Thank you Bangalore: ಕಾರ್ಯಕರ್ತರಿಂದ ಸ್ಮರಣೀಯ ಸ್ವಾಗತ, ಧನ್ಯವಾದ ಬೆಂಗಳೂರು : ಪ್ರಧಾನಿ ಮೋದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2022 | 12:06 PM

ಈ ಡೈನಾಮಿಕ್ ಸಿಟಿಗೆ ಸ್ಮರಣೀಯ ಸ್ವಾಗತಕ್ಕಾಗಿ ಬೆಂಗಳೂರಿಗೆ ಧನ್ಯವಾದಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇದೆ. ಈ ಶಕ್ತಿಯನ್ನು ನೋಡಿ ಒಂದು ಆಶಾ ಭಾವನೆ ಮೂಡಿದೆ ಎಂದು ಹೇಳಿದ್ದಾರೆ.

Thank you Bangalore: ಕಾರ್ಯಕರ್ತರಿಂದ ಸ್ಮರಣೀಯ ಸ್ವಾಗತ, ಧನ್ಯವಾದ ಬೆಂಗಳೂರು : ಪ್ರಧಾನಿ ಮೋದಿ
PM Modi
Follow us on

ಶುಕ್ರವಾರದಂದು ಅಂದರೆ ನಿನ್ನೆ ಪ್ರಧಾನಿ ಮೋದಿ ಅನೇಕ ಕಾರ್ಯಕ್ರಮಗಳ ಲೋಕರ್ಪಣೆ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು, ಈ ಸಮಯದಲ್ಲಿ ಹೋಗುವ ದಾರಿಯಲ್ಲಿ ಕಾರ್ಯಕರ್ತರನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರನ್ನು ನಿಲ್ಲಿಸಿ ವಿಧಾನಸೌಧ ಸಮೀಪವಿರುವ ಕರ್ನಾಟಕ ಲೋಕಸೇವಾ ಆಯೋಗದ ಕಚೇರಿ ಬಳಿ ಮತ್ತು ಬೆಂಗಳೂರಿನ ಪ್ರಮುಖ ಟ್ರಾಫಿಕ್ ಜಂಕ್ಷನ್‌ನಲ್ಲಿ ಪಕ್ಷದ ಕಾರ್ಯಕರ್ತರತ್ತ ಕೈ ಬೀಸಿದರು.

ಪ್ರಧಾನಿ ಮೋದಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣಕ್ಕೆ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ ಗೌರವ್ ಕಾಶಿ ದರ್ಶನ ರೈಲುಗಳ ಉದ್ಟಾಟನೆಗೆ ತೆರಳುತ್ತಿದ್ದರು. ತಮ್ಮ ಕಾರಿನ ರನ್ನಿಂಗ್ ಬೋರ್ಡ್ ಮೇಲೆ ನಿಂತು ಮೋದಿ ಜನರ ಬಳಿ ಬಂದು ಕೈಬಿಸಿದರು. ಕಾರ್ಯಕರ್ತರು ಮೋದಿ, ಮೋದಿ ಘೋಷಣೆಗಳನ್ನು ಕೂಗುತ್ತಾ ಜೊತೆಗೆ ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡು ಮೋದಿಯನ್ನು ಸ್ವಾಗತಿಸಿದರು.

ಇದನ್ನು ಓದಿ: ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿಯ ವಿಶೇಷ ಫೋಟೋಗಳು ಇಲ್ಲಿವೆ

ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2 ಉದ್ಘಾಟನೆಗೆ ಮಾಡಿ. ಮೋದಿ ಕೆಎಸ್‌ಆರ್ ರೈಲು ನಿಲ್ದಾಣದ ಬಳಿಯ ಪ್ರಮುಖ ಟ್ರಾಫಿಕ್ ಜಂಕ್ಷನ್‌ನಲ್ಲಿ ವಾಹನದಿಂದ ಇಳಿದು, ಮೋದಿಯನ್ನು ನೋಡಲು ಬಂದಿದ್ದ ಜನರತ್ತ ಹೆಜ್ಜೆ ಹಾಕಿದರು. ಈ ಡೈನಾಮಿಕ್ ಸಿಟಿಗೆ ಸ್ಮರಣೀಯ ಸ್ವಾಗತಕ್ಕಾಗಿ ಬೆಂಗಳೂರಿಗೆ ಧನ್ಯವಾದಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇದೆ. ಈ ಶಕ್ತಿಯನ್ನು ನೋಡಿ ಒಂದು ಆಶಾ ಭಾವನೆ ಮೂಡಿದೆ ಎಂದು ಹೇಳಿದ್ದಾರೆ.

 

Published On - 12:01 pm, Sat, 12 November 22