Satya Nadella: ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ನೂತನ ಚೇರ್ಮನ್!
Microsoft Chairman: ಜಗತ್ತಿನ ಸಾಫ್ಟ್ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ತನ್ನ ಮುಖ್ಯ ನಿರ್ವಹಣಾಧಿಕಾರಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ.
ವಾಷಿಂಗ್ಟನ್: ಜಗತ್ತಿನ ಸಾಫ್ಟ್ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ತನ್ನ ಮುಖ್ಯ ನಿರ್ವಹಣಾಧಿಕಾರಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ. ಜಾನ್ ಥಾಮ್ಸನ್ ಮೈಕ್ರೋಸಾಫ್ಟ್ ಕಂಪನಿಯ ಹಾಲಿ ಅಧ್ಯಕ್ಷರಾಗಿದ್ದಾರೆ. ಸತ್ಯನಾರಾಯಣ ನಾಡೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದರು.
ಮೈಕ್ರೋಸಾಫ್ಟ್ ಕಂಪನಿಯು (Microsoft Corp) ಬುಧವಾರದಂದು (ಜೂನ್ 16) ಜಾನ್ ಥಾಂಪ್ಸನ್ ಅವರ ಸ್ಥಾನದಲ್ಲಿ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ.
2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಹ ಸ್ಥಾಪಕರಾಗಿದ್ದ ಬಿಲ್ ಗೆಟ್ಸ್ ಅವರಿಂದ ಚೇರ್ಮನ್ ಸ್ಥಾನವನ್ನು ಪಡೆದಿದ್ದ ಜಾನ್ ಥಾಮ್ಸನ್ ಇನ್ನು ಮುಂದೆ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯು ಹಿಂದಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಶೇ. 56 ಸೆಂಟ್ಸ್ ಡಿವಿಡೆಂಡ್ ಘೋಷಿಸಿದೆ. ಸೆಪ್ಟೆಂಬರ್ 9ರಿಂದ ಈ ಲಾಭಾಂಶವನ್ನು ಷೇರುದಾರರಿಗೆ ನೀಡಲಿದೆ.
(Satya Narayana Nadella new chairman of Microsoft)
Published On - 11:09 am, Thu, 17 June 21