ರಾಜ್ಯದಲ್ಲಿ ಜನವರಿ 31 ರಂದು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ: ಸಚಿವ ಕೆ. ಸುಧಾಕರ್
ರಾಜ್ಯದಲ್ಲಿ ಜನವರಿ 31 ರಂದು 0-5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ
ಬೆಂಗಳೂರು: ರಾಜ್ಯದಲ್ಲಿ ಜನವರಿ 31 ರಂದು 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ B.S. ಯಡಿಯೂರಪ್ಪ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 1 ವರ್ಷದ ಹಿಂದೆ ಹಾಕಿಸಿದ್ದರೂ ಮತ್ತೆ ಪೋಲಿಯೋ ಲಸಿಕೆ ಹಾಕಿಸಬಹುದು. 64 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. 80 ಲಕ್ಷ ಲಸಿಕೆ ಈಗಾಗಲೇ ದಾಸ್ತಾನು ಇದೆ ಎಂದು ಸುಧಾಕರ್ ತಿಳಿಸಿದರು.
ಒಟ್ಟು 49% ಕೋವಿಡ್ ಲಸಿಕೆ ಗುರಿ ತಲುಪಿದ್ದೇವೆ.. ಇದುವರೆಗೆ 2,95,344 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. 546 ಕೋವಿಡ್ ಸೆಷನ್ಸ್ ಮೂಲಕ ಲಸಿಕೆ ಹಾಕಲಾಗಿದೆ. ಒಟ್ಟು 49% ಕೋವಿಡ್ ಲಸಿಕೆ ಗುರಿ ತಲುಪಿದ್ದೇವೆ. ವದಂತಿಗಳಿಗೆ ಹೆದರಿ ಲಸಿಕೆ ಹಾಕಿಸಿಕೊಳ್ಳುವುದರಿಂದ ಹಿಂಜರಿಯಬೇಡಿ. ಲಸಿಕೆ ವರದಾನವಾಗಿ ಸಿಕ್ಕಿದೆ. ಹೀಗಾಗಿ ಯಾವುದೇ ಭಯ ಬೇಡ.
ಕೊರೊನಾ ಯೋಧರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೋವಿಡ್ ಲಸಿಕೆಗೆ ನೀವೇ ಮುಂದೆ ಬರಬೇಕು. ಲಸಿಕೆಯಿಂದ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಕೋವಿಡ್ ಲಸಿಕೆಯಿಂದ ಕೆಲ ಸೈಡ್ ಎಫೆಕ್ಟ್ಸ್ ಆಗಿದೆ. ಆದರೆ ಯಾವುದೇ ಗಂಭೀರ ಅಡ್ಡಪರಿಣಾಮ ಇಲ್ಲ.
ಕೊರೊನಾ ಸಂಪೂರ್ಣವಾಗಿ ಹೋಗಿದೆ ಎಂಬ ಭ್ರಮೆ ಬೇಡ ಕೊರೊನಾ ಸೋಂಕು ಸಂಪೂರ್ಣವಾಗಿ ಹೋಗಿದೆ ಎಂಬ ಭ್ರಮೆ ಬೇಡ. ಬೇರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಲಸಿಕೆ ಇದ್ದು ತೆಗೆದುಕೊಳ್ಳದಿದ್ದರೆ ಹೇಗೆ. ಲಸಿಕೆ ನಿರ್ಲಕ್ಷ್ಯ ಮಾಡಿದ್ರೆ ನಿಮಗೆ ನೀವೇ ಹೊಣೆಗಾರರು. ಜನರಲ್ಲಿ ಭಯ ಹೋಗಲಾಡಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು, 500 ರಾಯಭಾರಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
Published On - 5:39 pm, Fri, 29 January 21