ಬೆಂಗಳೂರು, ಸೆ.22: ಅಪಾರ್ಟ್ಮೆಂಟ್ನ 13ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ (17) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣ ಸಂಬಂಧ ಜ್ಞಾನಭಾರತಿ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೂ ಮುನ್ನ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಧರ್ಮಸ್ಥಳ ಸುತ್ತಾಡಿರುವ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಆಕೆ ಮಾನಸಿಕವಾಗಿ ನೊಂದಿದ್ದಳು ಅನ್ನೊದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬ್ಯಾಟರಾಯನಪುರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಅತಿಥಿ ಸೋಗಿನಲ್ಲಿ ನಿನ್ನೆ 13 ನೇ ಮಹಡಿಗೆ ಹೋದ ವಿಜಯಲಕ್ಷ್ಮೀ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತ ಕಾಲೇಜಿಗೆ ಹೋದ ಮಗಳು ಕತ್ತಲಾದರೂ ಯಾಕೆ ಬಂದಿಲ್ಲ ಎಂದು ತಾಯಿ ಯಶೋಧ ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ಮಗಳ ಸಾವಿನ ಸುದ್ದಿ ತಿಳಿದು ಬಂದಿದೆ.
ಆತ್ಮಹತ್ಯೆ ಮುನ್ನ ಬಾಲಕಿ ಮಂಗಳೂರಿಗೆ ತೆರಳಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ. ಹೀಗಾಗಿ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಗಳೂರಿಗೆ ಹೋಗಿದ್ದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ನಿನ್ನೆ ಅಪಾರ್ಟ್ಮೆಂಟ್ನಲ್ಲಿ ಒಬ್ಬಳು ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಕಟ್ಟಡದ 13ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಜ್ಞಾನಭಾರತಿಯಲ್ಲಿ ವಾಸವಿದ್ದಾಳು. ಪಿಯುಸಿ ಮೊದಲ ವರ್ಷ ಓದುತಿದ್ದು, ಮಾನಸಿಕವಾಗಿ ಅಸ್ವಸ್ತವಾಗಿದ್ದಳು ಅನ್ನೊದು ತಿಳಿದು ಬಂದಿದೆ ಎಂದರು.
ಇದನ್ನೂ ಓದಿ: ಅವಾಚ್ಯ ಶಬ್ದದಿಂದ ನಿಂದಿಸಿದ ಅತ್ತೆಗೆ ಅಳಿಯನಿಂದ ಥಳಿತ: ಮನನೊಂದು ಆತ್ಮಹತ್ಯೆಗೆ ಶರಣಾದ ಮಗಳು
19 ರಂದು ಮನೆಯಿಂದ ಹೊದವಳು ಧರ್ಮಸ್ಥಳಕ್ಕೆ ತೆರಳಿದ್ದಾಳೆ. ಬಳಿಕ ಧರ್ಮಸ್ಥಳದಲ್ಲಿ ಸುತ್ತಾಡಿದ್ದ ಈಕೆಯನ್ನು ನೋಡಿದ ಓರ್ವರು ಬೆಂಗಳೂರಿಗೆ ವಾಪಾಸ್ ಕಳುಹಿಸಿದ್ದಾರೆ. ಆಕೆ ಬೆಂಗಳೂರಿಗೆ ಬಂದು ಈ ಅಪಾರ್ಟ್ಮೆಂಟ್ ಒಳಗೆ ಹೊಗಿದ್ದಾಳೆ. ನಂತರ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರು.
ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ತಡೆದಾಗ 9ನೇ ಮಹಡಿಗೆ ಹೊಗಬೇಕು ಎಂದಿದ್ದಾಳೆ. ಈ ವೇಳೆ ಫ್ಲ್ಯಾಟ್ ನಂಬರ್ ಹೇಳಿದ್ದಾಳೆ. ಗೆಸ್ಟ್ ಬಂದಿದ್ದಾರೆ ಎಂದಾಗ ನಿವಾಸಿ ಕಳುಹಿಸಿಕೊಡಿ ಎಂದಿದ್ದಾರೆ. ಈ ಬಳಿಕ 13ನೇ ಮಹಡಿಗೆ ತೆರಳಿದಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾನಸಿಕವಾಗಿ ನೊಂದಿದ್ದಳು ಅನ್ನೊದು ಮೇಲ್ನೋಟಕ್ಕೆ ಕೇಳಿ ಬಂದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸೂಸೈಡ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ