ಬೆಂಗಳೂರು: ಅಬ್ಬಾ ವೀಕೆಂಡ್ ಬಂತಪ್ಪಾ ಅಂತಾ ಹೊರಗೆ ಹೋಗುವ ಪ್ಲ್ಯಾನ್ ಇದ್ರೆ ಸ್ವಲ್ಪ ಎಚ್ಚರ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಬಂದ್ ಆಗಲಿದೆ. ಒಂದಲ್ಲ, ಎರಡಲ್ಲ ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿರುತ್ತೆ. ಸೋಮವಾರ ಬೆಳಗ್ಗೆಯ ತನಕ ಯಾರೂ ಹೊರಗೆ ಹೆಜ್ಜೆ ಇಡಂಗಿಲ್ಲ. ಇವತ್ತು ರಾತ್ರಿಯಿಂದಲೇ ಲಾಕ್ಡೌನ್ ಜಾರಿಗೆ ಬರಲಿದೆ.
ಇಂದು ಸಂಜೆಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್..!
ಯೆಸ್, ಕರುನಾಡಲ್ಲಿ ಕೊರೊನಾ ದಾಪುಗಾಲಿಡುತ್ತಾ ಮುಂದೆ ಸಾಗಿದೆ. ಹಾಗಾಗಿ ರಾಜ್ಯದಲ್ಲಿ ರಣಕೇಕೆ ಹಾಕ್ತಿರೋ ಹೆಮ್ಮಾರಿಯ ಕಟ್ಟಿ ಹಾಕೋಕೆ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಇಂದು ಸಂಜೆಯಿಂದಲೇ ರಾಜ್ಯದ ಪ್ರತಿಯೊಂದು ಜಿಲ್ಲೆ, ನಗರ, ಹಳ್ಳಿ ಹಳ್ಳಿಯಲ್ಲೂ ಸೆಕ್ಷನ್ 144 ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ
ಲಾಕ್ಡೌನ್ ವೇಳೆ ಏನು ಸಿಗಲ್ಲ..?
ಲಾಕ್ಡೌನ್ ಇವತ್ತು ರಾತ್ರಿಯಿಂದಲೇ ಜಾರಿಗೆ ಬರುತ್ತಿರೋದ್ರಿಂದ ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ಬ್ರೇಕ್ ಬೀಳಲಿದೆ. ಹೀಗಾಗಿ ಈ ಕೆಳಗಿನ ಸೇವೆಗಳು ಲಭ್ಯವಿರೋದಿಲ್ಲ.
1.ಸರ್ಕಾರಿ ಬಸ್ಗಳು ರಸ್ತೆಗಿಳಿಯಲ್ಲ
2.ಆಟೋ, ಟ್ಯಾಕ್ಸಿ ಸೇವೆ ಇರಲ್ಲ
3. ಯಾವುದೇ ಅಂಗಡಿ ಮುಂಗಟ್ಟುಗಳು ಓಪನ್ ಆಗಲ್ಲ
4. ಶಾಪಿಂಗ್ ಮಾಲ್‌ಗಳು ಕಂಪ್ಲೀಟ್ ಕ್ಲೋಸ್
5. ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್ ಮುಚ್ಚಿರಲಿವೆ
6. ಮಸೀದಿ, ಚರ್ಚ್ ಮತ್ತು ದೇವಸ್ಥಾನಗಳನ್ನ ತೆರೆಯಲು ಅನುಮತಿ ಇಲ್ಲ
7. APMC ಮಾರುಕಟ್ಟೆಗಳು ಇಂದು ಸಂಜೆಯಿಂದಲೇ ಬಂದ್ ಆಗಲಿದೆ
8. ಬೀದಿಬದಿಯ ವ್ಯಾಪಾರಕ್ಕೂ ಅನುಮತಿ ಇಲ್ಲ
9. ಖಾಸಗಿ ವಾಹನ ಮತ್ತು ಬೈಕ್ಗಳಲ್ಲಿ ಯಾರೂ ಓಡಾಡುವಂತಿಲ್ಲ
10. ಅಂತರ್ ಜಿಲ್ಲೆ, ಅಂತರ್ ರಾಜ್ಯ ಪ್ರವಾಸಕ್ಕೆ ಅನುಮತಿಯಿಲ್ಲ
11. ವಾಕಿಂಗ್, ಪಾರ್ಕ್ನಲ್ಲಿ ವಿಹಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ
ಲಾಕ್ಡೌನ್ ವೇಳೆ ಏನು ಸಿಗುತ್ತೆ
ಲಾಕ್ಡೌನ್ ಕರ್ಫ್ಯೂ ವೇಳೆ ಖಡಕ್ ರೂಲ್ಸ್ ಜಾರಿಯಲ್ಲಿರುತ್ತೆ. ಹೀಗಾಗಿ, ಕೆಲವೊಂದು ಸೇವೆಗಳು ಮಾತ್ರ ಲಭ್ಯವಿರುತ್ತೆ.
1. ಹಾಲು, ಮೊಸರು, ತರಕಾರಿ, ಪೇಪರ್ ಎಂದಿನಂತೆ ಸಿಗಲಿದೆ
2. ದಿನಸಿ ವಸ್ತುಗಳು ಲಾಕ್ಡೌನ್ ವೇಳೆಯೂ ಲಭ್ಯವಿರಲಿದೆ
3. ಔಷಧಿ ಅಂಗಡಿ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆ ಇರಲಿವೆ
4. ಡಾಕ್ಟರ್, ನರ್ಸ್ ಹಾಗೂ ತುರ್ತು ವಾಹನ ಓಡಾಟಕ್ಕೆ ಮಾತ್ರ ಅವಕಾಶ
ಹಾಗಾಗಿ ಏನಾದ್ರೂ ಪ್ಲ್ಯಾನ್ ಇದ್ರೆ ಚೇಂಜ್ ಮಾಡ್ಕೊಳ್ಳಿ. ಇಂದು ಎಲ್ಲೆ ಇದ್ರೂ ಸಂಜೆಯೊಳಗೆ ಮನೆ ಸೇರಿಕೊಳ್ಳಿ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಲಾಕ್ಡೌನ್ ಜಾರಿ.
Published On - 9:08 am, Sat, 4 July 20