ಪೋಷಕರಿಂದ 70 % ಮಾತ್ರವೇ ಶುಲ್ಕ ಪಡೆಯುತ್ತೇವೆ.. ಸರ್ಕಾರದ ನಿರ್ಧಾರ ಸ್ವಾಗತಿಸಿದ ರೂಪ್ಸಾ
ಸರ್ಕಾರದ ಆದೇಶದಂತೆ ಪೋಷಕರಿಂದ ನಾವು ಶೇ.70ರಷ್ಟು ಶುಲ್ಕ ಮಾತ್ರ ಪಡೆಯುತ್ತೇವೆ ಎಂದು ರೂಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವೆ ಬಹಳ ದಿನದಿಂದ ನಡೆಯುತ್ತಿದ್ದ ಶಾಲಾ ಶುಲ್ಕ ಪಾವತಿಯ ವಿಚಾರದಲ್ಲಿನ ಜಟಾಪಟಿಯ ಬಗ್ಗೆ ಇಂದು ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ರೂಪ್ಸಾ ಒಪ್ಪಿಗೆ ಸೂಚಿಸಿದೆ.
ಈ ಬಾರಿ ಶಾಲೆಗಳು, 2019ರ ಬೋಧನಾ ಶುಲ್ಕದ ಶೇ. 70ರಷ್ಟು ಶುಲ್ಕವನ್ನು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಟ್ರಸ್ಟ್ಗಳ ಅಭಿವೃದ್ಧಿಗೆ ಹಣ ತೆಗೆದುಕೊಳ್ಳುವಂತಿಲ್ಲ. ರಾಜ್ಯದ ಎಲ್ಲ ಮಾದರಿ ಶಾಲೆಗಳಿಗೂ ಈ ಶುಲ್ಕ ಅನ್ವಯ ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ ಬೆನ್ನಲ್ಲೇ, ಶಿಕ್ಷಣ ಸಚಿವರ ಈ ತೀರ್ಮಾನವನ್ನು ರೂಪ್ಸಾ ಸ್ವಾಗತಿಸಿದೆ.
ಸರ್ಕಾರದ ಆದೇಶದಂತೆ ಪೋಷಕರಿಂದ ನಾವು ಶೇ.70ರಷ್ಟು ಶುಲ್ಕ ಮಾತ್ರ ಪಡೆಯುತ್ತೇವೆ ಎಂದು ರೂಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ. ಉಪನ್ಯಾಸಕರಿಗೆ ಸಂಬಳ ಕೊಡೋದು ಸ್ವಲ್ಪ ಕಷ್ಟವಾಗುತ್ತೆ. ಆದ್ರೂ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
Published On - 6:02 pm, Fri, 29 January 21