Satya Nadella: 53 ವರ್ಷದ ಸತ್ಯ ನಾಡೆಲ್ಲಾಗೆ 143 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಮೈಕ್ರೋಸಾಫ್ಟ್ ಕಂಪೆನಿಯ ನೇತೃತ್ವ

Microsoft company new chairman Satya Nadella: ಹೈದರಾಬಾದ್ ಮೂಲದ ಭಾರತೀಯ ಅಮೆರಿಕನ್ ಸತ್ಯ ನಾಡೆಲ್ಲಾ ಅವರ ಹೆಸರನ್ನು ಮೈಕ್ರೋಸಾಫ್ಟ್ ಕಂಪೆನಿಯ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಅವಿರೋಧವಾಗಿ ಸೂಚಿಸಲಾಗಿದೆ.

Satya Nadella: 53 ವರ್ಷದ ಸತ್ಯ ನಾಡೆಲ್ಲಾಗೆ 143 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಮೈಕ್ರೋಸಾಫ್ಟ್ ಕಂಪೆನಿಯ ನೇತೃತ್ವ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jun 17, 2021 | 11:09 PM

ಈ ತನಕ ಮೈಕ್ರೋಸಾಫ್ಟ್ ಎಂಬ ದೈತ್ಯ ತಂತ್ರಜ್ಞಾನ ಕಂಪೆನಿಯಲ್ಲಿ ಸಿಇಒ ಆಗಿರುವ ಸತ್ಯ ನಾಡೆಲ್ಲ ಅವರು ಇನ್ನೇನು ಅದರ ಅಧ್ಯಕ್ಷರಾಗಲಿದ್ದಾರೆ. ಸ್ವತಂತ್ರ ನಿರ್ದೇಶಕ ಜಾನ್​ ಥಾಮ್ಸನ್ ಸ್ಥಾನದಲ್ಲಿ ನಾಡೆಲ್ಲ ಕೂರಲಿದ್ದಾರೆ. ಸಾಫ್ಟ್​ವೇರ್​ ಕಂಪೆನಿಯ ನಿರ್ದೇಶಕ ಮಂಡಳಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನಾಡೆಲ್ಲ. ಕಳೆದ ಏಳು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಸತ್ಯ ನಾಡೆಲ್ಲ ಎಷ್ಟೆಲ್ಲ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ಲ, ಕಂಪೆನಿಯನ್ನು ತಂತ್ರಜ್ಞಾನ ಹಾಗೂ ಉದ್ಯಮದಲ್ಲಿ ತುಂಬ ಪ್ರಮುಖ ಸ್ಥಾನದಲ್ಲಿ ತಂದು ನಿಲ್ಲಿಸುವಲ್ಲಿ ಅತ್ಯಂತ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮೈಕ್ರೋಸಾಫ್ಟ್​ನಂಥ ಕಂಪೆನಿಗೆ ಅಧ್ಯಕ್ಷರಾದವರು ಏನು ಮಾಡುತ್ತಾರೆ? ಏಕೆಂದರೆ ಆ ಸ್ಥಾನದಲ್ಲಿ ಬಿಲ್ ಗೇಟ್ಸ್ ಸಹ ಕೂತಿದ್ದರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಧ್ಯಕ್ಷ ಸ್ಥಾನ ವಹಿಸಿದ ಮೇಲೆ ಕಂಪೆನಿಯ ಮಂಡಳಿಗೆ ಕಾರ್ಯಸೂಚಿ ನಿಗದಿ ಮಾಡುವವರೇ ನಾಡೆಲ್ಲ. ಉದ್ಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ವ್ಯೂಹಾತ್ಮಕ ಅವಕಾಶಗಳನ್ನು ಹೆಚ್ಚಿಸಬೇಕು ಮತ್ತು ಪ್ರಮುಖ ಅಪಾಯಗಳನ್ನು ಗುರುತಿಸಬೇಕಾಗುತ್ತದೆ. ತೊಂದರೆ ಆಗದಂಥ ಧೋರಣೆಯನ್ನು ಮಂಡಳಿಯ ಪರಿಶೀಲನೆಗೆ ಇಡಬೇಕಾಗುತ್ತದೆ.

ಸತ್ಯ ನಾಡೆಲ್ಲ ಕಾಲದಲ್ಲೇ ವಿಶ್ವದ ಅತ್ಯಂತ ಮೌಲ್ಯಯುತ ಸಾರ್ವಜನಿಕ ಕಂಪೆನಿ ಎನಿಸಿಕೊಂಡಿತು ಮೈಕ್ರೋಸಾಫ್ಟ್. ಸದ್ಯಕ್ಕೆ ಆಪಲ್ ಕಂಪೆನಿ ನಂತರ ಎರಡನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ಕಂಪೆನಿಯ ಷೇರು ಶೇ 600ಕ್ಕೂ ಹೆಚ್ಚು ಮೇಲೇರಿದೆ. ನಾಡೆಲ್ಲಾ ನೇತೃತ್ವದಲ್ಲಿ ಮೈಕ್ರೋಸಾಫ್ಟ್ ಹೆಚ್ಚಿನ ಪಕ್ಷ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳ ಬಗ್ಗೆ ಗಮನ ಹರಿಸಿದೆ. ಇದರ ಜತೆಗೆ ಲಿಂಕ್ಡ್​ಇನ್, ಗಿಟ್​ಹಬ್ ಮತ್ತು ಝೆನಿಮ್ಯಾಕ್ಸ್​ನಂಥ ಕಂಪೆನಿಗಳನ್ನು ಖರೀದಿ ಮಾಡಿದೆ. ಕಂಪನಿಯು ಡಿಸೆಂಬರ್‌ನಲ್ಲಿ ಸಲ್ಲಿಸಿದ ಹೇಳಿಕೆಯ ಪ್ರಕಾರ, ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಪೆನಿಯನ್ನು ನಾಡೆಲ್ಲಾ ಮುನ್ನಡೆಸಿದ ರೀತಿಗೆ ಮೈಕ್ರೋಸಾಫ್ಟ್‌ನ ಮಂಡಳಿ ಸದಸ್ಯರು ಶ್ಲಾಘಿಸಿದ್ದಾರೆ. ಕಂಪನಿಯು 2020ರ ಹಣಕಾಸು ವರ್ಷದಲ್ಲಿ ಶೇ 14ರಷ್ಟು ಆದಾಯದ ಬೆಳವಣಿಗೆ ದಾಖಲಿಸಿದೆ. ಜಾಹೀರಾತು ಮತ್ತು ಇತರ ಮಾರುಕಟ್ಟೆಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಈ ಸಾಧನೆ ಮಾಡಿದೆ.

“ಸಂಸ್ಥೆಯಾದ್ಯಂತ ವೈಖರಿಯ ಬದಲಾವಣೆಗೆ ಚಾಲನೆ ನೀಡಿದ್ದಕ್ಕಾಗಿ, ವಿಶೇಷವಾಗಿ ನಮ್ಮ ವ್ಯವಹಾರ ಮತ್ತು ನಮ್ಮ ಜನರ ಮೇಲೆ ಕೋವಿಡ್ -19 ಈ ಹಿಂದೆಂದೂ ಕಾಣದ ಪ್ರಭಾವ ಬೀರಿದ ಸಂದರ್ಭದಲ್ಲಿ ಅದ್ಭುತ ಪ್ರಗತಿ ಸಾಧಿಸಿದ ಶ್ರೇಯ ನಾಡೆಲ್ಲಾ ಅವರಿಗೆ ಸಲ್ಲುತ್ತದೆ,” ಎಂದು ಮೈಕ್ರೋಸಾಫ್ಟ್ ಹೇಳಿದೆ. ಅಂದಹಾಗೆ, ಮೈಕ್ರೋಸಾಫ್ಟ್​ ಷೇರುಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ವ್ಯಕ್ತಿ ಸತ್ಯ ನಾಡೆಲ್ಲ. ಅವರ ಬಳಿ ಈಗ 16 ಲಕ್ಷಕ್ಕೂ ಹೆಚ್ಚು ಷೇರುಗಳಿವೆ. ಸದ್ಯಕ್ಕೆ ಮೈಕ್ರೋಸಾಫ್ಟ್​ನ ಒಂದು ಷೇರು 257.38 ಅಮೆರಿಕನ್ ಡಾಲರ್​ ಇದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 19,055. ಇನ್ನು ಅವರು ಬಳಿ ಇರುವ ಹದಿನಾರು ಲಕ್ಷ ಷೇರಿನ ಬೆಲೆ ಎಷ್ಟಾಗುತ್ತದೆ ಅಂತ ನೋಡುವುದಾದರೆ, 3,040,00,00,000 ರೂಪಾಯಿ (3,040 ಕೋಟಿ ರೂಪಾಯಿ ಆಗುತ್ತದೆ).

ಮೈಕ್ರೋಸಾಫ್ಟ್ ಸಹಸಂಸ್ಥಾಪಕರಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ವರ್ಷದ ಹಿಂದಷ್ಟೇ ಕಂಪೆನಿ ಮಂಡಳಿಯಿಂದ ಹೊರಬಂದಿದ್ದಾರೆ. 2000ನೇ ಇಸವಿಯಲ್ಲಿ ಕಂಪೆನಿಯ ಸಿಬ್ಬಂದಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವುದಕ್ಕೆ ಪ್ರಯತ್ನಿಸಿದ ಆರೋಪ ಬಂದಿತ್ತು. ಆ ನಂತರ ವಿಚಾರಣೆ ನಡೆದು, ಗೇಟ್ಸ್ ಕಂಪೆನಿಯಿಂದ ಹೊರಬಂದರು. ಇನ್ನು ಥಾಮ್ಸನ್ ಈ ಸಿಮಂಟೆಕ್ ಸಿಇಒ ಆಗಿದ್ದವರು 2012ರಲ್ಲಿ ಮಂಡಳಿ ಸೇರ್ಪಡೆಯಾದರು ಮತ್ತು 2014ರಲ್ಲಿ ಬಿಲ್​ ಗೇಟ್ಸ್​ ಸ್ಥಾನಕ್ಕೆ ಅಧ್ಯಕ್ಷರಾಗಿ ಬಂದರು. ಅದೇ ದಿನ ಸ್ಟೀವ್ ಬಾಲ್ಮರ್ ಅವರ ಸ್ಥಾನಕ್ಕೆ ಸಿಇಒ ಆಗಿ ಸತ್ಯ ನಾಡೆಲ್ಲ ಬಂದರು. ಇದೀಗ 1.94 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್ ಇರುವಂಥ ಕಂಪೆನಿಗೆ ಸತ್ಯ ನಾಡೆಲ್ಲ ಅಧ್ಯಕ್ಷರಾಗುತ್ತಿದ್ದಾರೆ. ಭಾರತದ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ 143 ಲಕ್ಷ ಕೋಟಿ ಆಗುತ್ತದೆ. ಮಾರುಕಟ್ಟೆಯ ಬಂಡವಾಳ ಮೌಲ್ಯದಲ್ಲಿ ಭಾರತದ ಟಾಪ್​ 1 ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್. ಅದರ ಮೌಲ್ಯ 14.72 ಲಕ್ಷ ಕೋಟಿ ರೂಪಾಯಿ. ಇದರ ಒಂಬತ್ತು ಪಟ್ಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಕಂಪೆನಿ ಮೈಕ್ರೋಸಾಫ್ಟ್.

53 ವರ್ಷದ ಸತ್ಯ ನಾರಾಯಣ ನಾಡೆಲ್ಲ ಭಾರತೀಯ ಅಮೆರಿಕನ್. ಮೂಲತಃ ಆಂಧ್ರಪ್ರದೇಶದ ಹೈದರಾಬಾದ್​ನವರು. ಪತ್ನಿ ಅನುಪಮಾ ನಾಡೆಲ್ಲಾ. ಝೈನ್, ದಿವ್ಯಾ ಹಾಗೂ ತಾರಾ ಎಂಬ ಮೂರು ಮಕ್ಕಳಿದ್ದಾರೆ.

ಇದನ್ನೂ ಓದಿ: Satya Nadella: ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್​​ ನೂತನ ಚೇರ್ಮನ್!

(2 trillion market capital US company Microsoft new chairman named by board, Indian American Satya Nadella becoming chairman)

Published On - 3:58 pm, Thu, 17 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ