ದಾವಣಗೆರೆ: ದೇವಾಲಯದ ಗೋಪುರವನ್ನು ದುಷ್ಕರ್ಮಿಗಳು ಹಾನಿ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಡದನಹಂಕಲು ಗ್ರಾಮದ ಬಳಿ ಸಂಭವಿಸಿದೆ. ಗಂಡದನಹಂಕಲು ಗ್ರಾಮದ ಬಳಿ ಇರುವ ರಂಗಯ್ಯನಗಿರಿ ಅರಣ್ಯದಲ್ಲಿ ಐತಿಹಾಸಿಕ ಕೋಟೆಕಲ್ಲು ಮಗನಾಥ ಸ್ವಾಮಿ ದೇವಾಲಯವಿದೆ. ಈ ದೇವಾಲಯದ ಗೋಪುರಕ್ಕೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ದುಷ್ಕರ್ಮಿಗಳು ದೇವಾಲಯದ ಗೋಪುರದ ಜೊತೆಗೆ ಗೋಪುರದ ಪಕ್ಕದಲ್ಲಿರುವ ಶಿಲಾ ಗೊಂಬೆಗಳಿಗೆ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಾಲಯ ಅರಣ್ಯದಲ್ಲಿರುವುದರಿಂದ ನಿರಂತರವಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ದಕ್ಷಿಣ ಕಾಶಿ ಎಂದೆ ಖ್ಯಾತಿಯಾಗಿರುವ ಇತಿಹಾಸ ಪ್ರಸಿದ್ಧ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಭೋಗನಂದೀಶ್ವರ ದೇವಸ್ಥಾನದ ನಂದಿ ವಿಗ್ರಹದ ಬಲಗಾಲನ್ನು ದುಷ್ಕರ್ಮಿಗಳು ಮುರಿದಿದ್ದು, ದೇವರ ಕಲ್ಲಿನ ಕಾಲಿನ ಸಮೇತ ಪರಾರಿಯಾಗಿದ್ದರು. ನಂದಿಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧವಾದದ್ದು. ಆದರೆ ಈ ದೇವಾಲಯದ ಆವರಣದಲ್ಲಿರುವ ಕಮಟೇಶ್ವರ ಶಿವಲಿಂಗದ ಮುಂದೆ ಇರುವ ನಂದಿಯ ಬಲಗಾಲನ್ನು ಕಡಿದು, ವಿಕೃತಿ ಮರೆದಿದ್ದರು.
(temple tower has been damaged by Perpetrators in Davanagere)
ಇದನ್ನೂ ಓದಿ
ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸ್ಥಳ ಫಿಕ್ಸ್; ವಾರ್ತಾ ಇಲಾಖೆ ಆಯುಕ್ತರಿಂದ ಸ್ಥಳ ಪರಿಶೀಲನೆ
ಯೇಸು ಕ್ರಿಸ್ತನ ಪುನರುತ್ಥಾನ: ಶಿಲುಬೆಗೇರಿ ಸಮಾಧಿ ಸೇರಿದಾತ ಮತ್ತೆ ಎದ್ದು ಬಂದ ರೋಚಕ ಕತೆ
Published On - 12:18 pm, Sun, 4 April 21