AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Windows 11 Unveils: ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್ 11 ಅನಾವರಣಗೊಳಿಸಿದ ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್ ಕಂಪೆನಿಯು ವಿಂಡೋಸ್ 11 ಅನಾವರಣಗೊಳಿಸಿದೆ. ವಿಂಡೋಸ್ 10 ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಈ ಹೊಸ ಆಪರೇಟಿಂಗ್ ಸಿಸ್ಟಮ್ ಅನಾವರಣ ಮಾಡಿದೆ.

Windows 11 Unveils: ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್ 11 ಅನಾವರಣಗೊಳಿಸಿದ ಮೈಕ್ರೋಸಾಫ್ಟ್
ವಿಂಡೋಸ್ 11 (ಸಾಂದರ್ಭಿಕ ಚಿತ್ರ)
TV9 Web
| Updated By: Srinivas Mata|

Updated on: Jun 24, 2021 | 11:49 PM

Share

ಮೈಕ್ರೋಸಾಫ್ಟ್ ಕಂಪೆನಿಯು ಹೊಸ ವಿಂಡೋಸ್ 11 ಅನ್ನು ಎಲ್ಲ ಹೊಸ ಯೂಸರ್ ಇಂಟರ್​ಫೇಸ್​ (ಯುಐ) ಜೊತೆಗೆ ಅನಾವರಣಗೊಳಿಸಿದೆ ಮತ್ತು ಆಪರೇಟಿಂಗ್ ಸಿಸ್ಟಮ್ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮಾಡಿದೆ. ಕಂಪೆನಿಯು ವಿಂಡೋಸ್ 10 ಅನ್ನು ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಈ ಹೊಸ ಅಪ್​ಡೇಟ್ ಬರುತ್ತಿದೆ. ಹೊಸ ವಿಂಡೋಸ್ 11 ಲೈವ್ ಟೈಲ್ಸ್ ಇಲ್ಲದೆ ಹೊಸ ಸ್ಟಾರ್ಟ್ ಮೆನು ಮತ್ತು ಟಾಸ್ಕ್ ಬಾರ್‌ನಲ್ಲಿ ಐಕಾನ್‌ಗಳ ಹೊಸ ಪೊಸಿಷಿನಿಂಗ್​ ಪಡೆಯುತ್ತದೆ. ಈಗ ಪರಿಚಯಿಸಲಾದ ಹೊಸ ಬದಲಾವಣೆಗಳು ವಿಂಡೋಸ್ 10X ಅನ್ನು ಹೋಲುತ್ತವೆ.

ಮೈಕ್ರೋಸಾಫ್ಟ್ ಹೊಸ ಅಪ್ಲಿಕೇಶನ್‌ ಸ್ಟೋರ್​ನೊಂದಿಗೆ ಅಪ್ಲಿಕೇಷನ್‌ಗಳತ್ತ ತನ್ನ ಗಮನವನ್ನು ನವೀಕರಿಸಿದೆ. ಅಂದ ಹಾಗೆ ಹೊಸ ಓಎಸ್ (ಆಪರೇಟಿಂಗ್ ಸಿಸ್ಟಮ್​) ವಿಜೆಟ್‌ಗಳೊಂದಿಗೆ ಉತ್ತಮ ಹೊಂದಾಣಿಕೆ ತರುತ್ತದೆ. ಸಿಸ್ಟಮ್-ವೈಡ್ ಡಾರ್ಕ್ ಮತ್ತು ಲೈಟ್ ಮೋಡ್‌ಗಳನ್ನು ಸಹ ಈ ಆಪರೇಟಿಂಗ್ ಸಿಸ್ಟಮ್ ಪಡೆಯುತ್ತದೆ. ವಿಂಡೋಸ್ 11ರಲ್ಲಿನ ಹೊಸ ಆ್ಯಪ್ ಸ್ಟೋರ್ ಅಮೆಜಾನ್ ಆ್ಯಪ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಸ್ನ್ಯಾಪ್ ಲೇಔಟ್ಸ್​ ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬಳಕೆದಾರರು ಪಿಕ್ಚರ್-ಇನ್-ಪಿಕ್ಚರ್ ಮೋಡ್‌ಗೆ ಹೋಲುವ ಸ್ಮಾರ್ಟ್‌ಫೋನ್ ಸ್ವರೂಪದಲ್ಲಿ ಅಪ್ಲಿಕೇಷನ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

ವ್ಯವಹಾರದ ಉದ್ದೇಶಗಳಿಗೆ ಬಳಸುವ ಬಳಕೆದಾರರಿಗಾಗಿ ಅಂತಲೇ ರೂಪಿಸಲಾಗಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ವಿಂಡೋಸ್ 11 ಬರಲಿದೆ. ನಿರ್ದಿಷ್ಟವಾಗಿ ಆಪರೇಟಿಂಗ್ ಸಿಸ್ಟಮ್ ಬಾಹ್ಯ ಮಾನಿಟರ್ ಹೊಂದಿರುವವರಿಗಾಗಿಯೇ ರೂಪುಗೊಂಡಿದೆ ಎಂದು ಸಾಫ್ಟ್‌ವೇರ್ ಕಂಪೆನಿ ಮೈಕ್ರೋಸಾಫ್ಟ್ ಹೇಳಿಕೊಂಡಿದೆ. ಉದಾಹರಣೆಗೆ, ತುಂಬ ನಿಶ್ಶಬ್ದವಾದ ಕೋಣೆಗೆ ತೆರಳಿ, ಕಾಲ್ ತೆಗೆದುಕೊಳ್ಳುವಾಗ ಆಪರೇಟಿಂಗ್ ಸಿಸ್ಟಮ್ ತಾನಾಗಿಯೇ ಸಿಂಗಲ್ ಸ್ಕ್ರೀನ್​ಗೆ ಆ್ಯಪ್​ಗಳನ್ನು ಅಡ್ಜಸ್ಟ್​ ಮಾಡುತ್ತದೆ. ಅದೇ ಮಷೀನ್​ ಅನ್ನು ಬಳಕೆದಾರರು ಬೇರೆಡೆ ತೆಗೆದುಕೊಂಡು ಹೋದಾಗ ಮಷೀನ್ ಪುನರ್ ಹೊಂದಾಣಿಕೆ ಆಗುತ್ತದೆ.

ಇದನ್ನೂ ಓದಿ: Satya Nadella: 53 ವರ್ಷದ ಸತ್ಯ ನಾಡೆಲ್ಲಾಗೆ 143 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಮೈಕ್ರೋಸಾಫ್ಟ್ ಕಂಪೆನಿಯ ನೇತೃತ್ವ

(Microsoft unveils operating system Windows 11 with all new user interface, 6 years after the launch of Windows 10)

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ