ಎಸ್ಡಿಪಿಐ ಸಮಾವೇಶ ಬಳಿ ಪೊಲೀಸ್​ರಿಗೆ ನಿಂದಿಸಿದ ಪ್ರಕರಣ; ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನ

| Updated By: ವಿವೇಕ ಬಿರಾದಾರ

Updated on: May 31, 2022 | 6:11 PM

ಎಸ್ಡಿಪಿಐ ಸಮಾವೇಶ ಬಳಿ ಪೊಲೀಸ್​ರಿಗೆ ನಿಂದಿಸಿದ ಪ್ರಕರಣದ ವಿಚಾರವಾಗಿ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸುವಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಎಸ್ಡಿಪಿಐ ಸಮಾವೇಶ ಬಳಿ ಪೊಲೀಸ್​ರಿಗೆ ನಿಂದಿಸಿದ ಪ್ರಕರಣ; ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಎಸ್ಡಿಪಿಐ (SDPI) ಸಮಾವೇಶ ಬಳಿ ಪೊಲೀಸ್​ರಿಗೆ (Police) ನಿಂದಿಸಿದ ಪ್ರಕರಣದ ವಿಚಾರವಾಗಿ ಆರೋಪಿಗಳನ್ನು  ಬೆಂಗಳೂರಿನಲ್ಲಿ (Bengaluru) ಬಂಧಿಸುವಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಗೆ ಯತ್ನಿಸಿದ್ದ ಆರೋಪಿ‌ ನೌಷಾದ್ ಮೂವರನ್ನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.  ಮಂಗಳೂರು ಪೊಲೀಸರ ದೂರಿನ ಮೇರೆಗೆ ಪೋಲಿಸರು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆರೋಪಿ‌ ನೌಷಾದ್  ಮಡಿವಾಳದ ರೂಮೊಂದರಲ್ಲಿ ಇದ್ದನು.  ಬಂಧನದ ವೇಳೆ ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಲು ಯತ್ನಸಿದ್ದಾನೆ. ಇದಕ್ಕೆ ಸಹಕರಿಸಿದ ರೂಮ್ ಮೇಟ್ಸ್ ಕೂಡಾ ಅರೆಸ್ಟ್ ಆಗಿದ್ದಾರೆ.

ಮೇ 27 ರಂದು ಕಣ್ಣೂರಿನ ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಕೆಟಿಎಂ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು, ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು, ಕಾರು ಚಾಲಕ ಹಾಗೂ ಇತರರು ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿ ಘೋಷಣೆಗಳನ್ನು ಕೂಗಿರುವ ವೀಡಿಯೋ ವೈರಲ್‌ ಆಗಿತ್ತು. ನಿಂದಿಸಿದ ವ್ಯಕ್ತಿಗಳ ಪೈಕಿ ಓರ್ವ ಕೈಯಲ್ಲಿ ಎಸ್‌ಡಿಪಿಐ ಧ್ವಜ ಹಿಡಿದುಕೊಂಡಿದ್ದ.

ಇದನ್ನು ಓದಿ: ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಮುಂಗಾರು ಮಳೆ; ಈ ಮಾನ್ಸೂನ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ

ಕಾರ್ಯಕ್ರಮದ ಬಂದೋಬಸ್ತ್‌ನಲ್ಲಿದ್ದ ಪೊಲೀಸ್‌ ಸಿಬಂದಿಗಳಿಗೆ ಪಡೀಲ್‌ ಕಡೆಯಿಂದ ಬಂದ ಆರೋಪಿಗಳು ಬ್ಯಾರಿ ಭಾಷೆಯಲ್ಲಿ ನಿಂದಿಸುತ್ತಾ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಅದರೊಂದಿಗೆ ಕರ್ತವ್ಯನಿರತರಾಗಿದ್ದ ಪಿ.ಸಿ. ಸಂಗನಗೌಡ ಅವರ ಮೇಲೆ ವಾಹನ ಹತ್ತಿಸಲು ಮುಂದಾಗಿದ್ದಾರೆ. ಅವರು ಪಕ್ಕಕ್ಕೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ.ಬಿ ಅವರು ದೂರು ನೀಡಿದ್ದರು.ಕರ್ತವ್ಯನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ನಿಂದಿಸಿ ಪೊಲೀಸರ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರಿದ ಶಾಲೆಯ ಮೆಟ್ಟಿಲನ್ನು ಹತ್ತದ ಬೆಂಗಳೂರಿನ ಬಾಲಕ

ಈ ಕೃತ್ಯ ಎಸಗಿದ ಆರೋಪಿಗಳು ಬೆಂಗಳೂರಿನಲ್ಲಿ ತೆಲೆಮರಿಸಿಕೊಂಡಿದ್ದರು. ಈ ಸಂಭಂದ ಮಂಗಳೂರು ಪೊಲೀಸರು ಬೆಂಗಳೂರಿನ ಪೊಲೀಸರಿಗೆ ತಿಳಿಸಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಆರೋಪಿಗಳನ್ನು ಇಂದು (ಮೇ 31) ರಂದು ಬಂಧಿಸಲು ಯತ್ನಿಸಿದಾಗ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದರು. ಆಗ ಅವರನ್ನು ಸೆದೆ ಬಡೆದ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ