
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗಿದ್ದು ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಈ ಹಿನ್ನೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ನಿಯಮ ಸಡಿಲಗೊಳಿಸಿದ್ದು, ಮೋಟಾರು ವಾಹನ ತೆರಿಗೆ ಪಾವತಿಗೆ ಮೇ 15ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಲಾಗಿದೆ. ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳನ್ನು ಹೊರತುಪಡಿಸಿ) ದಿನಾಂಕ 15.04.2021 ರೊಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ಪಾವತಿಸಲು ಈ ಹಿಂದೆ 30.04.2021ರ ವರೆಗೆ ಅವಕಾಶ ನೀಡಲಾಗಿತ್ತು. ಅದನ್ನೀಗ ದಿನಾಂಕ 15.05.2021 ರ ತನಕ ದಂಡರಹಿತವಾಗಿ ಪಾವತಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಜತೆಗೆ, ದಂಡ ಸಹಿತವಾಗಿ ಪಾವತಿಸಲು 31.05.2021 ರವರೆಗೆ ಅವಕಾಶ ನೀಡಲಾಗಿದ್ದು ಈ ಬಗ್ಗೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮೋಟಾರು ವಾಹನ ಪ್ರಮಾಣಪತ್ರಗಳ ಸಂಬಂಧ ಈ 18 ಸೇವೆಗೆ ಇನ್ನು ಆಧಾರ್ ದೃಢೀಕರಣವಷ್ಟೇ ಸಾಕು