ಕೊರೊನಾ ಮಧ್ಯೆ Midnight ಖದೀಮರ ಹಾವಳಿ ಹೆಚ್ಚಾಗ್ತಿದೆ ರಾಜಧಾನಿಯಲ್ಲಿ
ಬೆಂಗಳೂರು: ನಗರದ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಠಾಣೆಗಳು ಸೀಲ್ಡೌನ್ ಆಗ್ತಿವೆ. ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಿರುವುದರಿಂದ ರಾತ್ರಿ ವೇಳೆ ಗಸ್ತು ತಿರುಗೋದು ಕಡಿಮೆಯಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಫೀಲ್ಡಿಗಿಳಿದಿರೋ ಲೇಟ್ ನೈಟ್ ಖದೀಮರ ಗ್ಯಾಂಗ್ ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ನಲ್ಲಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 27ರಂದು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ ಮನೆಯತ್ತ ತೆರಳಿದ್ದ ಖಾಸಗಿ ಕಂಪನಿಯ ನೌಕರರನ್ನು ಅಡ್ಡಗಟ್ಟಿ ದರೋಡೆ ಮಾಡಲು ಮುಂದಾಗಿದ್ದಾರೆ. ಎರಡು ಬೈಕ್ಗಳಲ್ಲಿ ಮೂವರಂತೆ ಬಂದು […]
ಬೆಂಗಳೂರು: ನಗರದ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಠಾಣೆಗಳು ಸೀಲ್ಡೌನ್ ಆಗ್ತಿವೆ. ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಿರುವುದರಿಂದ ರಾತ್ರಿ ವೇಳೆ ಗಸ್ತು ತಿರುಗೋದು ಕಡಿಮೆಯಾಗುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡು ಫೀಲ್ಡಿಗಿಳಿದಿರೋ ಲೇಟ್ ನೈಟ್ ಖದೀಮರ ಗ್ಯಾಂಗ್ ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ನಲ್ಲಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 27ರಂದು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ ಮನೆಯತ್ತ ತೆರಳಿದ್ದ ಖಾಸಗಿ ಕಂಪನಿಯ ನೌಕರರನ್ನು ಅಡ್ಡಗಟ್ಟಿ ದರೋಡೆ ಮಾಡಲು ಮುಂದಾಗಿದ್ದಾರೆ.
ಎರಡು ಬೈಕ್ಗಳಲ್ಲಿ ಮೂವರಂತೆ ಬಂದು ಚಾಕು ತೋರಿಸಿ ಅಟ್ಯಾಕ್ ಮಾಡಲು ಬಂದವರ ವಿರುದ್ಧ ಓರ್ವ ಸಂತ್ರಸ್ಥ ಗೌರವ್ ಅಗರ್ವಾಲ್ ಹೋರಾಡಲು ಮುಂದಾದರು. ಇದಕ್ಕೆ ಸಿಟ್ಟಾದ ಖದೀಮರು ಕೈ ಬೆರಳುಗಳಿಗೆ ಚಾಕುವಿನಿಂದ ರಕ್ತ ಬರುವಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇಡೀ ಪ್ರಕರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಂತರ ಗಾಯಗೊಂಡು ಕೆಳಗೆ ಬಿದ್ದ ಯುವಕರನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಜೊತೆಗೆ ಯುವಕರು ಈ ಬಗ್ಗೆ ಕಮಿಷನರ್ ಭಾಸ್ಕರ್ ರಾವ್ಗೆ ನೇರವಾಗಿ ಟ್ವೀಟ್ ಸಹ ಮಾಡಿದರು. ತನಿಖೆ ನಡೆಸುವುದಾಗಿ ರಿಟ್ವೀಟ್ ಮಾಡಿದ್ದ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳುವಂತೆ ಮಡಿವಾಳ ಪೊಲೀಸರಿಗೆ ಸೂಚನೆ ನೀಡಿದ್ದಾರೆ.