ಹಲವು ಪ್ರಶ್ನೆ ಹುಟ್ಟಿಸಿದ ತೇಜಸ್ವಿನಿ ಅನಂತ್​ಕುಮಾರ್​ ಟ್ವೀಟ್​; ಇಲ್ಲಿರುವ ಆ ‘ನಾಯಕ’ ಯಾರು?

| Updated By: Lakshmi Hegde

Updated on: Jun 03, 2021 | 12:43 PM

ಬೆಂಗಳೂರು ದಕ್ಷಿಣ ಸಂಸದರಾಗಿದ್ದ, ಕೇಂದ್ರ ಸಚಿವರಾಗಿದ್ದ ಅನಂತ್​ ಕುಮಾರ್​ ಅವರು 2018ರಲ್ಲಿ ಮೃತಪಟ್ಟ ನಂತರ ಆ ಕ್ಷೇತ್ರದಿಂದ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೇ ಟಿಕೆಟ್​ ನೀಡಲಾಗುತ್ತದೆ ಎಂದೇ ಅನೇಕರು ನಿರೀಕ್ಷೆ ಮಾಡಿದ್ದರು.

ಹಲವು ಪ್ರಶ್ನೆ ಹುಟ್ಟಿಸಿದ ತೇಜಸ್ವಿನಿ ಅನಂತ್​ಕುಮಾರ್​ ಟ್ವೀಟ್​; ಇಲ್ಲಿರುವ ಆ ‘ನಾಯಕ’ ಯಾರು?
ತೇಜಸ್ವಿನಿ ಅನಂತ್​ಕುಮಾರ್​
Follow us on

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ ಕುಮಾರ್ ಅವರು ನಿನ್ನೆ (ಬುಧವಾರ) ಮಾಡಿದ ಟ್ವೀಟ್​ವೊಂದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ಆ್ಯಂಡಿ ಸ್ಟಾನ್ಲಿ ಅವರ ಕೋಟ್​​ವೊಂದನ್ನು ತೇಜಸ್ವಿನಿ ಅನಂತ್​ಕುಮಾರ್​ ಟ್ವೀಟ್​ ಮಾಡಿದ್ದು, ಅದು ‘ನಾಯಕತ್ವ’ ‘ನಾಯಕ’ನ ಬಗ್ಗೆಯಾಗಿದೆ. ‘ಯಾರ ಮಾತನ್ನೂ ಕೇಳಲು ಇಷ್ಟಪಡದ ನಾಯಕನ ಸುತ್ತ, ಸಾಮಾನ್ಯವಾಗಿ ಏನನ್ನೂ ಹೇಳಲು ಇಷ್ಟಪಡದವರೇ ಇರುತ್ತಾರೆ’ ಎಂಬ ಟ್ವೀಟ್ ಇದಾಗಿದೆ. ಆ್ಯಂಡಿ ಸ್ಟಾನ್ಲಿ ಅವರ ಈ ಕೋಟ್​​ನೊಂದಿಗೆ, ಸಮಾಜದ ಪ್ರತಿ ವಲಯಕ್ಕೂ ಇದು ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.  ಜನರು ಇದನ್ನು ನಾನಾ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ‘ನೀವು ಯಾರಿಗೆ ಹೇಳಲು ಹೊರಟಿದ್ದೀರಿ ಎಂಬುದು ಗೊತ್ತಾಯಿತು ಮೇಡಂ..’ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದರಾಗಿದ್ದ, ಕೇಂದ್ರ ಸಚಿವರಾಗಿದ್ದ ಅನಂತ್​ ಕುಮಾರ್​ ಅವರು 2018ರಲ್ಲಿ ಮೃತಪಟ್ಟ ನಂತರ ಆ ಕ್ಷೇತ್ರದಿಂದ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೇ ಟಿಕೆಟ್​ ನೀಡಲಾಗುತ್ತದೆ ಎಂದೇ ಅನೇಕರು ನಿರೀಕ್ಷೆ ಮಾಡಿದ್ದರು. ಆದರೆ ಕೊನೆಗೆ ತೇಜಸ್ವಿಸೂರ್ಯ ಅವರಿಗೆ ಕೇಂದ್ರ ಟಿಕೆಟ್​ ನೀಡಿತ್ತು. ಇದನ್ನು ಅನಂತ್​ಕುಮಾರ್​ ಅಭಿಮಾನಿಗಳು ಅಷ್ಟುಬೇಗ ಒಪ್ಪದಿದ್ದರೂ, ತೇಜಸ್ವಿನಿ ಅನಂತ್​ಕುಮಾರ್​ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆ ವೇಳೆ ತೇಜಸ್ವಿ ಸೂರ್ಯ ಪರ ಬಿಜೆಪಿ ನಾಯಕರೊಂದಿಗೆ ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಅವರೆಂದೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ತೇಜಸ್ವಿ ಸೂರ್ಯ ಸೇರಿ ಯಾವುದೇ ಬಿಜೆಪಿ ನಾಯಕರ ವಿರುದ್ಧ ಮಾತನಾಡಿದವರೂ ಅಲ್ಲ. ನಂತರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಲಾಯಿತಾದರೂ, ತಾವಾಯಿತು ತಮ್ಮ ಸಮಾಜ ಸೇವೆಯಾಯಿತು ಎಂಬಂತೆ ಜೀವಿಸುತ್ತಿದ್ದಾರೆ.

ಇದೀಗ ತೇಜಸ್ವಿನಿ ಅನಂತ್​ಕುಮಾರ್ ಮಾಡಿದ ಟ್ವೀಟ್​ ಸಿಕ್ಕಾಪಟೆ ಚರ್ಚೆ ಹುಟ್ಟುಹಾಕಿದೆ. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಾಯಕತ್ವದ ಟ್ವೀಟ್​ ನರೇಂದ್ರ ಮೋದಿಯವರಿಗೆ ಅನ್ವಯ ಆಗುತ್ತದೆಯಾ ಎಂಬ ಪ್ರಶ್ನೆಗಳನ್ನೂ ನೆಟ್ಟಿಗರು ಎತ್ತಿದ್ದಾರೆ.

ಇದನ್ನೂ ಓದಿ: BS Yediyurappa: ಇಂದು ಸಂಜೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ; ವಿಷಯವೇನು?

Published On - 12:41 pm, Thu, 3 June 21