ಬೆಂಗಳೂರು: ದೆಹಲಿಯಲ್ಲಿಂದು ಹೊಸ ಸಂಸತ್ ಭವನ ನಿರ್ಮಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಅನೇಕ ಸಂಸದರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
2022ರ ವೇಳೆಗೆ ಹೊಸ ಸಂಸತ್ ಕಟ್ಟಡ ನಿರ್ಮಾಣಗೊಳ್ಳುವ ನಿರೀಕ್ಷೆಯಿದೆ. ಭವನದದ ನಿರ್ಮಾಣದಲ್ಲಿ ಸುಮಾರು 2,000 ಕಾರ್ಮಿಕರು 861.90 ಕೋಟಿ ವೆಚ್ಚ ತಗುಲಲಿದೆ. ಈ ಕಟ್ಟಡದ ಶಂಕುಸ್ಥಾಪನೆಯನ್ನು ಮೋದಿ ಇಂದು ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ 200 ಅತಿಥಿಗಳು ಪಾಲ್ಗೊಂಡಿದ್ದರು. ಸುಮಲತಾ ಕೂಡ ಇದರಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ 200 ಜನ ಆಹ್ವಾನಿತರಲ್ಲಿ ಒಬ್ಬಳಾಗಿ ಪಾಲ್ಗೊಂಡ ಭಾಗ್ಯ ನನ್ನದು. ಇಂದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಐತಿಹಾಸಿಕ ದಿನ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆ ಸಾಕಷ್ಟು ವಿಡಿಯೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
ಇಂದು ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ 200 ಜನ ಆಹ್ವಾನಿತರಲ್ಲಿ ಒಬ್ಬಳಾಗಿ ಪಾಲ್ಗೊಂಡ ಭಾಗ್ಯ ನನ್ನದು. ಇಂದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಐತಿಹಾಸಿಕ ದಿನ.
Posted by Sumalatha Ambareesh on Thursday, December 10, 2020
ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆಯ ನೆರವೇರಿದ ಅಮೃತಘಳಿಗೆಯ ದೃಶ್ಯಗಳು. ????
Posted by Sumalatha Ambareesh on Thursday, December 10, 2020
ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಮಾನ್ಯ ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ.
Posted by Sumalatha Ambareesh on Thursday, December 10, 2020
ಇಂದು ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ನೆರವೇರಿದ ಐತಿಹಾಸಿಕ ಘಳಿಗೆಯ ನಂತರ ಲೋಕಸಭೆಯ ಮಾನ್ಯ ಸ್ಪೀಕರ್ ಆದ ಶ್ರೀ. ಓಂ ಬಿರ್ಲಾ ಅವರೊಂದಿಗಿನ ಕ್ಷಣಗಳು. ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಸದಾ ಆದರ್ಶಪ್ರಾಯ.
Posted by Sumalatha Ambareesh on Thursday, December 10, 2020
ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ: ಕನ್ನಡ ನಾಡಿನ ಅನುಭವ ಮಂಟಪ ನೆನೆದ ಪ್ರಧಾನಿ ನರೇಂದ್ರ ಮೋದಿ
Published On - 9:36 pm, Thu, 10 December 20