ಮಂಡ್ಯ: ಕೆರೆಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಬಿಲ್ಲೇನಹಳ್ಳಿ ಬಳಿ ಇರುವ ಗವಿ ರಂಗನಾಥಸ್ವಾಮಿ ದೇವಾಲಯದ ಕೆರೆಯ ಸಮೀಪದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯ ಹೊಳಲು ಗ್ರಾಮದ ನಿವಾಸಿಗಳಾದ ಭರತ್(22) ಮತ್ತು ವಿನೋದ್(21) ನೀರುಪಾಲಾದವರು. ನಾಲ್ವರು ಸ್ನೇಹಿತರ ಜೊತೆ ಭರತ್ ಮತ್ತು ವಿನೋದ್ ದೇವಾಲಯಕ್ಕೆ ಬಂದಿದ್ದು, ಈ ವೇಳೆ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ.
ರಂಗನಾಥಸ್ವಾಮಿ ದೇವಾಲಯದ ಕೆರೆ
ಅಗ್ನಿಶಾಮಕದಳ, ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದ್ದು, ಸದ್ಯ ಕೆ. ಆರ್. ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.