ಮೈಕ್ರೋಸಾಫ್ಟ್ನಿಂದ ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ನಿವೃತ್ತಿ; 2022ರ ಜೂನ್ನಿಂದ ಎಡ್ಜ್ ಹವಾ
ಇನ್ನು ಒಂದು ವರ್ಷ ಮಾತ್ರ ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ಬಳಕೆಯಲ್ಲಿದ್ದು, ಆ ನಂತರ ಮೈಕ್ರೋಸಾಫ್ಟ್ ಎಡ್ಜ್ ಬಳಕೆ ವ್ಯಾಪಕ ಆಗಲಿದೆ.
ಮೈಕ್ರೋಸಾಫ್ಟ್ನ ಬಹು ಜನಪ್ರಿಯ ವೆಬ್ ಬ್ರೌಸರ್ ಆದ ಇಂಟರ್ನೆಟ್ ಎಕ್ಸ್ಪ್ಲೋರೆರ್ ಕೊನೆಗಳ್ಳಲಿದೆ. ಈ ಬ್ರೌಸರ್ನ ಅಸ್ತಿತ್ವದ ದ್ವಿತೀಯಾರ್ಧ ಬಹಳ ಕಷ್ಟಕರವಾಗಿತ್ತು. ಮುಂದಿನ ವರ್ಷದ ಜೂನ್ನಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್ ನಿಂತುಹೋಗಿ, ಮೈಕ್ರೋಸಾಫ್ಟ್ ಎಡ್ಜ್ಗೆ ದಾರಿ ಮಾಡಿಕೊಡುತ್ತದೆ. ಅಂದಹಾಗೆ 1995ನೇ ಇಸವಿಯಲ್ಲಿ ತನ್ನ ವಿಂಡೋಸ್ ಮೂಲಕ ಮೊದಲ ಬಾರಿಗೆ ಮೈಕ್ರೋಸಾಫ್ಟ್ನಿಂದ ಇಂಟರ್ನೆಟ್ ಎಕ್ಸ್ಪ್ಲೋರರ್ ಪರಿಚಯವಾಗಿತ್ತು. ಆ ನಂತರ 25 ವರ್ಷಕ್ಕೂ ಹೆಚ್ಚು ಸಮಯದಿಂದ ಇದು ಬಳಕೆಯಲ್ಲಿದೆ. ಕ್ರಮೇಣವಾಗಿ ಈ ಬ್ರೌಸರ್ನ ಬಳಕೆದಾರರ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಆ ಜಾಗದಲ್ಲಿ ಗೂಗಲ್ ಕ್ರೋಮ್ನಂಥದ್ದು ಬಂದವು. ಈ ರೀತಿಯಲ್ಲಿ ಬಹಳ ಕಾಲದಿಂದ ಇರುವ ಬ್ರೌಸರ್ಗೆ ಸ್ಪರ್ಧಿಗಳನ್ನು ಗುರುತಿಸಿ, ಇದೀಗ ಮೈಕ್ರೋಸಾಫ್ಟ್ ಎಡ್ಜ್ ಅನ್ನು ಪ್ರಾಥಮಿಕ ವೆಬ್ ಬ್ರೌಸರ್ ಆಗಿ ತರಲು ನಿರ್ಧರಿಸಿದೆ.
ಅಂದ ಹಾಗೆ ಎಡ್ಜ್ ಆರಂಭವಾಗಿದ್ದು 2015ರಲ್ಲಿ. ಇಂಟರ್ನೆಟ್ ಎಕ್ಸ್ಪ್ಲೋರರ್ ಎಂಬುದು ಕಂಪ್ಯಾಟಿಬಿಲಿಟಿ ಸಲ್ಯೂಷನ್ ಆಗಿ ಮೈಕ್ರೋಸಾಫ್ಟ್ ಬಳಕೆದಾರರು ಬಳಸುತ್ತಿದ್ದಾರೆ. ಈಚೆಗೆ ಬ್ಲಾಗ್ನಲ್ಲಿ, ಇಂಟರ್ನೆಟ್ ಎಕ್ಸ್ಪ್ಲೋರರ್ 11 ಡೆಸ್ಕ್ಟಾಪ್ ಅಪ್ಲಿಕೇಷನ್ ಜೂನ್ 15, 2022ಕ್ಕೆ ಕೊನೆ ಆಗುತ್ತದೆ ಎಂದು ಮೈಕ್ರೋಸಾಫ್ಟ್ ಘೋಷಣೆ ಮಾಡಿತ್ತು. ಈ ಅಪ್ಲಿಕೇಷನ್ ಹಿಂಪಡೆಯುವುದರ ಟೈಮ್ಲೈನ್ ಕೂಡ ನೀಡಿತ್ತು. ಅದರ ಪ್ರಕಾರ ಮೈಕ್ರೋಸಾಫ್ಟ್ 365 ಮತ್ತು ಇತರ ಅಪ್ಲಿಕೇಷನ್ಗಳು ಹಾಗೂ ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ಸಪೋರ್ಟ್ ಈ ವರ್ಷದ ಆಗಸ್ಟ್ 17ರ ತನಕ ಮಾತ್ರ. ಕಳೆದ ವರ್ಷ ಘೋಷಣೆಯಲ್ಲಿ ಇದು ತಿಳಿದುಬಂತು. ಆ ನಂತರದಿಂದ ಡೆಸ್ಕ್ಟಾಪ್ ಅಪ್ಲಿಕೇಷನ್ ಆದ IE11ಗೆ ಸಪೋರ್ಟ್ ಮಾಡುವ ಮೈಕ್ರೋಸಾಫ್ಟ್ ತಂಡವನ್ನು ಹಿಂಪಡೆಯಲಾಯಿತು. ವಿಂಡೋಸ್ ಜೆತೆಗೆ ಇಂಟರ್ನೆಟ್ ಎಕ್ಸ್ಪ್ಲೋರರ್ ಬರುವುದು ಶೀಘ್ರದಲ್ಲೇ ಕೊನೆಯಾಗಲಿದೆ ಎಂಬ ನಿರೀಕ್ಷೆ ಇದೆ.
ವಿಂಡೋಸ್ 10ರಲ್ಲಿನ ಇಂಟರ್ನೆಟ್ ಎಕ್ಸ್ಪ್ಲೋರರ್ ಭವಿಷ್ಯವು ಮೈಕ್ರೋಸಾಫ್ಟ್ ಎಡ್ಜ್ನಲ್ಲಿದೆ ಎಂದು ನಾವು ಘೋಷಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ಬ್ಲಾಗ್ನಲ್ಲಿ ತಿಳಿಸಿದೆ. ಇನ್ನು ಈ ಬದಲಾವಣೆಗೆ ಹಲವು ಕಾರಣಗಳು ಸಹ ಕಂಪೆನಿಯಿಂದ ಕಂಡುಕೊಳ್ಳಲಾಗಿದೆ. ಮೊದಲನೆಯದೇನಂದರೆ, IE11ಕ್ಕಿಂತ ಎಡ್ಜ್ ಉತ್ತಮ ಕಂಪ್ಯಾಟಿಬಿಲಿಟಿ ಹೊಂದಿದೆ. ಎಡ್ಹ್ ಬ್ರೌಸರ್ ಹಳೆಯ ಹಾಗೂ ಹೊಸ ವೆಬ್ಸೈಟ್ಸ್ ಎರಡನ್ನೂ ಸಪೋರ್ಟ್ ಮಾಡುವ ಡ್ಯುಯಲ್ ಎಂಜಿನ್ ಹೊಂದಿದೆ. ಇನ್ನು ಎಡ್ಜ್ನಲ್ಲಿ ಇನ್ನೂ ಹಲವು ಫೀಚರ್ಗಳಿದ್ದು, ಅದರ ಉತ್ಪಾದಕತೆ IE11ಗಿಂತ ಉತ್ತಮವಾಗಿದೆ ಮತ್ತು ಸುರಕ್ಷಿತವಾಗಿದೆ.
ಒಂದು ವೇಳೆ ಇಂಟರ್ನೆಟ್ ಎಕ್ಸ್ಪ್ಲೋರರ್ ಬಳಸುತ್ತಿರುವ ಗ್ರಾಹಕರಿದ್ದಲ್ಲಿ ಅಂಥವರು ಎಡ್ಜ್ಗೆ ಬದಲಾಗುವಂತೆ ಮೈಕ್ರೋಸಾಫ್ಟ್ ಸಲಹೆ ನೀಡುತ್ತಿದೆ. ಒಂದರಿಂದ ಮತ್ತೊಂದಕ್ಕೆ ಬದಲಾವಣೆ ಆಗುವುದು ಬಲು ಸಲೀಸು. ಎಲ್ಲ ಪಾಸ್ವರ್ಡ್ಗಳು, ಫೇವರಿಟ್ ಮತ್ತು ಇತರ ಬ್ರೌಸಿಂಗ್ ಡೇಟಾ ಯಾವುದೆಲ್ಲ ಇಂಟರ್ನೆಟ್ ಎಕ್ಸ್ಪ್ಲೋರರ್ನಲ್ಲಿ ಇರುತ್ತೋ ಅದು ಸಲೀಸಾಗಿ ಆಗುತ್ತದೆ ಎಂದು ತಿಳಿಸಲಾಗಿದೆ. ಅದಕ್ಕೂ ಮುಖ್ಯವಾಗಿ, ಎಡ್ಜ್ನಲ್ಲಿ ಬಿಲ್ಟ್ ಇನ್ ಇಂಟರ್ನೆಟ್ ಎಕ್ಸ್ಪ್ಲೋರರ್ ಮೋಡ್ ಇದ್ದು, ಒಂದು ವೇಳೆ ನಿರ್ದಿಷ್ಟ ವೆಬ್ಸೈಟ್ಗೆ ಇಂಟರ್ನೆಟ್ ಎಕ್ಸ್ಪ್ಲೋರರ್ ಬೇಕಾಗಿದ್ದಲ್ಲಿ ಅದು ಬಳಕೆ ಆಗುತ್ತದೆ.
ಇದನ್ನೂ ಓದಿ: ಈಗಷ್ಟೇ ಓದು ಮುಗಿಸಿರುವ ಹೈದರಾಬಾದ್ ಹುಡುಗಿಗೆ 2 ಕೋಟಿ ರೂಪಾಯಿ ಸಂಬಳದ ಕೆಲಸ ನೀಡಿದ ಮೈಕ್ರೋಸಾಫ್ಟ್
(Microsoft announced that, it will end the usage of internet explorer as primary web browser by 2022 June)