ಬಿಮ್ಸ್ ಆಸ್ಪತ್ರೆಯ ಮತ್ತೊಂದು ಮಹಾ ಎಡವಟ್ಟು, ಸೋಂಕಿತರ ಆರೈಕೆಗೆ ಕುಟುಂಬಸ್ಥರಿಗೆ ಅವಕಾಶ
ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ನಾನಾ ಸರ್ಕಸ್ ಮಾಡ್ತಿದೆ. ಆದರೆ ಆಸ್ಪತ್ರೆಗಳೇ ಈ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿವೆ. ಕುಂದಾನಗರಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳಲು ಹಾಗೂ ಆರೈಕೆ ಮಾಡಲು ಕುಟುಂಬಸ್ಥರೇ ಮುಂದಾಗಿದ್ದರೆ.
ಬೆಳಗಾವಿ: ಕೊರೊನಾ ವಿಪತ್ತಿನ ನಡುವೆ ಆಸ್ಪತ್ರೆಗಳ ನಿರ್ಲಕ್ಷ್ಯ ಹೆಚ್ಚಾಗಿದೆ. ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡದಿರುವುದು, ಅವರಿಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಅನೇಕ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯದ್ದೇ ಎಂದು ಕೇಳಲಾದ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು. ಇಬ್ಬರು ರೋಗಿಗಳನ್ನ ಒಂದೇ ಬೆಡ್‌ನಲ್ಲಿ ಮಲಗಿಸಿ ಚಿಕಿತ್ಸೆ ನೀಡ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿಯಾದಂತಹ ಮತ್ತೊಂದು ಮಹಾ ಎಡವಟ್ಟು ಬಯಲಾಗಿದೆ.
ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ನಾನಾ ಸರ್ಕಸ್ ಮಾಡ್ತಿದೆ. ಆದರೆ ಆಸ್ಪತ್ರೆಗಳೇ ಈ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿವೆ. ಕುಂದಾನಗರಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳಲು ಹಾಗೂ ಆರೈಕೆ ಮಾಡಲು ಕುಟುಂಬಸ್ಥರೇ ಮುಂದಾಗಿದ್ದರೆ. ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗೆ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ. ಬಿಮ್ಸ್ ಆಸ್ಪತ್ರೆ ಮೆಡಿಕಲ್ ವಾರ್ಡ್‌ನಲ್ಲಿ ಸೋಂಕಿತರ ಸಂಬಂಧಿಕರು ನಿಂತು ಮಾತಾಡುವ ವಿಡಿಯೋ ವೈರಲ್ ಆಗಿದೆ.
ಕೊರೊನಾ ಸೋಂಕಿತರ ಆರೈಕೆ ಬಳಿಕ ಸಂಬಂಧಿಕರು ಹೊರಬಂದು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಸೋಂಕು ಹರಡು ಆತಂಕ ಶುರುವಾಗಿದೆ. ಸಾಮಾನ್ಯವಾಗಿ ಕೊರೊನಾ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಹೋಗುವುದರಿಂದ ಸೋಂಕು ತಮಗೂ ತಗುಲುವ ಭಯವಿರುತ್ತೆ. ಆದ್ರೆ ಈ ಆಸ್ಪತ್ರೆಯಲ್ಲಿ ಸೋಂಕಿತರ ವಾರ್ಡ್ನೊಳಗೆ ಹೋಗಲು ಸಂಬಂಧಿಕರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಅಟೆಂಡರ್ಗಳು ಸಹ ಸೋಂಕಿತರ ಆರೈಕೆ ಬಳಿಕ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದರಿಂದ ಈಗ ಮತ್ತಷ್ಟು ಆತಂಕ ಎದುರಾಗಿದ್ದು ಇವರ ಈ ಬೇಜವಾಬ್ದಾರಿತನಕ್ಕೆ ಮುಂದೆ ದೊಡ್ಡ ಅನಾವುತವಾದರೂ ಆಶ್ಚರ್ಯವಿಲ್ಲ.
ಇದನ್ನೂ ಓದಿ: ಖಾಕಿಗೆ ಶುರುವಾಗಿದೆ ಕೊವಿಡ್ ಕಂಟಕ; ಬಾಗಲಕೋಟೆ ಜಿಲ್ಲೆಯ 26 ಪೊಲೀಸರಿಗೆ ಕೊರೊನಾ ಧೃಡ