1600 ಪೊಲೀಸರಿಗೆ ಕೋವಿಡ್ ಟೆಸ್ಟ್, ವಾರಕ್ಕೊಮ್ಮೆ ಪ್ರತಿ ಠಾಣೆ ಸ್ಯಾನಿಟೈಸ್
ದಾವಣಗೆರೆ: ರಾಜ್ಯಾದ್ಯಂತ ಕೊರೊನಾದಿಂದ ಪೊಲೀಸ್ ಇಲಾಖೆಗೆ ಭಾರೀ ಪೆಟ್ಟು ಬೀಳುತ್ತಿದೆ. ಕರ್ತವ್ಯದ ಮೇಲಿರುವ ಪೊಲೀಸರಿಗೆ ಕೊರೊನಾ ಸೋಂಕು ತಗುಲುತ್ತಿದೆ. ಇದಕ್ಕಾಗಿ ದಾವಣೆಗೆರೆ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮುಂಜಾಗ್ರಾತಾ ಕ್ರಮಕ್ಕೆ ಮುಂದಾಗಿದ್ದಾರೆ. ಹೌದು, ದಾವಣಗೆರೆಯಲ್ಲಿ ಇಬ್ಬರು ಪೊಲೀಸರು ಹಾಗೂ ಒಬ್ಬ ಸಿಬ್ಬಂದಿಯ ಮಗ ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ತಕ್ಷಣವೇ ಸೂಕ್ತ ಕ್ರಮಕ್ಕೆ ಮುಂದಾಗಿರುವ ಎಸ್‌ಪಿ, ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಜೊತೆಗೆ ಸಂಪರ್ಕಕ್ಕೆ ಬಂದಿದ್ದ 52 ಪ್ರೈಮರಿ ಸಿಬ್ಬಂದಿ ಈಗ ಕ್ವಾರಂಟೈನ್ ಮುಗಿಸಿದ್ದಾರೆ. ಇದರೊಟ್ಟಿಗೆ ಮುಂಜಾಗ್ರತಾ […]
ದಾವಣಗೆರೆ: ರಾಜ್ಯಾದ್ಯಂತ ಕೊರೊನಾದಿಂದ ಪೊಲೀಸ್ ಇಲಾಖೆಗೆ ಭಾರೀ ಪೆಟ್ಟು ಬೀಳುತ್ತಿದೆ. ಕರ್ತವ್ಯದ ಮೇಲಿರುವ ಪೊಲೀಸರಿಗೆ ಕೊರೊನಾ ಸೋಂಕು ತಗುಲುತ್ತಿದೆ. ಇದಕ್ಕಾಗಿ ದಾವಣೆಗೆರೆ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮುಂಜಾಗ್ರಾತಾ ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು, ದಾವಣಗೆರೆಯಲ್ಲಿ ಇಬ್ಬರು ಪೊಲೀಸರು ಹಾಗೂ ಒಬ್ಬ ಸಿಬ್ಬಂದಿಯ ಮಗ ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ತಕ್ಷಣವೇ ಸೂಕ್ತ ಕ್ರಮಕ್ಕೆ ಮುಂದಾಗಿರುವ ಎಸ್‌ಪಿ, ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಜೊತೆಗೆ ಸಂಪರ್ಕಕ್ಕೆ ಬಂದಿದ್ದ 52 ಪ್ರೈಮರಿ ಸಿಬ್ಬಂದಿ ಈಗ ಕ್ವಾರಂಟೈನ್ ಮುಗಿಸಿದ್ದಾರೆ.
ಇದರೊಟ್ಟಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ 1600 ಸಿಬ್ಬಂದಿಯನ್ನ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ಹಾಗೇನೇ ಪ್ರತಿ ವಾರಕ್ಕೊಮ್ಮೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳನ್ನ ರಾಸಾಯನಿಕದಿಂದ ಸ್ವಚ್ಚತೆಗೊಳಿಸಲು ಎಸ್‌ಪಿ ಮುಂದಾಗಿದ್ದಾರೆ.