ಕೊರೊನಾಕ್ಕೆ ಚಿಕಿತ್ಸೆ ಪಡೆದಿದ್ದ ಲ್ಯಾಬ್ ಟೆಕ್ನಿಷಿಯನ್​ಗೆ ಮಾತನಾಡಲೂ ಆಗುತ್ತಿಲ್ಲ.. ನಡೆಯಲೂ ಸಾಧ್ಯವಾಗ್ತಿಲ್ಲ

ಭರತ್​ ಕಾಲನಿಯ ನಿವಾಸಿಯಾಗಿರುವ ಕಾಳಾನಾಯ್ಕ್​, ಬಿಳಚೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್​ ಟೆಕ್ನೀಷಿಯನ್​ ಆಗಿದ್ದರು. ನಾಲ್ಕು ತಿಂಗಳ ಹಿಂದೆ ಕೊರೊನಾಕ್ಕೆ ತುತ್ತಾಗಿ, ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೊರೊನಾಕ್ಕೆ ಚಿಕಿತ್ಸೆ ಪಡೆದಿದ್ದ ಲ್ಯಾಬ್ ಟೆಕ್ನಿಷಿಯನ್​ಗೆ ಮಾತನಾಡಲೂ ಆಗುತ್ತಿಲ್ಲ.. ನಡೆಯಲೂ ಸಾಧ್ಯವಾಗ್ತಿಲ್ಲ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Jan 09, 2021 | 1:25 PM

ದಾವಣಗೆರೆ: ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದಿದ್ದ ಲ್ಯಾಬ್ ಟೆಕ್ನಿಷಿಯನ್ ಆರೋಗ್ಯ ಹದಗೆಟ್ಟಿರುವ ಪ್ರಕರಣ ಜಗಳೂರು ತಾಲೂಕಿನ ಬಿಳಚೋಡುವಿನಲ್ಲಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಬಳಿಕ ಅವರಿಗೆ ಮಾತನಾಡಲೂ ಆಗುತ್ತಿಲ್ಲ, ನಡೆದಾಡಲೂ ಸಾಧ್ಯವಾಗುತ್ತಿಲ್ಲ.

ಭರತ್​ ಕಾಲನಿಯ ನಿವಾಸಿಯಾಗಿರುವ ಕಾಳಾ ನಾಯ್ಕ್​, ಬಿಳಚೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್​ ಟೆಕ್ನಿಷಿಯನ್​ ಆಗಿದ್ದರು. ನಾಲ್ಕು ತಿಂಗಳ ಹಿಂದೆ ಕೊರೊನಾ ಬಂದಿತ್ತು. ಅದಕ್ಕೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಪಡೆದು ಮನೆಗೆ ಬಂದ ಅವರಿಗೆ ರಿಯಾಕ್ಷನ್ ಆಗಿದೆ. ಇದೀಗ ಮಾತನಾಡಲು, ನಡೆದಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕೊರೊನಾ ವಾರಿಯರ್ ಆಗಿದ್ದ ಕಾಳಾ ನಾಯ್ಕ್​ ಇದೀಗ ಮನೆಯಲ್ಲೇ ಇದ್ದಾರೆ. ಜೀವವಿದ್ದರೂ ವಸ್ತುವಿನಂತಾಗಿದ್ದಾರೆ.

ಭಾರತ್​ ಬಯೋಟೆಕ್​ ಲಸಿಕೆ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದು ಕೂತ ಕಾಂಗ್ರೆಸ್ ಆಡಳಿತ ರಾಜ್ಯಗಳು!