ಆನ್​ಲೈನ್​ ಕ್ಲಾಸ್ ಕೇಳಲು ಮನೆ ಮಹಡಿ ಏರಿದ ವಿದ್ಯಾರ್ಥಿಗಳು; ಗಾಳಿ, ಮಳೆಯಲ್ಲಿ ಪರದಾಟ

| Updated By: sandhya thejappa

Updated on: Jun 28, 2021 | 2:29 PM

ಗದಗ ತಾಲೂಕಿನ ಕಬಲಾಯತಕಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಪಾಡು ಅಯೋಮಯವಾಗಿದೆ. ನೆಟ್​ವರ್ಕ್​ ಸಿಗದೆ ಮನೆ ಮಾಳಿಗೆ, ಹೊಲ, ಗದ್ದೆಗಳಿಗೆ ಹೋಗುತ್ತಿದ್ದಾರೆ. ಚಳಿ, ಮಳೆ, ಗಾಳಿಗೆ ಲೆಕ್ಕಿಸದೆ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.

ಆನ್​ಲೈನ್​ ಕ್ಲಾಸ್ ಕೇಳಲು ಮನೆ ಮಹಡಿ ಏರಿದ ವಿದ್ಯಾರ್ಥಿಗಳು; ಗಾಳಿ, ಮಳೆಯಲ್ಲಿ ಪರದಾಟ
ಹೊಲಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳು, ಮನೆ ಮಹಡಿ ಮೇಲೆ ಕುಳಿತ ವಿದ್ಯಾರ್ಥಿ
Follow us on

ಗದಗ: ಕೊರೊನಾದಿಂದಾದ ಸಮಸ್ಯೆಗಳು ಒಂದೆರಡಲ್ಲ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿತ್ತು. ಸದ್ಯ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಬಂದ್ ಮಾಡಲಾಗಿದ್ದ ಶಾಲೆ- ಕಾಲೇಜುಗಳನ್ನು ಇನ್ನು ಪ್ರಾರಂಭಿಸಿಲ್ಲ. ಆನ್​ಲೈನ್​ ಮೂಲಕ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಆದರೆ ಸರಿಯಾಗಿ ನೆಟ್​ವರ್ಕ್​ ಸಿಗದೆ ಪರದಾಡುತ್ತಿದ್ದಾರೆ. ಗಾಳಿ, ಮಳೆ ಲೆಕ್ಕಿಸದೆ ವಿದ್ಯಾರ್ಥಿಗಳು ಆನ್​ಲೈನ್ ಪಾಠ ಕೇಳುತ್ತಿದ್ದಾರೆ.

ಗದಗ ತಾಲೂಕಿನ ಕಬಲಾಯತಕಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಪಾಡು ಅಯೋಮಯವಾಗಿದೆ. ನೆಟ್​ವರ್ಕ್​ ಸಿಗದೆ ಮನೆ ಮಾಳಿಗೆ, ಹೊಲ, ಗದ್ದೆಗಳಿಗೆ ಹೋಗುತ್ತಿದ್ದಾರೆ. ಚಳಿ, ಮಳೆ, ಗಾಳಿಗೆ ಲೆಕ್ಕಿಸದೆ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಹೈಸ್ಕೂಲ್, ಬಿಇ, ಬಿ-ಟೆಕ್, ಬಿಎಸ್​ಸಿ, ಬಿಕಾಂ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್ ಕೇಳಲು ಪರದಾಡುತ್ತಿದ್ದು, ಆನ್​ಲೈನ್​ ಕ್ಲಾಸ್​ಗೆ ಮನೆ ಮಾಳಿಗೆ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆಟ್​ವರ್ಕ್​ ಸಮಸ್ಯೆ ಬಗೆಹರಿಸುವಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಹೊಲದ ಬಳಿ ನಿಂತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಮಳೆಯಲ್ಲಿ ಕ್ಲಾಸ್ ಕೇಳಿದ ವಿದ್ಯಾರ್ಥಿನಿ
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ವಿದ್ಯಾರ್ಥಿಯ ಮನೆಯಲ್ಲಿ ಸಿಗ್ನಲ್ ಕೊರತೆ ಇರುವ ಕಾರಣ ಅಕೆ ರಸ್ತೆಯ ಬದಿ ಕೂತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಹಳ್ಳಿಯನ್ನು ಬಿಟ್ಟು ನೆಟ್ವರ್ಕ್​ಗಾಗಿ ಅದೆಷ್ಟೋ ದೂರ ಬಂದು ಅಭ್ಯಾಸ ಕಲಿಯಬೇಕಿದೆ. ಆರ್ಭಟಿಸುತ್ತಿರುವ ಮಳೆಯಲ್ಲಿಯೂ ಆಕೆ ಶ್ರದ್ಧೆಯಿಂದ ಪಾಠ ಕೇಳುತ್ತಿರುವ ಜೊತೆಗೆ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ತಂದೆ ಕೊಡೆ ಹಿಡಿದು ನಿಂತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ
Viral Photo: ಇಲ್ಲಿ ಮಳೆಯಲ್ಲಿ‌ ನೆನೆದೇ ಆನ್​ಲೈನ್ ಕ್ಲಾಸಿಗೆ ಕೂರಬೇಕು; ಮಗಳ ರಕ್ಷಣೆಗೆ ಸ್ವತಃ ಕೊಡೆ ಹಿಡಿದು ನಿಂತ ಅಪ್ಪ

ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಯಾವಾಗ? ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

(Students have climbed the home floor to participate in online class at Gadag)