ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

| Updated By: ರಶ್ಮಿ ಕಲ್ಲಕಟ್ಟ

Updated on: Feb 21, 2021 | 1:01 PM

ನಗರದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆ ಹಿಡಿಯ ಬೇಕು ಎಂಬ ದೃಷ್ಟಿಯಿಂದ ಮಹಿಳೆಯರು ಪ್ರತಿಭಟನೆ ಕೈಗೊಂಡಿದ್ದಾರೆ.

ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
ಪ್ರತಿಭಟನಾ ನಿರತ ಮಹಿಳೆಯರು
Follow us on

ರಾಯಚೂರು: ನಗರದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆ ಹಿಡಿಯ ಬೇಕು ಎಂದು ಮಹಿಳೆಯರು ಪ್ರತಿಭಟನೆ ಕೈಗೊಂಡಿದ್ದಾರೆ.  ಒಂದು ವಾರದಿಂದ ಈ ಕುರಿತಂತೆ ಧರಣಿ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮಹಿಳೆಯರು ಸಾಥ್​ ನೀಡಿದ್ದಾರೆ.

ಮದ್ಯ ಮಾರಾಟ ನಿಷೇಧ ಆಂದೋಲನ ಸಮಿತಿಯಿಂದ ಹೋರಾಟ ನಡೆಯುತ್ತಿದ್ದು, ಜಿಲ್ಲೆಯ 177 ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳೆಯರು ಪಟ್ಟಿ ನೀಡಿದರೂ ಕೂಡಾ ಅಬಕಾರಿ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಹೈಕೋರ್ಟ್​ ಆದೇಶ ಪಾಲಿಸದ ಅಬಕಾರಿ ಇಲಾಖೆಯ ವಿರುದ್ಧ ಹೋರಾಟ ಕೈಗೊಳ್ಳಲಾಗಿದೆ. ಈ ಕುರಿತಂತೆ ಅಬಕಾರಿ ಇಲಾಖೆ ಪೊಲೀಸರು ಮತ್ತು ಮಹಿಳೆಯ ನಡುವೆ ವಾಗ್ವಾದ ನಡೆದಿದೆ.

ಒಂದು ವಾರದಿಂದ ನಡೆಯುತ್ತಿರುವ  ಹೋರಾಟದಲ್ಲಿ, ಗೂಂಡಾಗಳು ಪ್ರತಿಭಟನಾನಿರತ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಬಕಾರಿ ಇಲಾಖೆಯಿಂದ ಪದೇ ಪದೇ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಯಾವುದಕ್ಕೂ ಕುಗ್ಗದೆ ಮಹಿಳೆಯರು ಹೋರಾಟ ಮುಂದುವರೆಸಿದ್ದು, ಅಕ್ರಮ ಮದ್ಯ ಮಾರಾಟ ನಿಗದಿತ ಸಮಯದೊಳಗೆ ಕಡಿವಾಣ ಹಾಕುವವರೆಗೂ ಹೋರಾಟ ನಡೆಸುತ್ತೇವೆ ಎಂದು ನಿರ್ಧರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಮದ್ಯ ಮರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು
ಜನವರಿ ತಿಂಗಳಿನಲ್ಲಿ ಮದ್ಯ ಮರಾಟಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಎಲ್ಲಡೆ ಲಾಕ್​ಡಾನ್​ ಘೋಷಣೆಯಾದ ನಂತರ ಜಿಲ್ಲೆಯ ಕಾರವಾರದ ಮಾಜಾಳಿ ಗಡಿಯಿಂದ ಬಾರೀ ಪ್ರಮಾಣದ ಗೋವಾ ಮದ್ಯ ಕಳ್ಳ ದಾರಿ ಮೂಲಕ ಬರುತ್ತಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟ: ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ನಗರಸಭೆ ಸದಸ್ಯ

ಇದನ್ನೂ ಓದಿ: ಅಕ್ರಮ ಮದ್ಯ ಸಾಗಾಣಿಕೆ: ಕರ್ನಾಟಕದಲ್ಲಿ ಮಾರಾಟವಾಗುತ್ತಿದ್ದ ಗೋವಾ ಮದ್ಯಕ್ಕೆ ಬ್ರೇಕ್​ ಹಾಕಿದ ಅಬಕಾರಿ ಇಲಾಖೆ