ಬೆಂಗಳೂರು: ತಾಳಗುಪ್ಪಾ-ಸಿದ್ದಾಪುರ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆ ಇಂದು ಪೂರ್ಣಗೊಂಡಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಒಮೇಗಾ ಅನಾಲೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿದೆ. ಈ ಸರ್ವೆ ಪ್ರಕ್ರಿಯೆಯಲ್ಲಿ ಯೋಜನೆಯ ವೆಚ್ಚ, ಯೋಜನೆಗೆ ಬೇಕಾಗುವ ಭೂಮಿಯ ಅವಶ್ಯಕತೆ, ಅವಶ್ಯವಿರುವ ರೈಲ್ವೇ ನಿಲ್ದಾಣಗಳ ಸಂಖ್ಯೆ, ರೈಲ್ವೇ ಮಾರ್ಗ ಜೋಡಣೆ ಹಾಗೂ ಇನ್ನಿತರ ಅಂಶವು ಒಳಗೊಂಡಿರುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಸರ್ವೇ ಪ್ರಕ್ರಿಯೆ ಮುಂದಿನ 6 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ನಂತರ ಇದರ ವರದಿ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ಸಲ್ಲಿಕೆ ಆಗಲಿದೆ. ಈ ಯೋಜನೆ ಜಾರಿಗೆ ಬಂದರೆ, ತಾಳಗುಪ್ಪಾದಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಬೆಸೆಯಲಿದೆ.
Budget 2021 | ಅಪೂರ್ಣ ರೈಲ್ವೆ ಯೋಜನೆಗಳು ಹಲವು, ಇನ್ನೆಷ್ಟು ವರ್ಷ ಕಾಯಬೇಕು ಸ್ವಾಮಿ?