಮಾಡಿದ್ದೀರಿ ಎನ್ನುವುದು ಕಾಣಲಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿ.

ವಿ.ಸೂ: ಪ್ರಮಾಣಪತ್ರದಲ್ಲಿನ ಬದಲಾವಣೆಗಳನ್ನು ಕೇವಲ ಒಂದು ಬಾರಿ ಮಾತ್ರ ಮಾಡಬಹುದಾದ್ದರಿಂದ ಜಾಗರೂಕತೆಯಿಂದ ವಿವರಗಳನ್ನು ಸರಿಪಡಿಸಿ. ಕೊವಿನ್​ ಪೋರ್ಟಲ್​ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: Corona Vaccine: ಎರಡು ಡೋಸ್​ ಕೊರೊನಾ ಲಸಿಕೆ ಪಡೆದವರಿಗೆ ಶುಭಸುದ್ದಿ: ಐಸಿಎಂಆರ್​ ಅಧ್ಯಯನದ ಪ್ರಾಥಮಿಕ ವರದಿ 

ಲಸಿಕೆ ಪ್ರಮಾಣಪತ್ರದ ಮೇಲೆ ಡಿಜಿಟಲ್ ಐಡಿ ನಮೂದು? ಸಮಾಜದಲ್ಲಿ ಮೂಡಿದೆ ಪ್ರಶ್ನೆ

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ