ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳಕ್ಕೆ ನಂದಿ ಗ್ರಾಮದ ಅರ್ಚಕ ಬಲಿ

ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳ ತಾಳಲಾಗದೆ ಸಾವಿಗೆ ಕಾರಣರಾದವರ ಬಗ್ಗೆ ವಿಡಿಯೋ ಮಾಡಿ ಅರ್ಚಕ ಕೆ.ವಿ.ರಾಘವೇಂದ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳಕ್ಕೆ ನಂದಿ ಗ್ರಾಮದ ಅರ್ಚಕ ಬಲಿ
ಆತ್ಮಹತ್ಯೆ ಮಾಡಿಕೊಂಡ ಅರ್ಚಕ ಕೆ.ವಿ.ರಾಘವೇಂದ್ರ

Updated on: Jan 08, 2021 | 9:46 AM

ಚಿಕ್ಕಬಳ್ಳಾಪುರ: ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಅರ್ಚಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಲ್ತಾನ್​ಪೇಟೆಯಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಅರ್ಚಕ ಕೆ.ವಿ.ರಾಘವೇಂದ್ರ(32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳ ತಾಳಲಾಗದೆ ಸಾವಿಗೆ ಕಾರಣರಾದವರ ಬಗ್ಗೆ ವಿಡಿಯೋ ಮಾಡಿ ಅರ್ಚಕ ಕೆ.ವಿ.ರಾಘವೇಂದ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನಂದಿ ಗ್ರಾಮದ ಮಾರಮ್ಮ ದೇವಸ್ಥಾನ ಮತ್ತು ಸುಲ್ತಾನಪೇಟೆಯ ಸಪ್ಪಲಮ್ಮ ದೇವಸ್ಥಾನದ ಅರ್ಚಕರಾಗಿದ್ರು.

ಸಾಲ ನೀಡಿದ್ದ ನಂದಿಯ ಜೆ.ಸಿ.ಬಿ ಮಂಜು, ವಿಜೇಂದ್ರ ಬಾಬು, ಪ್ರಾಧ್ಯಾಪಕ ರಾಮಚಂದ್ರ, ಎನ್.ಎಂ.ಮುನಿರಾಜು, ಎನ್.ಎಲ್ ನರೇಂದ್ರ ಬಾಬು ನಾಲ್ಕು ಪಟ್ಟು ಮೀಟರ್ ಬಡ್ಡಿ ಹೆಚ್ಚಿಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಗನನ್ನು ಕೊಂದು, ನೇಣಿಗೆ ಶರಣಾದ ಅರ್ಚಕನ ಪತ್ನಿ.. ಎಲ್ಲಿ?