
ರಾಯಚೂರು: ಸೂರ್ಯಕಾಂತಿ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬೆಳೆನಾಶವಾದ ಘಟನೆ ಪರಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಶ್ರಿದೇವಿ ಎನ್ನುವವರ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಒಟ್ಟೂ 26 ಎಕರೆ ಜಮೀನಿನಲ್ಲಿ ಶ್ರಿದೇವಿ ಸೂರ್ಯಕಾಂತಿ ಬೆಳೆ ಬೆಳೆಯುತ್ತಿದ್ದರು. ಆಕಸ್ಮಿಕವಾಗಿ ಜಮೀನಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸೂರ್ಯಪಾನ ನಾಶವಾಗಿದೆ. ಬೆಂಕಿಯ ಜ್ವಾಲೆ ವೇಗವಾಗಿದ್ದ ಕಾರಣ ಪಕ್ಕದಲ್ಲಿದ್ದ ಜಮೀನಿಗೂ ಬೆಂಕಿ ವಿಸ್ತರಣೆಗೊಂಡಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಬೆಂಕಿ ಆರಿಸಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದ್ದೆ ಮೇಲಿನ ವಿದ್ಯುತ್ ತಂತಿ ತಗುಲಿ ಕಟಾವಿಗೆ ಬಂದಿದ್ದ 8 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ