Windows 11: ಬಳಕೆದಾರರ ಖುಷಿ ಹೆಚ್ಚು ಮಾಡುವುದಕ್ಕೆ ಇಲ್ಲಿವೆ ವಿಂಡೋಸ್ 11ರ ಅತ್ಯುತ್ತಮ 9 ಫೀಚರ್​ಗಳು

ಮೈಕ್ರೋಸಾಫ್ಟ್​ನಿಂದ ವಿಂಡೋಸ್ 11 ಅನಾವರಣಗೊಳಿಸಲಾಗಿದೆ. ಈ ಆಪರೇಟಿಂಗ್ ಸಿಸ್ಟಮ್​ನ 9 ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Windows 11: ಬಳಕೆದಾರರ ಖುಷಿ ಹೆಚ್ಚು ಮಾಡುವುದಕ್ಕೆ ಇಲ್ಲಿವೆ ವಿಂಡೋಸ್ 11ರ ಅತ್ಯುತ್ತಮ 9 ಫೀಚರ್​ಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 25, 2021 | 4:50 PM

ಅಂತೂ ಮೈಕ್ರೋಸಾಫ್ಟ್​ನಿಂದ ಮುಂದಿನ ತಲೆಮಾರಿನ ಆಪರೇಟಿಂಗ್ ಸಿಸ್ಟಮ್, ವಿಂಡೋಸ್ 11 ಅನಾವರಣಗೊಂಡಿದೆ. ಇದಕ್ಕೂ ಮುನ್ನ ವಿಂಡೋಸ್ 10 ಅನ್ನು 2015ರಲ್ಲಿ ಬಿಡುಗಡೆ ಮಾಡಲಾಯಿತು. ಈ ಮಧ್ಯೆ 10X ಘೋಷಣೆ ಮಾಡಲಾಯಿತಾದರೂ ಆ ನಂತರ ಅದು ರದ್ದಾಯಿತು. ಈ ಹಿಂದಿನ ಒಎಸ್​ಗೆ ಹೋಲಿಸಿದರೆ ವಿಂಡೋಸ್ 11ನಲ್ಲಿ ಎಲ್ಲ ರೀತಿಯಲ್ಲೂ ಹೊಸ ರಚನೆ, ಪ್ರಮುಖ ಅಪ್​ಗ್ರೇಡ್ ಆಗಿದೆ. ಅಂದಹಾಗೆ ವಿಂಡೋಸ್​ 10ಗೆ ಉಚಿತ ಅಪ್​ಗ್ರೇಡ್​ ಆಗಿ, ವಿಂಡೋಸ್ 11 ಬರುತ್ತಿದೆ. ಈ ಹೊಸ ಆಪರೇಟಿಂಗ್ ಸಿಸ್ಟಮ್​ನ 10 ವೈಶಿಷ್ಟ್ಯಗಳ ಬಗ್ಗೆ ಈ ಲೇಖನದ ಮೂಲಕ ತಿಳಿಸಲಾಗುವುದು.

1. ವಿಂಡೋಸ್ 11 ಎಲ್ಲ ಬಗೆಯಲ್ಲೂ ಹೊಸ ವಿನ್ಯಾಸದೊಂದಿಗೆ ಬರುತ್ತದೆ. ಇದು ಆಧುನಿಕವಾಗಿದೆ, ಗೊಂದಲವಿಲ್ಲದ, ಸ್ವಚ್ಛವಾಗಿ ಮತ್ತು ನೋಡಲು ಸುಂದರವಾಗಿರುತ್ತದೆ. ಸ್ಟಾರ್ಟ್ ಮೆನು ಮಧ್ಯದಲ್ಲಿದ್ದು, ನಿಮಗೆ ಸ್ವಲ್ಪ ಆಪಲ್ ಅನ್ನು ನೆನಪಿಸುತ್ತದೆ. ಆದರೆ ಇದು ಸಾಂಪ್ರದಾಯಿಕ ವಿನ್ಯಾಸದಿಂದ ದೊಡ್ಡ ಮಟ್ಟದಲ್ಲಿ ಹೊರಬಂದಿದ್ದಕ್ಕೆ ನಿದರ್ಶನವಾಗಿದೆ. ಆದರೂ ಬಳಕೆದಾರರಿಗೆ ಮಧ್ಯದಲ್ಲಿ ಇರುವ ಸ್ಟಾರ್ಟ್ ಮೆನುವಿನೊಂದಿಗೆ ಆರಾಮದಾಯಕ ಅನಿಸದಿದ್ದರೆ, ಅವರು ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಅದನ್ನು ಮತ್ತೆ ಎಡಕ್ಕೆ ತರಬಹುದು.

2. ಕೊರೊನಾ ಸಾಂಕ್ರಾಮಿಕದ ಸಮಯವನ್ನು ಪರಿಗಣಿಸಿ, ಮೈಕ್ರೋಸಾಫ್ಟ್​ನಿಂದ ಟಾಸ್ಕ್ ಬಾರ್​ನಲ್ಲಿ ಸಂಯೋಜಿಸಲಾದ ಮೈಕ್ರೋಸಾಫ್ಟ್ ತಂಡಗಳಿಂದ ಚಾಟ್ ಅನ್ನು ಪರಿಚಯಿಸಿದೆ. ವಿಂಡೋಸ್, ಆಂಡ್ರಾಯ್ಡ್ ಅಥವಾ ಐಒಎಸ್​ ಬಳಕೆದಾರರು ತಮ್ಮ ಎಲ್ಲಾ ವೈಯಕ್ತಿಕ ಸಂಪರ್ಕಗಳೊಂದಿಗೆ ಟೆಕ್ಸ್ಟ್, ಚಾಟ್, ಧ್ವನಿ ಅಥವಾ ವಿಡಿಯೋ ಮೂಲಕ ಸಂಪರ್ಕ ಸಾಧಿಸಲು ಇದು ಅವಕಾಶ ನೀಡುತ್ತದೆ.

3. ಮೈಕ್ರೋಸಾಫ್ಟ್ ಹೇಳುವಂತೆ, ವಿಂಡೋಸ್ 11 ಗೇಮರ್​ಗಳಿಗಾಗಿ ಹಬ್ಬದಂತೆ ಇರುತ್ತದೆ. ತಡೆರಹಿತ ಗೇಮಿಂಗ್ ಅನುಭವವನ್ನು ಒದಗಿಸಲು ಹೊಸ ಆಪರೇಟಿಂಗ್ ಸಿಸ್ಟಮ್ ಇತ್ತೀಚಿನ ಕೆಲವು ಗೇಮಿಂಗ್ ತಂತ್ರಜ್ಞಾನ ಹೊಂದಿದೆ. ವಿಂಡೋಸ್ 11 “ಡೈರೆಕ್ಟ್ಎಕ್ಸ್ 12 ಅಲ್ಟಿಮೇಟ್” ಅನ್ನು ಹೊಂದಿದೆ. ಇದು ಹೆಚ್ಚಿನ ಫ್ರೇಮ್ ದರದಲ್ಲಿ ಗ್ರಾಫಿಕ್ಸ್ ಅನ್ನು ಎನೇಬಲ್ ಮಾಡುತ್ತದೆ. ವೇಗವಾಗಿ ಲೋಡ್ ಸಮಯ ಮತ್ತು ಹೆಚ್ಚು ವಿವರವಾದ ಆಟಗಳಿಗಾಗಿ ಡೈರೆಕ್ಟ್ ಸ್ಟೋರೇಜ್; ನಿಜವಾಗಿಯೂ ಆಕರ್ಷಕವಾಗಿರುವ ದೃಶ್ಯ ಅನುಭವಕ್ಕಾಗಿ ವ್ಯಾಪಕವಾದ, ಹೆಚ್ಚು ಎದ್ದುಕಾಣುವ ಬಣ್ಣಗಳಿಗಾಗಿ ಆಟೋ ಎಚ್‌ಡಿಆರ್ ಒದಗಿಸುತ್ತದೆ. ಹಾರ್ಡ್‌ವೇರ್ ಹೊಂದಾಣಿಕೆಯ ಬಗೆಗಿನ ಬದ್ಧತೆಯಲ್ಲಿ ಕೂಡ ಏನೂ ಬದಲಾಗಿಲ್ಲ. ವಿಂಡೋಸ್ 11 ಪಿಸಿ ಗೇಮಿಂಗ್ ಪರಿಕರಗಳು ಮತ್ತು ಪೆರಿಫೆರಲ್‌ಗಳನ್ನು ಸಪೋರ್ಟ್ ಮಾಡುತ್ತದೆ. ಪಿಸಿ ಅಥವಾ ಎಕ್ಸ್‌ಬಾಕ್ಸ್ ಗೇಮ್ ಪಾಸ್‌ನೊಂದಿಗೆ, ಗೇಮರ್​ಗಳಿಗಾಗಿ ಸಾರ್ವಕಾಲಿಕ ಹೊಸ ಆಟಗಳೊಂದಿಗೆ 100ಕ್ಕೂ ಹೆಚ್ಚು ಉತ್ತಮ-ಗುಣಮಟ್ಟದ ಪಿಸಿ ಆಟಗಳಿಗೆ ಪ್ರವೇಶ ಪಡೆಯಬಹುದು. ಈಗಾಗಲೇ ಜನರು ಆಡುತ್ತಿದ್ದಲ್ಲಿ ಅವರೊಂದಿಗೆ ಪಿಸಿ ಅಥವಾ ಕನ್ಸೋಲ್​ನಲ್ಲಿ ಆಟವಾಡಲು ಇನ್ನೂ ಸುಲಭವಾಗಿದೆ, ಎಂದು ಮೈಕ್ರೋಸಾಫ್ಟ್ ಬ್ಲಾಗ್​ನಲ್ಲಿ ತಿಳಿಸಲಾಗಿದೆ.

4. ವಿಂಡೋಸ್ 11 ವಿಜೆಟ್‌ಗಳನ್ನು ಸಹ ಪರಿಚಯಿಸಿದೆ, ಇದು AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​)ನಿಂದ ನಡೆಸುವ, ವೈಯಕ್ತಿಕಗೊಳಿಸಿದ ಫೀಡ್ ಆಗಿದೆ. ಇದು ಕ್ಯುರೇಟೆಡ್ ವಿಂಡೋ ಆಗಿದ್ದು, ಅದು ಬಳಕೆದಾರರಿಗೆ ಇತ್ತೀಚಿನ ಸುದ್ದಿ, ಹವಾಮಾನ ಅಪ್​ಡೇಟ್​ಗಳು, ನೋಟಿಫಿಕೇಷನ್​ಗಳು ಮತ್ತು ಹೆಚ್ಚಿನದನ್ನು ಒದಗಿಸುತ್ತದೆ.

5. ಆಪಲ್‌ನಂತೆಯೇ ಮೈಕ್ರೋಸಾಫ್ಟ್ ಈಗ ವಿಂಡೋಸ್ 11ನಲ್ಲಿ ಮೈಕ್ರೋಸಾಫ್ಟ್ ಸ್ಟೋರ್ ಅನ್ನು ಪರಿಚಯಿಸಿದೆ. ಇದನ್ನು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಲು, ಸ್ಟ್ರೀಮಿಂಗ್ ಅಪ್ಲಿಕೇಷನ್‌ಗಳಲ್ಲಿ ಕಂಟೆಂಟ್​ಗಳನ್ನು ವೀಕ್ಷಿಸಲು ಬಳಸಬಹುದು. ಕಂಟೆಂಟ್ ಅಪ್ಲಿಕೇಷನ್‌ಗಳು, ಆಟಗಳು, ಶೋಗಳು, ಚಲನಚಿತ್ರಗಳು – ಕ್ಯುರೇಟೆಡ್ ಸ್ಟೋರೀಸ್​ಗಳೊಂದಿಗೆ ಹುಡುಕಲು ಮತ್ತು ಅನ್ವೇಷಿಸಲು ಸುಲಭವಾಗಿಸುತ್ತದೆ ಎಂದು ಕಂಪನಿ ಹೇಳಿದೆ. ಮೈಕ್ರೋಸಾಫ್ಟ್ ಸ್ಟೋರ್ ಶೀಘ್ರದಲ್ಲೇ ವಿಷುಯಲ್ ಸ್ಟುಡಿಯೋ, ಡಿಸ್ನಿ+, ಅಡೋಬ್ ಕ್ರಿಯೇಟಿವ್ ಕ್ಲೌಡ್, ಜೂಮ್ ಮತ್ತು ಕ್ಯಾನ್ವಾ ಸೇರಿದಂತೆ ಥರ್ಡ್ ಪಾರ್ಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದೆ.

6. ವಿಂಡೋಸ್ 11ರಲ್ಲಿ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳು ಸಹ ಇರಲಿವೆ. ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳನ್ನು ಸಹ ಸೇರ್ಪಡೆ ಮಾಡಿದ್ದು ಇದೇ ಮೊದಲು. ಈ ವರ್ಷದಿಂದ ಬಳಕೆದಾರರು ಮೈಕ್ರೋಸಾಫ್ಟ್ ಸ್ಟೋರ್​ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳನ್ನು ಹುಡುಕಬಹುದು ಮತ್ತು ಅವುಗಳನ್ನು ಅಮೆಜಾನ್ ಆ್ಯಪ್‌ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬಹುದು.

7. ವಿಂಡೋಸ್ 11 ಹೊಸ ಟಚ್ ಕೀಬೋರ್ಡ್ ಅನ್ನು ಸಹ ಪಡೆಯುತ್ತದೆ. ಅದು ಟೆನೋರ್‌ನಿಂದ GIFಗಳನ್ನು ಸಂಯೋಜಿಸಿದೆ. ಬಳಕೆದಾರರು ಧ್ವನಿ ಟೈಪಿಂಗ್‌ನಂತಹ ವೈಶಿಷ್ಟ್ಯಗಳನ್ನು ಸಹ ಬಳಸಬಹುದು.

8. ಮೈಕ್ರೋಸಾಫ್ಟ್ ಬಹು ಮಾನಿಟರ್‌ಗಳಿಗೆ ಸಪೋರ್ಟ್​ ಮಾಡುತ್ತದೆ. ಅದರಿಂದಾಗಿ ಬಳಕೆದಾರರು ವರ್ಚುವಲ್ ಡೆಸ್ಕ್‌ಟಾಪ್‌ಗಳಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ.

9. ಮೈಕ್ರೋಸಾಫ್ಟ್ ಬಳಕೆದಾರರಿಗೆ ಮಲ್ಟಿ ಟಾಸ್ಕಿಂಗ್​ಗೆ ಅನುಕೂಲ ಆಗಲು ಸ್ನ್ಯಾಪ್ ಲೇಔಟ್ಸ್​, ಸ್ನ್ಯಾಪ್ ಗ್ರೂಪ್ಸ್ ಮತ್ತು ಡೆಸ್ಕ್‌ಟಾಪ್‌ಗಳನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ತಮ್ಮ ವಿಂಡೋಸ್​ಗಳನ್ನು ಆರ್ಗನೈಸ್ ಮಾಡಲು ಸಹಾಯ ಮಾಡುತ್ತದೆ ಮತ್ತು ಸ್ಕ್ರೀನ್ ಸ್ಥಳದ ಬಳಕೆಯನ್ನು ಅತ್ಯುತ್ತಮವಾಗಿಸುತ್ತದೆ. ಇದರಿಂದಾಗಿ ಸ್ವಚ್ಛವಾಗಿರುವ ವಿನ್ಯಾಸದಲ್ಲಿ, ಬೇಕಾದುದನ್ನು- ಬೇಕಾದ ರೀತಿಯಲ್ಲಿ ನೋಡಬಹುದು.

ಇದನ್ನೂ ಓದಿ: Windows 11 Unveils: ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್ 11 ಅನಾವರಣಗೊಳಿಸಿದ ಮೈಕ್ರೋಸಾಫ್ಟ್

ಇದನ್ನೂ ಓದಿ: ಮೈಕ್ರೋಸಾಫ್ಟ್​ನಿಂದ ಇಂಟರ್​ನೆಟ್​ ಎಕ್ಸ್​ಪ್ಲೋರರ್​ಗೆ ನಿವೃತ್ತಿ; 2022ರ ಜೂನ್​ನಿಂದ ಎಡ್ಜ್​ ಹವಾ

(Microsoft Windows 11 operating system (OS) features that excites users. Here is the details)

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ