Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿನಲ್ಲಿದ್ದ ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ; ಸತತ 24 ದಿನಗಳಿಂದ ಕೆರೆಯಲ್ಲಿದ್ದ ಜಾಲಿಮರ ತೆರವು

ಅರಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಸರ್ಕಾರದ ಅನುದಾನಕ್ಕೂ ಕಾಯದೇ ತಮ್ಮ ಸ್ವಂತ ಹಣದಿಂದ ಕೆರೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಮುಳ್ಳು ಗಿಡಗಂಟೆಗಳಿಂದ ಕೂಡಿದ್ದ ಕೆರೆಯ ಸ್ವರೂಪಕ್ಕೆ ಜೀವಕಳೆ ತುಂಬುವ ಮೂಲಕ ಮುಂದಿನ ಪಿಳಿಗೆಗೆ ಕೆರೆಯನ್ನು ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಅಳಿವಿನಂಚಿನಲ್ಲಿದ್ದ ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ; ಸತತ 24 ದಿನಗಳಿಂದ ಕೆರೆಯಲ್ಲಿದ್ದ ಜಾಲಿಮರ ತೆರವು
ಅಳಿವಿನಂಚಿನಲ್ಲಿದ್ದ ಕೆರೆಗೆ ಗ್ರಾಮಸ್ಥರಿಂದಲೆ ಕಾಯಕಲ್ಪ
Follow us
TV9 Web
| Updated By: preethi shettigar

Updated on:Jun 28, 2021 | 2:17 PM

ಬೆಂಗಳೂರು: ನಗರೀಕರಣ ಬೆಳೆಯುತ್ತಿದ್ದಂತೆ ಕೆರೆಗಳು ಒತ್ತುವರಿಯಾಗಿ ಅವನತಿಯ ಹಂತಕ್ಕೆ ತಲುಪುತ್ತಿವೆ. ಅದರಲ್ಲೂ ಬೆಂಗಳೂರು ನಗರ ಬೃಹದಾಕಾರಾವಾಗಿ ಬೆಳೆದು ನಿಂತಿದ್ದು, ನಗರದ ಅಕ್ಕಪಕ್ಕದ ಕೆರೆಗಳ ಮೂಲ ಸ್ವರೂಪಗಳೇ ಬದಲಾಗುತ್ತಿವೆ. ಅಂತೆಯೇ ಯಲಹಂಕ ತಾಲೂಕಿನ ಕಡತನಮಲೆ ಗ್ರಾಮದ ಕೆರೆಯು ಅಳಿವಿನಂಚಿನಲ್ಲಿತ್ತು. ಆದರೆ ಇದೀಗ ಅಳಿವಿನಂಚಿನಲ್ಲಿದ್ದ ಕೆರೆ ಗ್ರಾಮಸ್ಥರ ನಿಸ್ವಾರ್ಥ ಸೇವೆಯಿಂದ ಕಂಗೋಳಿಸುತ್ತಿದೆ.ಕಡತನಮಲೆ ಗ್ರಾಮದ 53 ಎಕರೆ ಪ್ರದೇಶದ ಈ ಕೆರೆ ಮುಳ್ಳು ಗಿಡಗಳಿಂದ ಅವನತಿಯ ಹಂತಕ್ಕೆ ತಲುಪಿತ್ತು. ಮಳೆ ಬಂದರೂ ಕಾಲುವೆಗಳ ಒತ್ತುವರಿಯಿಂದ ಕೆರೆ ಮೂಲ ಸ್ವರೂಪವೇ ಹಾಳಾಗಿ ನೀರು ತುಂಬದೆ ಬತ್ತಿ ಹೋಗಿತ್ತು. ಇನ್ನೂ ಈ ಕೆರೆಗೆ ಜೀವಕಳೆ ತುಂಬಬೇಕು ಎಂದು ಗ್ರಾಮಸ್ಥರೇ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ಅರಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಸರ್ಕಾರದ ಅನುದಾನಕ್ಕೂ ಕಾಯದೇ ತಮ್ಮ ಸ್ವಂತ ಹಣದಿಂದ ಕೆರೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಮುಳ್ಳು ಗಿಡಗಂಟೆಗಳಿಂದ ಕೂಡಿದ್ದ ಕೆರೆಯ ಸ್ವರೂಪಕ್ಕೆ ಜೀವಕಳೆ ತುಂಬುವ ಮೂಲಕ ಮುಂದಿನ ಪಿಳಿಗೆಗೆ ಕೆರೆಯನ್ನು ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

53 ಎಕರೆಯ ಕೆರೆ ಇರುವ ಈ ಕಡತನಮಲೆ ಗ್ರಾಮ, ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಿದ್ದು, ಬರುವ ದಿನಗಳಲ್ಲಿ ಕೆರೆಯ ಅಂಚಿನಲ್ಲಿರುವ ಜಮೀನುಗಳು ಒತ್ತುವರಿಯಾಗಿ ಹರಿದು ಹೋಗುತ್ತಿತ್ತು. ಇನ್ನೂ ಕೆರೆಗೆ ನೀರು ಬಾರದೇ ಅಕ್ಕಪಕ್ಕದ ಕೃಷಿ ಜಮೀನುಗಳ ಬೋರ್ವೆಲ್ ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಹೀಗಾಗಿ ಕಳೆದ 24 ದಿನಗಳಿಂದ ಮುಳ್ಳುಗಳಿದ್ದ ಕೆರೆಯ ಸ್ವರೂಪವನ್ನೆ ಬದಲಿಸಿದ್ದಾರೆ.

ಸುಮಾರು 70 ಲಕ್ಷ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಮಾಡಿರುವ ಗ್ರಾಮಸ್ಥರು ಸುತ್ತಲು ವಾಕಿಂಗ್ ಟ್ರ್ಯಾಕ್ ಮಾಡಿದ್ದಾರೆ. ಜತೆಗೆ ಕೆರೆಯ ಅರ್ಧ ಭಾಗದಲ್ಲಿ ಐಸ್ಲ್ಯಾಂಡ್ ಮಾಡಲು ಹೊರಟಿದ್ದು, ಕೆರೆಗೆ ಎಲ್ಲರ ಆಕರ್ಷಣೆ ಮಾಡುವ ಟಚ್ ನೀಡುತ್ತಿದ್ದಾರೆ. ಇನ್ನೂ ಈಗಾಗಲೇ ಪ್ರಾಣಿ ಪಕ್ಷಿ, ಜೀವ ಸಂಕುಲಗಳ ವಾಸಕ್ಕಾಗಿ ಐದು ಸಾವಿರ ಗಿಡಗಳನ್ನು ಕೆರೆಯ ಅಂಚಿನಲ್ಲಿ ಹಾಕಿದ್ದಾರೆ. ಅಲ್ಲದೆ ಪ್ರತ್ಯಕವಾಗಿ ಕೆರೆಯ ಅಂಚಿನ ಅರ್ಧ ಎಕರೆಯಲ್ಲಿ ಮರಗಳನ್ನು ಹಾಕಿ, ಪಕ್ಷಿಗಳಿಗೆ ನೀರು ಕುಡಿಯುವ ಗುಂಡಿಗಳನ್ನು ನಿರ್ಮಿಸಿ ನಾಶವಾಗಿ ಒತ್ತುವರಿಯಾಗುತ್ತಿದ್ದ ಕೆರೆಗೆ ಜೀವ ತುಂಬುವ ಕೆಲಸ ಮಾಡಲಾಗಿದೆ ಎಂದು ಅರಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ತಿಮ್ಮೇಗೌಡ ತಿಳಿಸಿದ್ದಾರೆ.

ಒಟ್ಟಾರೆ ಬೆಂಗಳೂರು ನಗರ ಬೆಳೆದಿದ್ದು, ನಗರದ ಗಡಿ ಭಾಗಗಳ ಗ್ರಾಮದಲ್ಲಿ ಕೆರೆಯ ಒತ್ತುವರಿಯಿಂದ ಕೆರೆಗಳಿಗೆ ಮಳೆ ನೀರು ಹರಿಯದೇ ಬತ್ತಿಹೋಗಿದೆ. ಈ ನಿಟ್ಟಿನಲ್ಲಿ ಕಡತನಮಲೆ ಗ್ರಾಮಸ್ಥರು ನಶಿಸಿ ಹೋಗುತ್ತಿದ್ದ ಕೆರೆಯನ್ನು ಸರ್ಕಾರದ ಅನುಧಾನಕ್ಕೆ ಕಾಯದೇ ತಾವೇ ಅಭಿವೃದ್ಧಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದು, ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿಗಾಗಿ 6,316 ಮರಗಳ ತೆರವಿಗೆ ಆಲೋಚನೆ; ಪರಿಸರ ಪ್ರೇಮಿಗಳ ಆಕ್ರೋಶ

Lake Conservation: ಕೆರೆ ಬಳಕೆದಾರರ ಸಂಘಕ್ಕೆ ಉತ್ತೇಜನ ನೀಡಿದ್ದು ಈ ಮೂರು ಪರಿಕಲ್ಪನೆಗಳು: ಮದನ ಗೋಪಾಲ್

Published On - 1:57 pm, Mon, 28 June 21

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ