ಕೊರೊನಾ ಆತಂಕ ದೂರವಾಗಿ, ಶಾಲೆಗೆ ಹತ್ತಿರವಾಗುತ್ತಿರುವ ವಿದ್ಯಾರ್ಥಿಗಳು; ಆದರೆ ಬಸ್​ಗಳಿಲ್ಲದೆ ಪರದಾಟ

ಕೊರೊನಾ ಆತಂಕ ದೂರವಾಗುತ್ತಿದ್ದಂತೆಯೇ ಎಲ್ಲೆಡೆ ಶಾಲೆ ಕಾಲೇಜು ಆರಂಭವಾಗಿದೆ. ಆದರೆ ಶಾಲೆಗಳಿಗೆ, ಕಾಲೇಜಿಗೆ ತೆರಳಲು ಬಸ್​ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುವರಿ ಬಸ್​ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊರೊನಾ ಆತಂಕ ದೂರವಾಗಿ, ಶಾಲೆಗೆ ಹತ್ತಿರವಾಗುತ್ತಿರುವ ವಿದ್ಯಾರ್ಥಿಗಳು; ಆದರೆ ಬಸ್​ಗಳಿಲ್ಲದೆ ಪರದಾಟ
ಹೆಚ್ಚುವರಿ ಬಸ್​ಗಳಿಲ್ಲದೇ ಬಾಗಿಲಂಚಿನವೆರೆಗೆ ನಿಂತು ಪ್ರಯಾಣಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳು
Updated By: ಸಾಧು ಶ್ರೀನಾಥ್​

Updated on: Feb 04, 2021 | 5:45 PM

ಹಾಸನ: ಕೊರೊನಾ ಆತಂಕ ದೂರವಾಗುತ್ತಿದ್ದಂತೆಯೇ ಎಲ್ಲೆಡೆ ಶಾಲೆ ಕಾಲೇಜು ಆರಂಭವಾಗಿದೆ. ಆದರೆ ಶಾಲೆಗಳಿಗೆ, ಕಾಲೇಜಿಗೆ ತೆರಳಲು ಬಸ್​ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡೋ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತದ ವಿರುದ್ದ ವಿದ್ಯಾರ್ಥಿಗಳು ಕಿಡಿ ಕಾರಿದ್ದಾರೆ. ಹಾಗೂ ಅರಕಲಗೂಡು ತಾಲ್ಲೂಕಿನ ಸಂತೆಮರೂರು ಬಳಿ ಇಂದು ತಮ್ಮ ಮಾರ್ಗದ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳು ನಿತ್ಯವೂ ಪರದಾಡಿಕೊಂಡು ಪ್ರಯಾಣ ಕಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜೀವದ ಹಂಗು ತೊರೆದು ಬಸ್​ನ ಬಾಗಿಲಂಚಿನವರೆಗೂ ವಿದ್ಯಾರ್ಥಿಗಳು ನಿಂತು ಪ್ರಯಾಣ ಮಾಡುವಂತಾಗಿದೆ. ಹೆಚ್ಚುವರಿ ಬಸ್ ನೀಡಿ ಎಂದರೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇರೆ ಬೇರೆ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಅರಕಲಗೂಡಿಗೆ ಕಾಲೇಜಿಗೆ ಬರುತ್ತಾರೆ. ಆದರೆ, ಕಾಲೇಜು ಸಮಯಕ್ಕೆ ಇರುವುದು ಒಂದೇ ಬಸ್ಸು. ಹಾಗಾಗಿ ಈ ಸಮಯದಲ್ಲಿ ಹೆಚ್ಚುವರಿಯಾಗಿ ಬಸ್ ಸಂಚಾರಕ್ಕೆ ಅವಕಾಶ ನೀಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಂದ ಪ್ರತಿಭಟನೆ.. ಏಕೆ?